Kamal Hassan : ಸಕಲಕಲಾವಲ್ಲಭ ಎಂದೇ ಖ್ಯಾತಿ ಪಡೆದಿರುವ ಕಾಲಿವುಡ್ ಸ್ಟಾರ್ ಹೀರೋ ಕಮಲ್ ಹಾಸನ್ ಮತ್ತು ಖ್ಯಾತ ನಿರ್ದೇಶಕ ಮಣಿರತ್ನಂ ಜುಗಲ್ಬಂದಿಯಲ್ಲಿ ಮತ್ತೊಂದು ಚಿತ್ರ ತಯಾರಾಗಿದೆ. ಅದರ ಹೆಸರೇ ಥಗ್ ಲೈಫ್. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಯ ಜೊತೆಗೆ ಟೀಕೆಗಳು ವ್ಯಕ್ತವಾಗುತ್ತಿವೆ.

ಗ್ಯಾಂಗ್‌ಸ್ಟರ್ ಡ್ರಾಮಾ ಚಿತ್ರದಲ್ಲಿ ಸಿಂಬು, ತ್ರಿಷಾ ಕೃಷ್ಣನ್, ಐಶ್ವರ್ಯ ಲಕ್ಷ್ಮಿ, ಜೋಜು ಜಾರ್ಜ್, ಅಭಿರಾಮಿ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಕಮಲ್ ಹಾಸನ್, ಆರ್. ಮಹೇಂದ್ರನ್, ಮಣಿರತ್ನಂ, ಶಿವ ಅಣ್ಣಾತಿ ಹಾಗೂ ಉದಯನಿಧಿ ಸ್ಟಾಲಿನ್ ನಿರ್ಮಿಸಿದ್ದಾರೆ. ಈ ಚಿತ್ರ ಜೂನ್ 5 ರಂದು ಬಿಡುಗಡೆಯಾಗಲಿದೆ.
ಥಗ್ ಲೈಫ್ ಸಿನಿಮಾದ ಟ್ರೇಲರ್‌ನಲ್ಲಿ 70 ವರ್ಷದ ಕಮಲ್ ಹಾಸನ್ ಮತ್ತು 40 ವರ್ಷದ ಅಭಿರಾಮಿ ನಡುವಿನ ಲಿಪ್‌ಲಾಕ್ ದೃಶ್ಯವಿದೆ. ಇಬ್ಬರ ನಡುವೆ 30 ವರ್ಷಗಳ ವಯಸ್ಸಿನ ಅಂತರವಿದೆ. ಹೀಗಾಗಿ ಕೆಲ ನೆಟ್ಟಿಗರು ಲಿಪ್‌ಲಾಕ್ ದೃಶ್ಯವನ್ನು ಟೀಕಿಸುತ್ತಿದ್ದಾರೆ.
ಅಲ್ಲದೆ, ಕಮಲ್ ಹಾಸನ್ ಅವರು ದೃಶ್ಯವೊಂದರಲ್ಲಿ ತ್ರಿಷಾಗೆ ಹೇಳುವ ಸಂಭಾಷಣೆ ಕೂಡ ತುಂಬಾ ಬೋಲ್ಡ್ ಆಗಿದೆ. ಹೀಗಾಗಿ, ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ವಯಸ್ಸಿನ ಅಂತರ ಹೆಚ್ಚಾಗಿದ್ದು, ಪ್ರಣಯ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಹೀಗಾಗಿಯೇ ಟ್ರೇಲರ್ ಮಿಶ್ರ ವಿಮರ್ಶೆಗಳನ್ನು ಪಡೆಯುತ್ತಿದೆ.
ಇದನ್ನೂ ಓದಿ: ಈ ಅಕ್ಷರಗಳಿಂದ ಆರಂಭವಾಗುವ ಹೆಸರುಗಳನ್ನು ಹೊಂದಿರುವ ಮಹಿಳೆಯರು ತುಂಬಾ ಅದೃಷ್ಟವಂತರಂತೆ! Astrology
ಇನ್ನು ಕಮಲ್ ಅಭಿಮಾನಿಗಳು ಇದನ್ನು ಸಮರ್ಥಿಸಿಕೊಂಡಿದ್ದಾರೆ. ಇಡೀ ಟ್ರೇಲರ್‌ನಲ್ಲಿ ಕೇವಲ ಚುಂಬನ ದೃಶ್ಯಗಳು ಮತ್ತು ಇಂಟಿಮೇಟ್ ದೃಶ್ಯಗಳ ಮೇಲೆ ಕೇಂದ್ರೀಕರಿಸುವುದು ಸರಿಯಲ್ಲ ಎಂದಿದ್ದಾರೆ. ಇವೆಲ್ಲವೂ ಸಿನಿಮಾಗಳಲ್ಲಿ ಬಹಳ ಸಾಮಾನ್ಯ. ಅವುಗಳ ಮೇಲೆ ಕೇಂದ್ರೀಕರಿಸುವುದನ್ನು ಮೊದಲು ನಿಲ್ಲಿಸಿ ಎಂದಿದ್ದಾರೆ.
ಅಂದಹಾಗೆ, ಕೇರಳ ಮೂಲದ ಅಭಿರಾಮಿ, ಕನ್ನಡದಲ್ಲಿ ದರ್ಶನ್ ನಟನೆಯ ಲಾಲಿ ಹಾಡು, ಶಿವರಾಜ್ಕುಮಾರ್ ಅಭಿನಯದ ಶ್ರೀರಾಮ್, ಉಪೇಂದ್ರ ಅಭಿನಯದ ರಕ್ತ ಕಣ್ಣೀರು, ರವಿಚಂದ್ರನ್ ನಟನೆಯ ದಶರಥ ಹಾಗೂ ಸುದೀಪ್ ನಟನೆಯ ಕೋಟಿಗೊಬ್ಬ ಸಿನಿಮಾದಲ್ಲಿ ನಟಿಸಿದ್ದು, ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ಸಿನಿಮಾಗಳಲ್ಲಿ ಬಿಜಿಯಾಗಿರುವಾಗಲೇ 2004 ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಹೋಗಿ 2013 ರಲ್ಲಿ ಮರಳಿದರು. ಸದ್ಯ ಪೋಷಕ ಪಾತ್ರಗಳಲ್ಲಿ ಅಭಿರಾಮಿ ಮಿಂಚುತ್ತಿದ್ದಾರೆ. ವಿಶ್ವರೂಪಂ ಮತ್ತು ವಿಶ್ವರೂಪಂ 2 ಚಿತ್ರಗಳ ತಮಿಳು ಆವೃತ್ತಿಯಲ್ಲಿ ನಾಯಕಿ ಪೂಜಾ ಕುಮಾರ್ ಅವರಿಗೆ ಡಬ್ಬಿಂಗ್ ಮಾಡಿದ್ದ ಅಭಿರಾಮಿಗೆ ಇದೀಗ ಕಮಲ್ ಎದುರು ನಟಿಸುವ ಅವಕಾಶ ಸಿಕ್ಕಿದೆ. (ಏಜೆನ್ಸೀಸ್)
ಮದುವೆಯಾದ ಒಂದೇ ವಾರದಲ್ಲಿ ಪತ್ನಿಯನ್ನು ಬರ್ಬರವಾಗಿ ಕೊಂದ ಗಂಡ! ಕಾರಣ ಹೀಗಿದೆ…Husband Kills Wife
ವಿರಾಟ್ ಕೊಹ್ಲಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು: ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಆಗ್ರಹ! Virat Kohli