blank

ಮದುವೆಯಾದ ಒಂದೇ ವಾರದಲ್ಲಿ ಪತ್ನಿಯನ್ನು ಬರ್ಬರವಾಗಿ ಕೊಂದ ಗಂಡ! ಕಾರಣ ಹೀಗಿದೆ…Husband Kills Wife

Husband Kills Wife

Husband Kills Wife : ಮದುವೆಯಾದ ಒಂದೇ ವಾರದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯ ಅಮೌಲಿ ಗ್ರಾಮದಲ್ಲಿ ನಡೆದಿದೆ.

blank

ಮೃತಳನ್ನು ಆರತಿ ಪಾಲ್ (26) ಎಂದು ಗುರುತಿಸಲಾಗಿದೆ. ಈಕೆ ಜೌನ್​ಪುರ್​ ಜಿಲ್ಲೆಯ ನಿವಾಸಿ. ಕೊಲೆಗಾರ ಗಂಡನನ್ನು ರಾಜು ಪಾಲ್ (44) ಎಂದು ಗುರುತಿಸಲಾಗಿದೆ. ಮದುವೆಯಾದ ಆರೇ ದಿನಗಳಲ್ಲಿ ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ, ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ವಿಭಾಗಗಳ ಅಡಿಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಕ್ಯಾಮೆರಾ ಮುಂದೆ ಮೂತ್ರ ವಿಸರ್ಜಿಸಲು ಡೈರೆಕ್ಟರ್​ ಕೇಳಿದಾಗ ಖುಷಿಯಿಂದ ಒಪ್ಪಿದ್ದೆ: ಸ್ಟಾರ್​ ನಟಿಯ ಅಚ್ಚರಿ ಹೇಳಿಕೆ! Janki Bodiwala

ಅಂದಹಾಗೆ, ಮೃತ ಆರತಿ ಪಾಲ್​, ಆರೋಪಿ ರಾಜು ಪಾಲ್​ನ ಮೂರನೇ ಪತ್ನಿ ಎಂದು ಚೌಬೇಪುರ ಎಸ್‌ಎಚ್‌ಒ ಜಗದೀಶ್ ಕುಶ್ವಾಹ ಹೇಳಿದ್ದಾರೆ. ಎರಡು ಬಾರಿ ಮದುವೆ ಮುರಿದುಬಿದ್ದ ಬಳಿಕ ಮೇ 9ರಂದು ರಾಜು ಪಾಲ್​, ಆರತಿಯನ್ನು ವಿವಾಹವಾದನು. ಮದುವೆಯಾದ ಕೂಡಲೇ ಇಬ್ಬರ ನಡುವೆ ಜಗಳ ಆರಂಭವಾಯಿತು. ಒಂದು ದಿನ ರಾತ್ರಿ ಆರತಿ, ಆತನೊಂದಿಗೆ ಲೈಂಗಿಕ ಸಂಬಂಧ ಹೊಂದಲು ನಿರಾಕರಿಸಿದ್ದಕ್ಕೆ ಆಕೆಯ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಈ ವಿಚಾರವನ್ನು ನರೆಹೊರೆಯವರು ತಿಳಿಸಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ನಡೆದ ದಿನ ಪತಿಯ ದಾಳಿಯಿಂದ ಗಾಯಗೊಂಡಿದ್ದ ಆರತಿಯನ್ನು ನರಪತ್‌ಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪೊಲೀಸರು ಕರೆದೊಯ್ದರು. ಆಕೆಯನ್ನು ಪರೀಕ್ಷಿಸಿದ ವೈದ್ಯರು ಈಗಾಗಲೇ ಮೃತಪಟ್ಟಿದ್ದಾಳೆಂದು ದೃಢಪಡಿಸಿದರು. ಮೃತಳ ಕುಟುಂಬ ಸದಸ್ಯರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಕುಟುಂಬ ಸದಸ್ಯರ ದೂರಿನ ಆಧಾರದ ಮೇಲೆ, ಪೊಲೀಸರು ಆರೋಪಿ ಪತಿಯ ವಿರುದ್ಧ ಕೊಲೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದರು. ಮನೆಯಿಂದ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬೆನ್ನಟ್ಟಿ ಹಿಡಿದು ಬಂಧಿಸಿದ್ದಾರೆ. (ಏಜೆನ್ಸೀಸ್​)

ಕ್ಯಾಮೆರಾ ಮುಂದೆ ಮೂತ್ರ ವಿಸರ್ಜಿಸಲು ಡೈರೆಕ್ಟರ್​ ಕೇಳಿದಾಗ ಖುಷಿಯಿಂದ ಒಪ್ಪಿದ್ದೆ: ಸ್ಟಾರ್​ ನಟಿಯ ಅಚ್ಚರಿ ಹೇಳಿಕೆ! Janki Bodiwala

ಪ್ರಾಮಾಣಿಕತೆ ಅಂದ್ರೆ ಏನು ಅಂತಾನೇ ಗೊತ್ತಿರದ 3 ರಾಶಿ ಚಿಹ್ನೆಗಳಿವು… ಇವರ ಬಗ್ಗೆ ಜಾಗರೂಕರಾಗಿರಿ! Zodiac Signs

Share This Article
blank

ಇದು ನೇರಳೆ ಹಣ್ಣಿನ ಸೀಸನ್​ ಮಿಸ್​ ಮಾಡ್ದೆ ತಿನ್ನಿ… ತಿಂದ್ರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ? ಇಲ್ಲಿದೆ ಅಚ್ಚರಿಯ ಮಾಹಿತಿ…Black jamun

Black jamun : ಆಯಾ ಋತುವಿನಲ್ಲಿ ಸಿಗುವ ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು…

ಬೆಳಿಗ್ಗೆ ಈ ಸೂಪರ್​ ಫುಡ್​ಗಳನ್ನು ಸೇವಿಸಿ: ನಿಮ್ಮ ದೇಹದಲ್ಲಾಗುವ ಸಕಾರಾತ್ಮಕ ಬದಲಾವಣೆ ಗಮನಿಸಿ | Superfoods

Superfoods: ಸಾಮಾನ್ಯವಾಗಿ ಬೆಳಗಿನ ಸಮಯವು ದಿನಪೂರ್ತಿ ಮನಸ್ಥಿತಿಯನ್ನು ನಿರ್ಧರಿಸುತ್ತದೆ. ಎದ್ದ ತಕ್ಷಣ ನೀವು ಏನು ಮಾಡುತ್ತೀರಿ…

blank