Zodiac Signs : ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು ಕೂಡ ಇದ್ದಾರೆ. ಪ್ರತಿಯೊಂದು ಕೆಲಸ, ಕಾರ್ಯಗಳನ್ನು ಮಾಡಬೇಕಾದರೂ ಕೆಲವರು ಜೋತಿಷ್ಯದ ಮೊರೆ ಹೋಗುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಚಲನೆಯು ಎಲ್ಲ 12 ರಾಶಿಚಕ್ರದ ಚಿಹ್ನೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.
ಮನುಷ್ಯನ ಒಳಿತು-ಕೆಡುಕು, ನಡೆ-ನುಡಿ ಎಲ್ಲದರ ಮೇಲೂ ಗ್ರಹಗಳು ಪ್ರಭಾವ ಬೀರುತ್ತವೆ. ಒಬ್ಬ ವ್ಯಕ್ತಿಯ ಭವಿಷ್ಯದ ಜೀವನ ಹೇಗಿರುತ್ತದೆ? ಆತನ ವಿಶಿಷ್ಟ ಗುಣಗಳು ಏನೆಂಬುದನ್ನು ಗ್ರಹಗತಿಗಳ ಆಧಾರದ ಮೇಲೆ ಸುಲಭ ಊಹಿಸಬಹುದಾಗಿದೆ. ಅದಕ್ಕೆ ಅಲ್ಲವೇ ಏನಾದರೂ ನಡೆದರೆ ಎಲ್ಲದಕ್ಕೂ ಗ್ರಹಗತಿಗಳೇ ಕಾರಣ ಎಂದು ನಮ್ಮ ಹಿರಿಯರು ಹೇಳುವುದನ್ನೂ ನಾವು ನೋಡಿದ್ದೇವೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ಹೀಗಾಗಿ ಜ್ಯೋತಿಷ್ಯವನ್ನು ಬಹುತೇಕ ಮಂದಿ ನಂಬುತ್ತಾರೆ.
ಅದೇ ರೀತಿ ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಜನರು ಹಣಕ್ಕಿಂತ ಪ್ರೀತಿಯ ಮೇಲೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರಂತೆ. ಪ್ರೀತಿಗೋಸ್ಕರ ಲಕ್ಷಾಂತರ ಡಾಲರ್ ಸಹ ಖರ್ಚು ಮಾಡುತ್ತಾರೆ. ಹಣಕ್ಕಿಂತಲೂ ಹೆಚ್ಚಾಗಿ ಸಂಬಂಧಗಳು, ವಾತ್ಸಲ್ಯ ಮತ್ತು ಪ್ರೀತಿಯನ್ನು ಗೌರವಿಸುವ ಉದಾತ್ತ ಗುಣಗಳನ್ನು ಹೊಂದಿರುವ ರಾಶಿಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿ ಪ್ರೀತಿಸುವವರು ಮತ್ತು ಪ್ರೀತಿಗಾಗಿ ಹಂಬಲ ಹೊಂದಿರುತ್ತಾರೆ. ಅವರು ಯಾವಾಗಲೂ ಹಣಕ್ಕಿಂತ ಪ್ರೀತಿಗೆ ಬೆಲೆ ನೀಡುತ್ತಾರೆ. ನಿಜವಾದ ಪ್ರೀತಿಗಿಂತ ದೊಡ್ಡ ಉಡುಗೊರೆ ಇನ್ನೊಂದಿಲ್ಲ ಎಂದು ದೃಢವಾಗಿ ನಂಬುತ್ತಾರೆ. ಹಣವನ್ನು ಯಾವಾಗ ಬೇಕಾದರೂ ಗಳಿಸಬಹುದು ಆದರೆ, ನಿಜವಾದ ಪ್ರೀತಿ ಒಮ್ಮೆ ಕಳೆದುಹೋದರೆ, ಅದನ್ನು ಎಂದಿಗೂ ಮರಳಿ ಪಡೆಯಲು ಸಾಧ್ಯವಿಲ್ಲ ಎಂಬುದು ಈ ರಾಶಿಯವರಿಗೆ ಚೆನ್ನಾಗಿ ತಿಳಿದಿದೆ.
ಸಿಂಹ ರಾಶಿ
ಸಿಂಹ ರಾಶಿಯಲ್ಲಿ ಜನಿಸಿದ ಜನರು ಮಹತ್ವಾಕಾಂಕ್ಷೆಯುಳ್ಳವರಾಗಿದ್ದು, ಹಣ ಸಂಪಾದಿಸುವಲ್ಲಿ ನಿಪುಣರು. ಆದರೆ, ಹಣ ಅಥವಾ ಪ್ರೀತಿಯ ವಿಷಯಕ್ಕೆ ಬಂದಾಗ, ಈ ರಾಶಿಚಕ್ರ ಚಿಹ್ನೆಗಳು ಖಂಡಿತವಾಗಿಯೂ ಪ್ರೀತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅವರಿಗೆ ಪ್ರೀತಿಯಿಂದ ಏನೇ ನೀಡಿದರೂ ಒಂದು ಕ್ಷಣವೂ ಯೋಚಿಸದೆ ಅದನ್ನು ಸ್ವೀಕರಿಸುತ್ತಾರೆ. ಕೆಲವೊಮ್ಮೆ ಇದೇ ಅವರಿಗೆ ಮುಳುವಾಗಬಹುದು. ಈ ರಾಶಿಯವರು ತಮ್ಮ ಸಂಗಾತಿಯ ಪ್ರಗತಿಗಾಗಿ ತುಂಬಾ ಪ್ರಾಮುಖ್ಯತೆಯನ್ನು ನೀಡುತ್ತಾರೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಚಿಹ್ನೆಯಡಿಯಲ್ಲಿ ಜನಿಸಿದ ಜನರು ಯಾವುದೇ ಪರಿಸ್ಥಿತಿಯಲ್ಲಿ ತಾರ್ಕಿಕವಾಗಿ ಯೋಚಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಆದರೆ, ಅವರು ಪ್ರೀತಿಗೆ ಸಂಬಂಧಿಸಿದ ವಿಷಯಗಳಲ್ಲಿ ಮಾತ್ರ ಅಂತಃಪ್ರಜ್ಞೆಗೆ ಪ್ರಾಮುಖ್ಯತೆ ನೀಡುತ್ತಾರೆ. ಅವರು ಲೌಕಿಕ ಸುಖಗಳನ್ನು ತುಂಬಾ ಬಯಸುತ್ತಾರೆ. ಆದರೆ, ಅದೇ ಸಮಯದಲ್ಲಿ ಅವರು ಮದುವೆಯ ಬಂಧ ಮತ್ತು ಜೀವನ ಸಂಗಾತಿಯನ್ನು ತುಂಬಾ ಗೌರವಿಸುತ್ತಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.