PHOTO: ವಿಶ್ವ ಆನೆ ದಿನಕ್ಕೆ ದರ್ಶನ್​ ಕಡೆಯಿಂದ ಹೀಗೊಂದು ಪ್ರತಿಜ್ಞೆ

collage (9)
Published on

ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಮೊದಲಿಂದಲೂ ಪ್ರಾಣಿಗಳ ಮೇಲೆ ವಿಪರೀತ ಪ್ರೀತಿ. ಫಾರ್ಮ್​ಹೌಸ್​ನಲ್ಲಿ ಬಗೆಬಗೆಯ ಪ್ರಾಣಿಗಳನ್ನು ಸಾಕಿರುವ ದರ್ಶನ್​, ಆಗಾಗ ಕಾಡಿನತ್ತ ಸಫಾರಿ ಹೋಗುತ್ತಿರುತ್ತಾರೆ. ಪ್ರಾಣಿಗಳ ಫೋಟೋ ಕ್ಲಿಕ್​ ಮಾಡುವುದರ ಜತೆಗೆ ಅರಣ್ಯ ಇಲಾಖೆಯ ಕರ್ನಾಟಕ ಯೋಜನೆಯ ರಾಯಭಾರಿಯೂ ಆಗಿದ್ದಾರೆ. ಅಷ್ಟೇ ಅಲ್ಲ ಮೈಸೂರು ಪ್ರಾಣಿ ಸಂಗ್ರಹಾಲದಲ್ಲಿನ ಆನೆಗಳನ್ನೂ ದತ್ತು ಪಡೆದುಕೊಂಡಿದ್ದಾರವರು. ಇದೀಗ ಇದೇ ದರ್ಶನ್​ ವಿಶ್ವ ಆನೆ ದಿನದ ಪ್ರಯುಕ್ತ ಪ್ರತಿಜ್ಞೆಯೊಂದನ್ನು ಮಾಡಿದ್ದಾರೆ.

‘ಇಂದು ಆಗಸ್ಟ್ 12 'ವಿಶ್ವ ಆನೆ ದಿನ' ಈ ಸಂದರ್ಭದಲ್ಲಿ ಆನೆಗಳು ಎದುರಿಸುತ್ತಿರುವ ಹಲವಾರು ಬೆದರಿಕೆಗಳಿಂದ ಅವುಗಳನ್ನು ಸಂರಕ್ಷಿಸಲು ಮತ್ತು ಸಹಾಯ ಮಾಡುವುದಾಗಿ ನಾವೆಲ್ಲರೂ ಪ್ರತಿಜ್ಞೆ ಮಾಡೋಣ’ ಎಂದು ಟ್ವಿಟರ್​ನಲ್ಲಿ ಫೋಟೋ ಶೇರ್​ ಮಾಡಿಕೊಂಡು, ಆನೆಗಳ ಉಳಿಯುವಿಕೆಗೆ ಶ್ರಮಿಸೋಣ ಎಂದಿದ್ದಾರೆ.

ಅಂದಹಾಗೆ ಇತ್ತೀಚೆಗಷ್ಟೇ ದರ್ಶನ್​, ಚಿಕ್ಕಣ್ಣ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಮಲೆಮಹದೇಶ್ವರ ವನ್ಯಧಾಮದಲ್ಲಿ ಸಂಚರಿಸಿ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದರು. ಬರೀ ಸುತ್ತಾಡದೆ, ಒಂದಷ್ಟು ಸಸಿಗಳನ್ನೂ ನೆಟ್ಟಿದ್ದರು. ಕೊಳ್ಳೇಗಾಲದ ಬಫರ್​ ವಲಯದಲ್ಲಿನ ದೊಡ್ಡಮಾಕಳಿಗಿ ವ್ಯಾಪ್ತಿಯಲ್ಲಿನ ಶಿಬಿರಕ್ಕೆ ಭೇಟಿ ನೀಡಿ ವಾಚರ್​ಗಳನ್ನು ಭೇಟಿ ಕೃಷಿ ಸಪ್ತಾಹಕ್ಕೆ ಚಾಲನೆ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net