Photos: ಯಶ್​-ರಾಧಿಕಾ ಮಗನ ಕೃಷ್ಣಾವತಾರ

Radhika pandit with Children - Final
Published on

ಯಶ್​ ಮತ್ತು ರಾಧಿಕಾ ಪಂಡಿತ್​ ಆಗಾಗ ತಮ್ಮ ಮುದ್ದು ಮಕ್ಕಳ ಫೋಟೋಗಳನ್ನು ಸೋಷಿಯಲ್​ ಮೀಡಿಯಾ ಮುಖಾಂತರ ಹಂಚಿಕೊಳ್ಳುತ್ತಲೇ ಇರುತ್ತಾರೆ. ಮಂಗಳವಾರ, ಮತ್ತೊಮ್ಮೆ ಯಶ್​ ಮತ್ತು ರಾಧಿಕಾ ಅವರ ಮಕ್ಕಳ ಹೊಸ ಫೋಟೋಗಳು ಅನಾವರಣಗೊಂಡಿವೆ.

ಮಂಗಳವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬ ಇದ್ದಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಸಂಬಂಧ, ರಾಧಿಕಾ ಅವರು ತಮ್ಮ ಮಗನಿಗೆ ಕೃಷ್ಣನ ವೇಷ ಹಾಕಿ ಸಂಭ್ರಮಿಸಿದ್ದಾರೆ. ಜತೆಗೆ ಮಗಳಿಗೂ ಸಾಂಪ್ರದಾಯಿಕ ಉಡುಗೆ ತೊಡಿಸಿದ್ದಾರೆ. ಮಕ್ಕಳ ಫೋಟೋಗಳನ್ನು ರಾಧಿಕಾ ಶೇರ್​ ಮಾಡಿದ್ದು, ಈ ಫೋಟೋಗಳಿಗೆ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಇದಕ್ಕೂ ಮುನ್ನ ರಾಧಿಕಾ ಪಂಡಿತ್​, ರಕ್ಷಾ ಬಂಧನ ಹಬ್ಬವನ್ನೂ ಬಹಳ ಅದ್ಧೂರಿಯಾಗಿ ಆಚರಿಸಿದ್ದರು. ಐರಾ ತನ್ನ ತಮ್ಮನಿಗೆ ರಾಖಿ ಕೊಟ್ಟುವ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ಈ ಫೋಟೋಗಳಿಗೂ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.

ಯಶ್​ ಮತ್ತು ರಾಧಿಕಾ ಪಂಡಿತ್​ ಅಷ್ಟೇ ಅಲ್ಲ, ರಿಷಭ್​ ಶೆಟ್ಟಿ ಸಹ ಈ ಜನ್ಮಾಷ್ಟಮಿಗೆ ಪುತ್ರ ರಣ್ವಿತ್​ಗೆ ಕೃಷ್ಣನ ವೇಷ ಹಾಕಿ, ಸಂಭ್ರಮಿಸಿದ್ದಾರೆ. ಆ ಬಾಲ ಕೃಷ್ಣನ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲೂ ಶೇರ್​ ಮಾಡಿಕೊಂಡು, ಎಲ್ಲರಿಗೂ ಜನ್ಮಾಷ್ಟಮಿ ಶುಭಾಶಯ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net