ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಶಶಾಂಕ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ, ಬೃಂದಾ ಆಚಾರ್ಯ, ಮಿಲನ ನಾಗರಾಜ್, ನಾಗಭೂಷಣ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ “ಕೌಸಲ್ಯಾ ಸುಪ್ರಜಾ ರಾಮ’. ಈಗಾಗಲೇ ಚಿತ್ರದ ಟ್ರೇಲರ್ ಹಾಗೂ ಮೂರು ಹಾಡುಗಳು ರಿಲೀಸ್ ಆಗಿದ್ದು, ಸಿನಿಪ್ರಿಯರನ್ನು ಸೆಳೆಯುವಲ್ಲಿ ಸಕ್ಸಸ್ ಆಗಿದೆ. ಇತ್ತೀಚೆಗಷ್ಟೆ ಚಿತ್ರತಂಡ ನಾಲ್ಕನೇ ಹಾಡು ಬಿಡುಗಡೆ ಮಾಡಿದೆ.

ಇದನ್ನೂ ಓದಿ: ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದ ಮಾಸ್ ಪೋಸ್ಟರ್ ರಿಲೀಸ್; ಟೀಸರ್ ಡೇಟ್ ಬಹಿರಂಗಪಡಿಸಿದ ಚಿತ್ರತಂಡ
“90 ಹೊಡಿ ಕಿಟ್ಟಪ್ಪ’ ಎಂದು ಸಾಗುವ ಹೆಣ್ಣುಮಕ್ಕಳ ಪಾರ್ಟಿ ಸಾಂಗ್ ಇದು. ನಿರ್ದೇಶಕ ಶಶಾಂಕ್, “16 ವರ್ಷಗಳಲ್ಲಿ 10ನೇ ಸಿನಿಮಾಗಳನ್ನು ನಿರ್ದೇಶಿಸಿದ್ದೇನೆ. ಕಳೆದ ಒಂಬತ್ತು ಚಿತ್ರಗಳಿಗಿಂತ ಈ ಚಿತ್ರದಲ್ಲಿ ಮನರಂಜನೆ ಹೆಚ್ಚು. ಯೂತ್ುಲ್ ್ಯಾಮಿಲಿ ಎಂಟರ್ಟೇನರ್ ಸಿನಿಮಾ. ಎಲ್ಲರಿಗೂ ಒಂದಲ್ಲಾ ಒಂದು ರೀತಿ ನನ್ನ ಕಥೆ ಅಂತನ್ನಿಸುತ್ತದೆ. ಸಿನಿಮಾ ನೋಡಿದ ಕೆಲ ದಿನಗಳವರೆಗೂ ಕಾಡುವ ಚಿತ್ರ’ ಎಂದು ಹೇಳಿಕೊಂಡರು. ಬಳಿಕ ನಾಯಕ ಕೃಷ್ಣ, “ಇತ್ತೀಚಿನ ದಿನಗಳಲ್ಲಿ ನಾನು ಕೇಳಿದ ಅತ್ಯುತ್ತಮ ಕಥೆಯಿದು. ಮಕ್ಕಳು ಅಪ್ಪ&ಅಮ್ಮ ಜತೆ ಬಂದು ಸಿನಿಮಾ ನೋಡಿ, ಹೆಂಗಸರು ಪತಿಯ ಜತೆ ಥಿಯೇಟರ್ಗೆ ಬನ್ನಿ. ಎಲ್ಲರನ್ನೂ ಯೋಚನೆಗೀಡು ಮಾಡುವ ಚಿತ್ರ’ ಎಂದರು.

ಇದನ್ನೂ ಓದಿ: ‘ಜವಾನ್’ ಸಿನಿಮಾದ ಹಾಡಿಗೆ ಸಾವಿರ ಯುವತಿಯರೊಂದಿಗೆ ನೃತ್ಯ ಮಾಡಲಿದ್ದಾರಾ ಶಾರುಖ್ ಖಾನ್ ?!
ನಾಯಕಿ ಬೃಂದಾ ಆಚಾರ್ಯ, “ಮಿಲನಾಗೆ ನನ್ನ ಕಣ್ಣೇ ಬೀಳುತ್ತೆ. ಅಷ್ಟು ಸುಂದರವಾಗಿ, ಹಾಟ್ ಆಗಿ ಕಾಣಿಸುತ್ತಾರೆ. ಮನೆಗೆ ಹೋದ ಬಳಿಕ ಕೃಷ್ಣ ಸರ್ ಬಳಿ ದೃಷ್ಟಿ ತೆಗೆಸಿಕೊಳ್ಳಿ. ಇದು 90 ಹಾಕದವರೂ ಸ್ಟೆಪ್ಸ್ ಹಾಕುವಂತೆ ಮಾಡುವ ಹಾಡು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಮೊದಲ ಬಾರಿಗೆ ಟಪ್ಪಾಂಗುಚ್ಚಿ ಸ್ಟೆಪ್ಸ್ ಹಾಕಿರುವ ಖುಷಿ ಹಂಚಿಕೊಂಡ ಮಿಲನ ನಾಗರಾಜ್, “ಕಲಾವಿದರಿಗೆ ವಿಭಿನ್ನ ಪಾತ್ರ ಸಿಕ್ಕರೆ ಖುಷಿ. ಅಂತಹ ಒಂದು ಅನುಭವ ನೀಡಿದ ಚಿತ್ರವಿದು. ಗಂಡು ಮಕ್ಕಳು ಈ ಸಿನಿಮಾ ಮಿಸ್ ಮಾಡಿದರೂ ನಡೆಯುತ್ತೆ. ಆದರೆ, ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ಮಿಸ್ ಮಾಡಬೇಡಿ’ ಎಂದರು. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಹಾಗೂ ಸುಜ್ಞಾನ್ ಛಾಯಾಗ್ರಹಣವಿರಲಿದೆ. “ಕೌಸಲ್ಯಾ ಸುಪ್ರಜಾ ರಾಮ’ ಇದೇ ಶುಕ್ರವಾರ ತೆರೆಗೆ ಬರಲಿದೆ.