ಕ್ಯಾನ್ಸರ್ ನೋವನ್ನು ನಾನೂ ಅನುಭವಿಸಿದ್ದೇನೆ; ಸಂಜಯ್​ ದತ್​ ಚೇತರಿಕೆಗೆ ಯುವರಾಜ್ ಸಿಂಗ್​ ಹಾರೈಕೆ

sanjaydutt6-1597211210
Published on

ಮುಂಬೈ: ಉಸಿರಾಟದ ಸಮಸ್ಯೆಯಿಂದ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್‌ ನಟ ಸಂಜಯ್​ ದತ್ ಅವರಿ​ಗೆ ಶ್ವಾಸಕೋಶದ ಕ್ಯಾನ್ಸರ್​ ಇರುವ ವಿಚಾರ ತಿಳಿದು ಬಂದಿದೆ. ಇದೇ 8ರಂದು ಎದೆನೋವು ಮತ್ತು ಉಸಿರಾಟದ ತೊಂದರೆಯಿಂದಾಗಿ ಬಾಲಿವುಡ್‌ನ ಬಾಬಾ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರ ಕರೊನಾ ವೈರಸ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿತ್ತು. ಆದರೆ ನಂತರ ಪರೀಕ್ಷೆ ಮಾಡಿದಾಗ ಕ್ಯಾನ್ಸರ್‌ ಇರುವುದು ತಿಳಿದು ಬಂದಿದೆ ಎನ್ನಲಾಗಿದೆ.

ಸಂಜಯ್​ಗೆ ದತ್​ಗೆ ಕ್ಯಾನ್ಸರ್​ ​ಇರುವ ಸುದ್ದಿ ತಿಳಿಯುತ್ತಿದ್ದಂತೆ, ಆ ಕಾಯಿಲೆಯನ್ನು ಜಯಿಸಿ ಬಂದಿದ್ದ ಕ್ರಿಕೆಟಿಗ ಯುವರಾಜ್ ಸಿಂಗ್​ ದತ್ ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ಹರಿಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಯುವರಾಜ್​ ಸಿಂಗ್​, ‘ನೀವು ಯಾವತ್ತಿದ್ದರೂ ಫೈಟರ್​. ಕ್ಯಾನ್ಸರ್​ನ ನೋವು ಹೇಗೆ ಎಂಬುದನ್ನು ನಾನು ಅನುಭವಿಸಿದ್ದೇನೆ. ನೀವು ತುಂಬ ಸ್ಟ್ರಾಂಗ್​. ಹಾಗಾಗಿ ಆದಷ್ಟು ಬೇಗ ಗುಣಮುಖರಾಗಿ ಬನ್ನಿ’ ಎಂದಿದ್ದಾರೆ.

ಅಂದಹಾಗೆ, ಸಂಜಯ್​ ಅವರ ದೇಹದಲ್ಲಿ ಕ್ಯಾನ್ಸರ್ ಈಗ ಮೂರನೇ ಹಂತಕ್ಕೆ ತಲುಪಿರುವುದಾಗಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಅವರು ಅಮೆರಿಕಕ್ಕೆ ಚಿಕಿತ್ಸೆಗೆಂದು ತೆರಳುವ ಸಾಧ್ಯತೆ ಇದೆ ಎಂದು ಅವರ ಆಪ್ತ ವಲಯಗಳು ಹೇಳಿವೆ.

ಆದರೆ ತಮಗೆ ಕ್ಯಾನ್ಸರ್​ ಇರುವ ವಿಚಾರವನ್ನು ನೇರವಾಗಿ ದತ್‌ ಯಾರ ಬಳಿಯೂ ಹೇಳಿಕೊಂಡಿಲ್ಲ. ಈ ಬಗ್ಗೆ ಟ್ವೀಟ್​ ಮಾಡಿರುವ ಅವರು​ ನಾನು ವೈದ್ಯಕೀಯ ಚಿಕಿತ್ಸೆ ದೃಷ್ಟಿಯಿಂದ ಚಿಕ್ಕ ವಿರಾಮ ತೆಗೆದುಕೊಳ್ಳುತ್ತಿದ್ದೇನೆ. ನನ್ನ ಕುಟುಂಬ ಹಾಗೂ ಗೆಳೆಯರು ನನ್ನ ಜತೆ ಇದ್ದಾರೆ. ನನ್ನ ಬಗ್ಗೆ ಚಿಂತೆ ಬೇಡ. ನಿಮ್ಮ ಹಾರೈಕೆ ನನ್ನ ಮೇಲಿರಲಿ. ನಾನು ಬೇಗ ವಾಪಾಸಾಗುತ್ತೇನೆ, ಎಂದು ಅವರು ಬರೆದುಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net