ಸೂಪರ್​ಸ್ಟಾರ್ ಮಹೇಶ್ ಬಾಬು ಜನ್ಮದಿನದಂದು ರಾಜಮೌಳಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ರಾ?

S S Rajamouli Final
Published on

ನವದೆಹಲಿ: ತೆಲುಗು ಸೂಪರ್​ಸ್ಟಾರ್ ಮಹೇಶ್ ಬಾಬು ಅವರ ಜನ್ಮ ದಿನದಂದು ಅವರ ಅಭಿಮಾನಿ ಬಳಗಕ್ಕೆ ನಿರ್ದೇಶಕ ಎಸ್. ಎಸ್. ರಾಜಮೌಳಿ ಬಹುದೊಡ್ಡ ನಿರಾಸೆ ಮೂಡಿಸಿದ್ದಾರೆ.

ಏನಪ್ಪಾ ವಿಷಯ ಅಂದ್ರೆ, ಖ್ಯಾತ ನಿರ್ದೇಶಕ ರಾಜಮೌಳಿ ಈ ಹಿಂದೆ ಸಂದರ್ಶನವೊಂದರಲ್ಲಿ ಬಹು ಮಹತ್ವಾಕಾಂಕ್ಷಿ ಚಿತ್ರ ಆರ್​ಆರ್​​ಆರ್ ಕೆಲಸ ಮುಗಿದ ನಂತರ ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಸಹಯೋಗದಲ್ಲಿ ಕೆಲಸ ಮಾಡುವುದಾಗಿ ಘೋಷಿಸಿದ್ದರು.

ಆದರೆ ಬಾಬು ಜನ್ಮದಿನದ ಸಂದರ್ಭದಲ್ಲಿ ಈ ಯಾವುದನ್ನೂ ಅವರು ಅಧಿಕೃತವಾಗಿ ಘೋಷಿಸಲಿಲ್ಲ. ಇದರಿಂದ ಬಾಬು ಅಬಿಮಾನಿಗಳು ತೀವ್ರ ನಿರಾಶೆಗೊಂಡಿದ್ದಾರಂತೆ. ಪ್ರಸ್ತುತ ಫಾರ್ಮ್​​​​​ಹೌಸ್​​ನಲ್ಲಿ ದಿನ ಕಳೆಯುತ್ತಿದ್ದಾರೆ ರಾಜಮೌಳಿ.

ಮೂಲಗಳ ಪ್ರಕಾರ, ಆರ್‌ಆರ್‌ಆರ್ ಇನ್ನೂ ಪ್ರೊಡಕ್ಷನ್ ಹಂತದಲ್ಲಿರುವ ಕಾರಣ, ರಾಜಮೌಳಿ ತಮ್ಮ ಮುಂದಿನ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಘೋಷಣೆ ಮಾಡಲು ಆಸಕ್ತಿ ಹೊಂದಿಲ್ಲ . ಆರ್​​ಆರ್​ಆರ್​​ಬಿಡುಗಡೆಯಾದ ನಂತರವೇ ಎಸ್.ಎಸ್.ರಾಜಮೌಳಿ ತಮ್ಮ ಮುಂದಿನ ಯೋಜನೆಯನ್ನು ಪ್ರಕಟಿಸಬಹುದು ಎಂದು ಮೂಲಗಳು ತಿಳಿಸಿವೆ.

ಇದರಲ್ಲಿ ಯಂಗ್ ಟೈಗರ್ ಜೂನಿಯರ್ ಎನ್​​ಟಿಆರ್ ಮತ್ತು ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮುಖ್ಯ ಪಾತ್ರದಲ್ಲಿದ್ದಾರೆ.

ಆರ್‌ಆರ್‌ಆರ್ ಒಂದು ದೊಡ್ಡ ಬಜೆಟ್ ನ ಬಹುಭಾಷಾ ಚಲನಚಿತ್ರವಾಗಿದ್ದು, ಇದನ್ನು ಡಿವಿವಿ ಎಂಟರ್‌ಟೇನ್‌ಮೆಂಟ್ಸ್ ಅಡಿ ಡಿವಿವಿ ದನಯ್ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಒಲಿವಾ ಮೊರಿಯಾ, ಆಲಿಯಾ ಭಟ್ ಮತ್ತು ಅಜಯ್ ದೇವ್‌ಗನ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಏತನ್ಮಧ್ಯೆ, ಗೀತಾ ಗೋವಿಂದಂ ಖ್ಯಾತಿಯ ಪರಶುರಾಮ್ ನಿರ್ದೇಶನದಲ್ಲಿ ಮಹೇಶ್ ಬಾಬು ತಮ್ಮ ಮುಂದಿನ ಪ್ರಾಜೆಕ್ಟ್ ಸರ್ಕಾರು ವಾರಿ ಪಾಟ ಚಿತ್ರದ ಚಿತ್ರೀಕರಣ ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ಇದೇ ಮೊದಲ ಬಾರಿಗೆ ಮಹೇಶ್ ಬಾಬು, ಕೀರ್ತಿ ಸುರೇಶ್ ಜತೆ ತೆರೆ ಮೇಲೆ ಬರಲಿದ್ದಾರೆ.

ಏನೇ ಇರಲಿ, ರಾಜಮೌಳಿ ಮುಂದಿನ ನಡೆಯನ್ನು ಆರ್​ಆರ್​ಆರ್ ಬಿಡುಗಡೆಯಾಗುವವರೆಗೂ ಅಭಿಮಾನಿಗಳು ಕಾಯಲೇಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net