ನಿರುದ್ಯೋಗಿಗಳಿಗೆ ಯುವನಿಧಿ: ಆದೇಶ ಮಾಡೇಬಿಟ್ಟ ಸರ್ಕಾರ; ಈ ಗ್ಯಾರಂಟಿಗೆ ಷರತ್ತುಗಳೇನು?

Yuva nidhi
Published on

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಒಂದೊಂದೇ ಗ್ಯಾರಂಟಿ ಕುರಿತಾಗಿ ಆದೇಶಗಳನ್ನು ಮಾಡಿದೆ. ಅಂದರೆ ತನ್ನ ಐದು ಗ್ಯಾರಂಟಿಗಳ ಮತ್ತೊಂದು ಗ್ಯಾರಂಟಿಗೆ ಆದೇಶ ಮಾಡಿಬಿಡುವ ಮೂಲಕ ಬದ್ಧತೆಯನ್ನು ತೋರಿದೆ.

ರಾಜ್ಯದಲ್ಲಿ ಪದವೀಧರ ಮತ್ತು ಡಿಪ್ಲೊಮಾ ಪಾಸ್ ಆದ ನಿರುದ್ಯೋಗಿಗಳಿಗೆ ಯುವನಿಧಿ ಯೋಜನೆಯಡಿ ಕ್ರಮವಾಗಿ ಮಾಸಿಕ 3 ಸಾವಿರ ಮತ್ತು ಮಾಸಿಕ 1,000 ನೀಡುವ ಕುರಿತು ಕೂಡ ಆದೇಶವನ್ನು ಮಾಡಿದೆ. ಆದರೆ ಈ ಸಂಬಂಧ ಕೆಲವು ಷರತ್ತುಗಳಿವೆ.

ಯುವನಿಧಿ ಯೋಜನೆಯಡಿ ನೀಡುವ ನಿರುದ್ಯೋಗ ಭತ್ಯೆ 2022-23ನೇ ಸಾಲಿನಲ್ಲಿ ತೇರ್ಗಡೆಯಾದವರಿಗಷ್ಟೇ ಅನ್ವಯಿಸಲಿದೆ. ಅಲ್ಲದೆ ಇದು ಉದ್ಯೋಗ ದೊರಕುವವರೆಗೆ ಅಥವಾ ಗರಿಷ್ಠ ಎರಡು ವರ್ಷಗಳ ವರೆಗೆ ಮಾತ್ರ ಸಿಗಲಿದೆ. ಅಲ್ಲದೆ ಯೋಜನೆ ಅನುಷ್ಠಾನಗೊಳಿಸುವ ಕುರಿತು ವಿವರವಾದ ಷರತ್ತು ಮತ್ತು ನಿಬಂಧನೆಗಳನ್ನು ಪ್ರತ್ಯೇಕವಾಗಿ ಹೊರಡಿಸುವುದಾಗಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net