ಮೊಬೈಲ್​ ಫೋನ್​ ರಿಪೇರಿ ಮಾಡಿಸಿಕೊಡಲು ನಿರಾಕರಿಸಿದ ಫೋಷಕರು; ಮನನೊಂದು ಪ್ರಾಣಬಿಟ್ಟ ಮಗಳು

1 Min Read
ಮೊಬೈಲ್​ ಫೋನ್​ ರಿಪೇರಿ ಮಾಡಿಸಿಕೊಡಲು ನಿರಾಕರಿಸಿದ ಫೋಷಕರು; ಮನನೊಂದು ಪ್ರಾಣಬಿಟ್ಟ ಮಗಳು

ಹೈದರಾಬಾದ್: ಫೋಷಕರು ಮೊಬೈಲ್​ ಫೋನ್​ ರಿಪೇರಿ ಮಾಡಿಸಿಕೊಡಲು ನಿರಾಕರಿಸಿದರು ಎಂಬ ಕಾರಣಕ್ಕೆ ಮನನೊಂದು ಯುವತಿಯೊಬ್ಬಳು ಪ್ರಾಣ ಕಳೆದುಕೊಂಡಿರುವ ಘಟನೆ ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಜೈಪುರ ತಾಲ್ಲೂಕಿನ ವೆಲಾಲ ಗ್ರಾಮದಲ್ಲಿ ನಡೆದಿದೆ.

ಮೃತಳನ್ನು ಸಾಯಿಶುಮಾ (19) ಎಂದು ಗುರುತಿಸಲಾಗಿದ್ದು, ಈಕೆ ಮೊದಲ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಈಕೆಯ ಪೋಷಕರು ದಿನಗೂಲಿ ನೌಕರರು ಎಂದು ವರದಿಯಾಗಿದೆ.

ಇದನ್ನೂ ಓದಿ: ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಲಾರಿ; 17 ಮಂದಿ ಸಾವು, 40ಕ್ಕೂ ಅಧಿಕ ಮಂದಿ ಗಂಭೀರ

ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಪದವಿ ವ್ಯಾಸಂಗ ಮಾಡುತ್ತಿರುವ ಸಾಯಿಶುಮಾ ತನ್ನ ಮೊಬೈಲ್​ ಹಾಳಾಗಿದೆ ರಿಪೇರಿ ಮಾಡಿಸಿಕೊಡುವಂತೆ ಪೋಷಕರಿಗೆ ಹೇಳಿದ್ದಾಳೆ. ಪೋಷಕರು ಇದಕ್ಕೆ ಒಪ್ಪದಿದ್ದಾಗ ಆತ್ಮಹತ್ಯೆಯ ನಾಟಕವಾಡಿದರೆ ಮೊಬೈಲ್​ ಫೋನ್​ ರಿಪೇರಿ ಮಾಡಿಸಿಕೊಡುತ್ತಾರೆ ಎಂದು ಭಾವಿಸಿದ ಈಕೆ ಮನೆಯಲ್ಲಿ ಯಾರು ಇಲ್ಲದ ವೇಳೆ ಈ ರೀತಿ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾಳೆ.

ಪೋನ್​ ರಿಪೇರಿ ಹೊರತುಪಡಿಸಿ ಬೇರೆ ಯಾವುದಾದರು ಕಾರಣ ಇದೆಯಾ ಎಂದು ಹುಡುಕಲು ತನಿಖೆಗೆ ಆದೇಶಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಸಲ್ಲಿಸುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

See also  ವೀಣಾ ವಿದುಷಿ ಶುಭಾ,ಪಂಡಿತ ಕೃಷ್ಣಾಚಾರ್ಯರಿಗೆ ಪ್ರಶಸ್ತಿ
Share This Article