More

    ಲೋಕಸಭೆ ಚುನಾವಣೆ ಬಳಿಕ ತೆಲಂಗಾಣ ಸಿಎಂ ಬಿಜೆಪಿ ಸೇರುತ್ತಾರೆ: ಬಿಆರ್​ಎಸ್​ ನಾಯಕ ಕೆಟಿಆರ್​

    ಹೈದರಾಬಾದ್: ದೇಶದಲ್ಲಿ ಸಾರ್ವತ್ರಿಕ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ರಾಜಕೀಯ ಪಕ್ಷಗಳ ನಾಯಕರು ಹಾಗೂ ಅಭ್ಯರ್ತೀಗಳು ಬಿರುಸಿನ ಮತಬೇಟೆಯಲ್ಲಿ ತೊಡಗಿದ್ದಾರೆ. ಚುನಾವಣೆ ಸಮಯದಲ್ಲಿ ಆರೋಪ-ಪ್ರತ್ಯಾರೋಪ ಮಾಡುವುದು ಸಹಜ. ಇದೀಗ ಅದಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮಾಜಿ ಸಿಎಂ ಕೆಸಿಆರ್​ ಪುತ್ರ, ಬಿಆರ್​ಎಸ್​ ನಾಯಕ ಕೆ.ಟಿ. ರಾಮರಾವ್​ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ಆರೋಪ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

    ಲೋಕಸಭೆ ಚುನಾವಣೆ ಮುಗಿದ ಬಳಿಕ ತೆಲಂಗಾಣ ಮುಖ್ಯಮಂತ್ರಿ ರೇವಂತ್​ ರೆಡ್ಡಿ ಅವರು ಕಾಂಗ್ರೆಸ್​ ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಈ ವಿಚಾರವನ್ನು ನಾನು ಈಗಾಗಲೇ 15ಕ್ಕಿಂತೆ ಹೆಚ್ಚು ಭಾರಿ ಹೇಳಿದ್ದೇನೆ. ಆದರೆ, ರೇವಂತ್​ ರೆಡ್ಡಿ ಈ ಒಂದು ವಿಚಾರಕ್ಕೆ ಬಿಟ್ಟು ಉಳಿದೆಲ್ಲಾ ವಿಷಯಗಳಿಗೆ ಪ್ರತಿಕ್ರಿಯಿಸಿದ್ದಾರೆ.

    ಇದನ್ನೂ ಓದಿ: ಕಾರ್​ಗೆ ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ; ಮೂವರ ದುರ್ಮರಣ, ಆರಕ್ಕೂ ಹೆಚ್ಚು ಮಂದಿ ಗಂಭೀರ

    ಇತ್ತೀಚಿನ ದಿನಗಳಲ್ಲಿ ರೇವಂತ್​ ರೆಡ್ಡಿ ಅವರ ವರ್ತನೆ ಇದಕ್ಕೆ ಪೂರಕವೆಂಬಂತ್ತಿದೆ. ಒಂದು ಕಡೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಚೌಕಿದಾರ್ ಚೋರ್ ಹೈ ಎಂದು ಹೇಳುತ್ತಾರೆ. ಆದರೆ, ಅವರ ಪಕ್ಷದ ನಾಯಕನಾದ ರೇವಂತ್​ ರೆಡ್ಡಿ ಚೌಕಿದಾರ್ ನಮ್ಮ ದೊಡ್ಡಣ್ಣ ಎಂದು ಹೇಳುತ್ತಾರೆ. ರೇವಂತ್​ ರೆಡ್ಡಿ ಅವರು ಯಾರ ಸೂಚನೆಯಂತೆ ನಡೆದುಕೊಳ್ಳುತ್ತಿದ್ದಾರೆ ಎಂಬುದು ಮೊದಲು ಖಚಿತಪಡಿಸಬೇಕು.ರೇವಂತ್​ ರೆಡ್ಡಿ ಜೊತೆಗೆ ದಕ್ಷಿಣ ಭಾರತದ ಮತ್ತೋರ್ವ ನಾಯಕ ಕಾಂಗ್ರೆಸ್​ ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ.

    ಲೋಕಸಭೆ ಚುನಾವಣೆ ಬಳಿಕ ಇದಕ್ಕೆಲ್ಲಾ ಸ್ಪಷ್ಟ ಉತ್ತರ ಸಿಗಲಿದ್ದು, ಎಲ್ಲವನ್ನು ಕಾದು ನೋಡಬೇಕಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ 50ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಡೌಟ್​. ಏಕೆಂದರೆ ಕಾಂಗ್ರೆಸ್​ ಬಗ್ಗೆ ಜನರು ವಿಶ್ವಾಸ ಕಳೆದುಕೊಂಡಿದ್ಧಾರೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ 50ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದಿಲ್ಲ​ ಎಂದು ತೆಲಂಗಾಣ ಮಾಜಿ ಸಿಎಂ ಕೆಸಿಆರ್​ ಪುತ್ರ, ಬಿಆರ್​ಎಸ್​ ನಾಯಕ ಕೆ.ಟಿ. ರಾಮರಾವ್ ಭವಿಷ್ಯ ನುಡಿದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts