ಜೈಪುರದಲ್ಲಿ ಪಂಜಾಬ್​-ರಾಜಸ್ಥಾನ ಕದನ: ಪ್ಲೇಆಫ್​ಗೇರುವ ತವಕದಲ್ಲಿ ಶ್ರೇಯಸ್​ ಪಡೆ

New Project (1)
Published on

ಜೈಪುರ: ಹಾಲಿ ಋತುವಿನಲ್ಲಿ ಭರ್ಜರಿ ಫಾಮ್​ರ್ನಲ್ಲಿರುವ ಪಂಜಾಬ್​ ಕಿಂಗ್ಸ್​ ತಂಡ ಪ್ಲೇಆಫ್​ ಸ್ಥಾನ ಖಾತ್ರಿಪಡಿಸುವ ತವಕದಲ್ಲಿದೆ. ಸವಾಯಿ ಮಾನ್​ಸಿಂಗ್​ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ರಾಜಸ್ಥಾನ ರಾಯಲ್ಸ್​ ಎದುರು ಕಣಕ್ಕಿಳಿಯಲಿದೆ. ಪ್ಲೇಆಫ್ ರೇಸ್​ನಿಂದ ಹೊರಬಿದ್ದಿರುವ ರಾಜಸ್ಥಾನ ತಂಡಕ್ಕೆ ತವರಿನಲ್ಲಿ ಕೊನೇ ಪಂದ್ಯ ಇದಾಗಿದೆ.

ಭಾರತ ಹಾಗೂ ಪಾಕಿಸ್ತಾನ ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಧರ್ಮಶಾಲಾದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯ ಬ್ಲಾಕ್​ಔಟ್​ನಿಂದ ದಿಢೀರ್​ ಮೊಟಕುಗೊಂಡ ನಂತರ ಪಂಜಾಬ್​ ಕಿಂಗ್ಸ್​ ಮರಳಿ ಕಣಕ್ಕಿಳಿಯಲಿದೆ. 2014ರ ಬಳಿಕ ಪ್ಲೇಆ್​ಗೇರುವ ಹಂಬಲದಲ್ಲಿರುವ ಪಂಜಾಬ್​ ಟೂರ್ನಿ ಸ್ಥಗಿತಕ್ಕೂ ಮುನ್ನ ಆಡಿರುವ 11 ಪಂದ್ಯಗಳಲ್ಲಿ 7 ಗೆಲುವು, 3 ಸೋಲು ಹಾಗೂ 1 ರದ್ದು ಸೇರಿ 15 ಅಂಕ ಹೊಂದಿದೆ. ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಶ್ರೇಯಸ್​ ಅಯ್ಯರ್​ ಪಡೆಗೆ ಇನ್ನೊಂದು ಗೆಲುವು ಪ್ಲೇಆ್​ ಸ್ಥಾನ ಅಧಿಕೃತಪಡಿಸಲಿದೆ. ಇತ್ತ ರಾಜಸ್ಥಾನ ರಾಯಲ್ಸ್​ ಪಾಲಿಗೆ ಉಳಿದಿರುವ ಮೂರು ಲೀಗ್​ ಪಂದ್ಯಗಳು ಪ್ರತಿಷ್ಠೆಯ ಹೋರಾಟ ಎನಿಸಿದ್ದು, ಅಂಕಪಟ್ಟಿಯ ಕೊನೇ ಸ್ಥಾನ ತಪ್ಪಿಸುವ ಸವಾಲು ಹೊಂದಿದೆ. ರಾಜಸ್ಥಾನ ತಂಡ ಇದುವರೆಗೆ ಆಡಿರುವ 12 ಪಂದ್ಯಗಳಲ್ಲಿ 3 ಗೆಲುವು, 9 ಸೋಲಿನೊಂದಿಗೆ 6 ಅಂಕ ಪಾಯಿಂಟ್ಸ್​ ಹೊಂದಿದ್ದು, ಅಂಕಪಟ್ಟಿಯ 9ನೇ ಸ್ಥಾನದಲ್ಲಿದೆ.

ಗಾಯದ ಸಮಸ್ಯೆಯಿಂದಾಗಿ ವೇಗಿ ಜೋಫ್ರಾ ಆರ್ಚರ್​ ಟೂರ್ನಿಯ ಉಳಿದ ಭಾಗಕ್ಕೆ ಅಲಭ್ಯರಾಗಿದ್ದು, ರಾಜಸ್ಥಾನ ಬೌಲಿಂಗ್​ ವಿಭಾಗಕ್ಕೆ ದೊಡ್ಡ ಹಿನ್ನಡೆ ತಂದಿದೆ. ಜತೆಗೆ ಕಾಯಂ ನಾಯಕ ಸಂಜು ಸ್ಯಾಮ್ಸನ್​ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಲ್ಹುವಾನ್​ ಡ್ರೆ ಪ್ರಿಟೋರಿಯಸ್​, ನಾಂಡ್ರೆ ರ್ಬಗರ್​ ಹೊಸದಾಗಿ ಬದಲಿ ಆಟಗಾರರಾಗಿ ರಾಜಸ್ಥಾನ ತಂಡ ಸೇರಿಕೊಂಡಿದ್ದಾರೆ. ಯಶಸ್ವಿ ಜೈಸ್ವಾಲ್​, ವೈಭವ್​ ಸೂರ್ಯವಂಶಿ, ಹಂಗಾಮಿ ನಾಯಕ ರಿಯಾನ್​ ಪರಾಗ್​ ಬ್ಯಾಟಿಂಗ್​ ವಿಭಾಗದ ಪ್ರಮುಖ ಎನಿಸಿದ್ದಾರೆ.

11 ವರ್ಷಗಳ ನಂತರ ಪ್ಲೇಆಫ್​ ಎಂಟ್ರಿ?

ಕಳೆದ ವರ್ಷ ಕೆಕೆಆರ್​ ತಂಡಕ್ಕೆ ದಶಕದ ಬಳಿಕ ಪ್ರಶಸ್ತಿ ಗೆದ್ದುಕೊಟ್ಟಿದ್ದ ನಾಯಕ ಶ್ರೇಯಸ್​ ಅಯ್ಯರ್​, ಈ ಬಾರಿ 11 ವರ್ಷಗಳ ಬಳಿಕ ಪಂಜಾಬ್​ ತಂಡವನ್ನು ಪ್ಲೇಆ್​ಗೇರಿಸುವ ಅವಕಾಶ ಹೊಂದಿದ್ದಾರೆ. ಹಾಲಿ ಋತುವಿನಲ್ಲಿ ಪ್ಲೇಆ್​ ಪ್ರವೇಶಿಸಿದ ಮೊದಲ ಎನಿಸುವ ಹಾದಿಯಲ್ಲಿದ್ದ ಪಂಜಾಬ್​ ಕಿಂಗ್ಸ್​ಗೆ ಟೂರ್ನಿಯ ತಾತ್ಕಾಲಿಕ ಮುಂದೂಡಿಕೆ ಪ್ಲೇಆ್​ ಪ್ರವೇಶ ವಿಳಂಬಗೊಳಿಸಿತು. ಈ ವಿಳಂಬ ಪ್ರಮುಖ ವಿದೇಶಿ ಆಟಗಾರರ ಗೈರಿಗೂ ಕಾರಣವಾಗಿದ್ದು, ರಾಜಸ್ಥಾನ ವಿರುದ್ಧ ಪಂದ್ಯಕ್ಕೆ ಆಸ್ಟ್ರೆಲಿಯಾ ಆಲ್ರೌಂಡರ್​ ಮಾರ್ಕಸ್​ ಸ್ಟೋಯಿನಿಸ್​, ವಿಕೆಟ್​ ಕೀಪರ್​&ಬ್ಯಾಟರ್​ ಜೋಶ್​ ಇಂಗ್ಲಿಸ್​ ಅಲಭ್ಯರಾಗಿದ್ದಾರೆ. ಜತೆಗೆ ಆಫ್ರಿಕಾದ ಆಲ್ರೌಂಡರ್​ ಮಾಕೋರ್ ಜಾನ್ಸೆನ್​ ಲಭ್ಯತೆಯೂ ಅನಿಶ್ಚಿತತೆಯಿಂದ ಕೂಡಿದೆ. ಗ್ಲೆನ್​ ಮಾಕ್ಸ್​ವೆಲ್​ ಕಳಪೆ ಫಾಮ್​  ಹೊಂದಿರುವ ತಂಡಕ್ಕೆ ಮತ್ತಷ್ಟು ತಲೆನೋವಾಗಿದೆ. ಪ್ರಭ್​ಸಿಮ್ರನ್​ ಸಿಂಗ್​, ಪ್ರಿಯಾಂಶ್​ ಆರ್ಯ, ಶ್ರೇಯಸ್​ ಅಯ್ಯರ್​, ನೇಹಲ್​ ವಧೇರ ಅವರಂಥ ಭಾರತೀಯರಿಂದ ಕೂಡಿದ ಸದೃಢ ಬ್ಯಾಟಿಂಗ್​ ವಿಭಾಗ ಹೊಂದಿದೆ. ಬೌಲಿಂಗ್​ನಲ್ಲಿ ಅರ್ಷದೀಪ್​ ಸಿಂಗ್​ ಹಾಗೂ ಯಜುವೇಂದ್ರ ಚಾಹಲ್​ ತಲಾ 14 ವಿಕೆಟ್​ ಕಬಳಿಸಿದ್ದು, ಪ್ರಮುಖ ಶಕ್ತಿ ಎನಿಸಿದ್ದಾರೆ.

11. ಪಂಜಾಬ್​ ಕಿಂಗ್ಸ್​ ತಂಡ 11 ವರ್ಷಗಳ ಬಳಿಕ ಪ್ಲೇಆಫ್ ಸನಿಹದಲ್ಲಿದ್ದು, 2014ರಲ್ಲಿ ಕೊನೆಯದಾಗಿ ಪ್ಲೇಆ್​ ಆಡಿತ್ತು.

ಮುಖಾಮುಖಿ: 29

ಪಂಜಾಬ್​:12

ರಾಜಸ್ಥಾನ:17

ಆರಂಭ: ಮಧ್ಯಾಹ್ನ 3.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.

ಪ್ಲೇಆಫ್​ ಹಾದಿ....

ಸದ್ಯ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಪಂಜಾಬ್​ ಕಿಂಗ್ಸ್​ ಮುಂಬರುವ ತನ್ನ ಮೂರು ಲೀಗ್​ ಪಂದ್ಯಗಳಲ್ಲಿ ಒಂದು ಗೆಲುವು ದಾಖಲಿಸಿದರೂ, ಪ್ಲೇಆಫ್ ಸ್ಥಾನ ಖಾತ್ರಿಪಡಿಸಿಕೊಳ್ಳಲಿದೆ. ರಾಜಸ್ಥಾನ ನಂತರ ಡೆಲ್ಲಿ ಕ್ಯಾಪಿಟಲ್ಸ್​, ಮುಂಬೈ ಇಂಡಿಯನ್ಸ್​ ಎದುರು ಶ್ರೇಯಸ್​ ಅಯ್ಯರ್​ ಪಡೆ ಕಣಕ್ಕಿಳಿಯಲಿದೆ. ಮೂರು ಅಥವಾ ಎರಡು ಜಯ ಸಾಧಿಸಿದರೆ, ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನ ಪಡೆಯುವ ಅವಕಾಶವೂ ಹೊಂದಿದೆ. ಒಂದು ವೇಳೆ ಮೂರರಲ್ಲಿಯೂ ಸೋತರೆ, ಪ್ಲೇಆ್​ ಹುಡುಕಾಟ ಕನಿಷ್ಠ ಒಂದು ವರ್ಷ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net