IMF Conditions: ಭಾರತದ ವೈರಿ ರಾಷ್ಟ್ರ ಪಾಕಿಸ್ತಾನಕ್ಕೆ ಇದೀಗ ಶಾಕ್ ಮೇಲೆ ಶಾಕ್ ಎದುರಾಗುತ್ತಲೇ ಇದೆ. ಕಾಶ್ಮೀರದ ಪಹಲ್ಗಾಮ್ನಲ್ಲಿ 26 ಅಮಾಯಕರನ್ನು ಗುಂಡಿಟ್ಟು ಕೊಂದ ಉಗ್ರರ ದಾಳಿಯ ಮರುದಿನದಿಂದಲೇ ಪಾಕಿಸ್ತಾನಕ್ಕೆ ಭಾರತ ಹಲವಾರು ಅಚ್ಚರಿಗಳನ್ನು ನೀಡಿದೆ. ಕುತಂತ್ರ, ನರಿ ಬುದ್ಧಿ ತೋರಿದ ಪಾಕ್ಗೆ ತಕ್ಕ ಶಾಸ್ತಿಯನ್ನೇ ಮಾಡಿದ ಭಾರತ, ಪ್ರಸ್ತುತ ಯುದ್ಧ ವಿರಾಮ ಘೋಷಿಸಿದೆ. ಇಷ್ಟಾದರೂ ಸಹ ಪಾಕಿಸ್ತಾನಕ್ಕೆ ಚೇತರಿಕೆ ಎಂಬ ಭರವಸೆಯ ಬೆಳಕು ಕಾಣಿಸುವುದಿರಲಿ, ನೆನಪು ಸಹ ಮೂಡಲು ಸಾಧ್ಯವಿಲ್ಲ ಎನ್ನುವಂತಾಗಿದೆ. ಇದಕ್ಕೆ ಇತ್ತೀಚಿನ ಬೆಳವಣಿಗೆಗಳೇ ಜ್ವಲಂತ ಸಾಕ್ಷಿ.

ಇದನ್ನೂ ಓದಿ: ದೇವರೇ ಆ ಡೈರಿಯನ್ನು ಮುರಿದು ಹಾಕಿದ್ದಾನೆ! ‘ಕಿಂಗ್’ ಕೊಹ್ಲಿ ಕುರಿತು ಆಕಾಶ್ ಚೋಪ್ರಾ ಮನದಾಳ | Virat Kohli
11 ಹೊಸ ಹಣಕಾಸು ಷರತ್ತು
ಭಾರತದೊಂದಿಗೆ ಯುದ್ಧ ವಿರಾಮ ಪಡೆದಿದ್ದೇ ಆದರೂ ಈಗಾಗಿರುವ ನಷ್ಟಗಳಿಂದ ಸರಿದೂಗಿಸಿಕೊಳ್ಳಲು ಮತ್ತು ಚೇತರಿಸಿಕೊಳ್ಳಲು ಪಾಕ್ಗೆ ಹಲವು ಸಂಕಷ್ಟಗಳು ಎದುರಾಗಿವೆ. ಭಾರತ ಆಪರೇಷನ್ ಸಿಂಧೂರ ಮೂಲಕ ನಡೆಸಿದ ದಾಳಿಯಿಂದ ತತ್ತರಿಸಿರುವ ಪಾಕಿಸ್ತಾನ, ಆಗಿರುವ ನಷ್ಟಗಳನ್ನು ಸರಿದೂಗಿಸಲು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) ಸಾಲವನ್ನು ಪಡೆದಿದೆ. ಭಾರತ-ಪಾಕ್ ಸಂಘರ್ಷದ ನಡುವೆಯೇ ಪಾಕ್ಗೆ ಹಣ ಸಹಾಯ ಮಾಡಿದ ಐಎಂಎಫ್ ವಿರುದ್ಧ ವ್ಯಾಪಕ ಆಕ್ರೋಶ, ವಿರೋಧಗಳು ವ್ಯಕ್ತವಾಗಿತ್ತು. ಈ ಎಲ್ಲ ಬೆಳವಣಿಗೆಯಿಂದ ಎಚ್ಚೆತ್ತುಕೊಂಡಿರುವ ಐಎಂಎಫ್, ಪಾಕಿಸ್ತಾನದ ಮೇಲೆ ಹೊಸ ಹಣಕಾಸು ಷರತ್ತುಗಳನ್ನು ವಿಧಿಸಿದೆ.
ವಿವರಗಳ ಪ್ರಕಾರ, ಐಎಂಎಫ್ ಪಾಕಿಸ್ತಾನದ ಮೇಲೆ 11 ಹೊಸ ಹಣಕಾಸು ಷರತ್ತುಗಳನ್ನು ವಿಧಿಸಿದೆ. ಇತ್ತೀಚಿನ ಷರತ್ತುಗಳೊಂದಿಗೆ, ಐಎಂಎಫ್ ವಿಧಿಸಿರುವ ಷರತ್ತುಗಳ ಸಂಖ್ಯೆ 50 ತಲುಪಿದೆ. ಪಾಕ್ಮುಂಬರುವ ಹಣಕಾಸು ವರ್ಷಕ್ಕೆ 2.414 ಟ್ರಿಲಿಯನ್ ರೂ.ಗಳ ರಕ್ಷಣಾ ಬಜೆಟ್ ಅನ್ನು ಯೋಜಿಸುತ್ತಿದೆ. ಇದು 252 ಬಿಲಿಯನ್ ರೂ. ಅಥವಾ ಕಳೆದ ವರ್ಷಕ್ಕಿಂತ ಶೇ.12ರಷ್ಟು ಹೆಚ್ಚು ಎನ್ನಲಾಗಿದೆ. ಈ ಸಂದರ್ಭದಲ್ಲಿ ಐಎಂಎಫ್ ಹೊಸ ಷರತ್ತುಗಳನ್ನು ವಿಧಿಸಿರುವುದು ಮಹತ್ವದ ಬೆಳವಣಿಗೆ.
ಇದನ್ನೂ ಓದಿ: ಥಗ್ ಲೈಫ್ ಚಿತ್ರದಲ್ಲಿ ಕಮಲ್ ಹಾಸನ್-ಅಭಿರಾಮಿ ಲಿಪ್ಲಾಕ್: ವಯಸ್ಸಿನ ಅಂತರದ ಬಗ್ಗೆ ಭಾರಿ ಟೀಕೆ! Kamal Hassan
ಹೀಗಿವೆ ಹೊಸ ಷರತ್ತುಗಳು
ಜೂನ್ 2025ರೊಳಗೆ ಐಎಂಎಫ್ ಗುರಿಗಳಿಗೆ ಅನುಗುಣವಾಗಿ 2026ರ ಹಣಕಾಸು ವರ್ಷದ ಬಜೆಟ್ ಅನ್ನು ಸಂಸತ್ತು ಅನುಮೋದಿಸಬೇಕು. ಐಎಂಎಫ್ ಶಿಫಾರಸು ಮಾಡಿದ ಆಡಳಿತ ರೋಗನಿರ್ಣಯ ಮೌಲ್ಯಮಾಪನದ ಆಧಾರದ ಮೇಲೆ ಸರ್ಕಾರವನ್ನು ಬಲಪಡಿಸಲು ಕ್ರಮಗಳ ಯೋಜನೆಯನ್ನು ಸರ್ಕಾರ ಪ್ರಕಟಿಸಬೇಕು. ಇದರೊಂದಿಗೆ, 2027ರ ನಂತರದ ಹಣಕಾಸು ವಲಯದ ಆಡಳಿತ ಮತ್ತು ನಿಯಂತ್ರಣಕ್ಕಾಗಿ ಒಂದು ಯೋಜನೆಯನ್ನು ಸಿದ್ಧಪಡಿಸಬೇಕು. ಇದು 2028ರಿಂದ ಸಾಂಸ್ಥಿಕ ಮತ್ತು ನಿಯಂತ್ರಕ ಪರಿಸರವನ್ನು ವಿವರಿಸುತ್ತದೆ.
ಅಲ್ಲದೆ, ನಾಲ್ಕು ರಾಜ್ಯಗಳು ಜೂನ್ ವೇಳೆಗೆ ಹೊಸ ಕೃಷಿ ಆದಾಯ ತೆರಿಗೆ ಕಾನೂನುಗಳನ್ನು ಜಾರಿಗೆ ತರಬೇಕು. ಇದಕ್ಕಾಗಿ, ತೆರಿಗೆ ಪ್ರಕ್ರಿಯೆ, ನೋಂದಣಿ, ಪ್ರಚಾರ ಕಾರ್ಯಕ್ರಮ ಮತ್ತು ಅವುಗಳ ಅನುಷ್ಠಾನಕ್ಕಾಗಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು. ಇಂಧನ ಕ್ಷೇತ್ರದಲ್ಲಿ ಹೊಸ ಷರತ್ತುಗಳನ್ನು ತರಬೇಕು ಎಂದು ಅದು ಹೇಳಿದೆ. ಇದರ ಭಾಗವಾಗಿ, ಫೆಬ್ರವರಿ 15, 2026ರೊಳಗೆ ಅನಿಲ ಶುಲ್ಕಗಳನ್ನು ಪರಿಷ್ಕರಿಸಬೇಕು ಮತ್ತು ಈ ಸುಗ್ರೀವಾಜ್ಞೆಯನ್ನು ಮೇ ಅಂತ್ಯದ ವೇಳೆಗೆ ಶಾಶ್ವತ ಕಾನೂನಾಗಿ ಪರಿವರ್ತಿಸಬೇಕು ಎಂದು ಒತ್ತಿ ಹೇಳಿದೆ.
ಇದನ್ನೂ ಓದಿ:ಜೈಪುರದಲ್ಲಿ ಪಂಜಾಬ್-ರಾಜಸ್ಥಾನ ಕದನ: ಪ್ಲೇಆಫ್ಗೇರುವ ತವಕದಲ್ಲಿ ಶ್ರೇಯಸ್ ಪಡೆ
ಜೂನ್ ವೇಳೆಗೆ ಪ್ರಸ್ತುತ 3.21 ರೂ. ಯೂನಿಟ್ ಮಿತಿಯನ್ನು ತೆಗೆದುಹಾಕಬೇಕು ಎಂದು ಐಎಂಎಫ್ ಹೇಳಿದೆ. ಇದಲ್ಲದೆ, 2035ರ ವೇಳೆಗೆ ವಿಶೇಷ ಉದ್ಯಾನವನಗಳಿಗೆ ನೀಡಲಾಗುವ ಸಬ್ಸಿಡಿಗಳನ್ನು ಸಂಪೂರ್ಣವಾಗಿ ತೆಗೆದುಹಾಕುವಂತೆ ಪಾಕಿಸ್ತಾನ ಸರ್ಕಾರಕ್ಕೆ ತಿಳಿಸಿದೆ. ಈ ವರ್ಷದ ಅಂತ್ಯದೊಳಗೆ ಇದಕ್ಕಾಗಿ ವರದಿಯನ್ನು ಸಲ್ಲಿಸಲು ಕೇಳಲಾಗಿದೆ. ವಾಣಿಜ್ಯ ಉದ್ದೇಶಗಳಿಗಾಗಿ ಐದು ವರ್ಷಕ್ಕಿಂತ ಕಡಿಮೆ ಹಳೆಯದಾದ ಬಳಸಿದ ಕಾರುಗಳನ್ನು ಆಮದು ಮಾಡಿಕೊಳ್ಳಲು ಜುಲೈ ಅಂತ್ಯದೊಳಗೆ ಸಂಸತ್ತಿಗೆ ಪರವಾನಗಿಯನ್ನು ಸಲ್ಲಿಸಲು ಸಹ ಕೇಳಲಾಗಿದೆ. ಈ ಸಂದರ್ಭದಲ್ಲಿ, ಐಎಂಎಫ್ ವಿಧಿಸಿರುವ ಹೊಸ ಷರತ್ತುಗಳಿಂದ ಪಾಕಿಸ್ತಾನಕ್ಕೆ ಉದ್ವಿಗ್ನತೆ ಹೆಚ್ಚಾಗಿದೆ ಎಂಬುದರಲ್ಲಿ ಅನುಮಾನವೇ ಇಲ್ಲ,(ಏಜೆನ್ಸೀಸ್).
ಅವಳ ದೇಹದಲ್ಲಿ…! ಇದನ್ನೆಲ್ಲ ಮೆಟ್ಟಿ ನಿಲ್ಲಲೇಬೇಕು: ನಟಿ ಅನನ್ಯ ಪಾಂಡೆ ಓಪನ್ ಟಾಕ್ | Ananya Panday