ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಲಾರಿ; 17 ಮಂದಿ ಸಾವು, 40ಕ್ಕೂ ಅಧಿಕ ಮಂದಿ ಗಂಭೀರ

Truck Accident
Published on

ನವದೆಹಲಿ: ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ 17 ಮಂದಿ ಮೃತಪಟ್ಟು, 40ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಸಿಂಧ್‌ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳ ಗಡಿ ಭಾಗದಲ್ಲಿ ನಡೆದಿದೆ.

ರಂಜಾನ್​ ಹಬ್ಬದ ಪ್ರಯುಕ್ತ ಬಲೂಚಿಸ್ತಾನದ ಖುಜ್ದಾರ್ ಜಿಲ್ಲೆಯಲ್ಲಿರುವ ಸೂಫಿ ಸಂತ ಷಾ ನೂರಾನಿ ದರ್ಗಾಕ್ಕೆ ಯಾತ್ರಾರ್ಥಿಗಳು ತೆರಳುತ್ತಿದ್ದಾಗ, ಹಬ್ ಪಟ್ಟಣದ ಬಳಿಯಿರುವ ಪ್ರಪಾತಕ್ಕೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಉರುಳಿದ ಪರಿಣಾಮ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ

ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಮೊಹ್ಸಿನ್​ ನಖ್ವಿ, ಲಾರಿಯಲ್ಲಿದ್ದ ಯಾತ್ರಿಗಳು ಸಿಂಧ್ ಪ್ರಾಂತ್ಯದ ತಟ್ಟಾ ಪಟ್ಟಣಕ್ಕೆ ಸೇರಿದವರು ಎಂದು ತಿಳಿದು ಬಂದಿದೆ. ಈದ್​ ಪ್ರಯುಕ್ತ ಶಾ ನೂರಾನಿ ದರ್ಗಾಕ್ಕೆತೆರಳುರತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಗುರುತು ಪತ್ತೆಯಾಗಿದ್ದು, ಎಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು ಎಂದು ತಿಳಿದು ಬಂದಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಸಚಿವ ನಖ್ವಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net