More

    ಗುಡುಗು ಸಹಿತ ಭಾರಿ ಮಳೆ: ಬಿಎಂಟಿಸಿ ಬಸ್​ ಮೇಲೇ ಬಿದ್ದ ಮರ, ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿದ ಆ್ಯಂಬುಲೆನ್ಸ್

    ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ.ಶಿವಕುಮಾರ್​ ಹಾಗೂ 8 ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಮುಗಿಯುತ್ತಿದ್ದ ಬೆನ್ನಿಗೇ ರಾಜಧಾನಿ ಬೆಂಗಳೂರಿನಲ್ಲಿ ಗುಡುಗುಸಹಿತ ಭಾರಿ ಮಳೆ ಭೋರ್ಗರೆದಿದೆ.

    ಬೆಂಗಳೂರಿನ ಹಲವು ಕಡೆ ಸಂಜೆ 4ರ ಬಳಿಕ ಗುಡುಗುಸಹಿತವಾಗಿ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮೊದಲೇ ಪ್ರಮಾಣವಚನ ಸ್ವೀಕಾರಕ್ಕಾಗಿ ಕಂಠೀರವ ಕ್ರೀಡಾಂಗಣಕ್ಕೆ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರಿಂದ, ವಾಹನ ಹಾಗೂ ಜನದಟ್ಟಣೆ ಉಂಟಾಗಿದೆ. ಅದೇ ಸಮಯಕ್ಕೆ ಮಳೆ ಬಂದಿದ್ದರಿಂದ ಸಂಚಾರದಟ್ಟಣೆ ಉಂಟಾಗಿದೆ.

    ಇದನ್ನೂ ಓದಿ: ಅಮ್ಮ 20 ಸಾವಿರ ರೂ. ಕೊಡಲಿಲ್ಲ ಅಂತ ಪ್ರಾಣ ಕಳ್ಕೊಂಡ ಬಿಕಾಂ ಪದವೀಧರ!

    ಭಾರಿ ಮಳೆಯಾದ ಕಾರಣ ವಿಧಾನಸೌಧ ಸುತ್ತಮುತ್ತ ಭಾರಿ ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಮಾತ್ರವಲ್ಲ, ಆ್ಯಂಬುಲೆನ್ಸ್ ಕೂಡ ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿಕೊಂಡಿದೆ. ಮತ್ತೊಂದೆಡೆ ಮೆಜೆಸ್ಟಿಕ್ ಪ್ರದೇಶ ಮಳೆಯಿಂದಾಗಿ ಕೆರೆಯಂತಾಗಿದೆ. ಬಿಬಿಎಂಪಿಗೆ ಸಮೀಪದಲ್ಲಿ ಬಿಎಂಟಿಸಿ ಬಸ್ ಮೇಲೆ ಮರ ಬಿದ್ದಿದೆ. ಇನ್ನೂ ಹಲವೆಡೆ ಮರಗಳು ಬಿದ್ದಿದ್ದು, ತಗ್ಗುಪ್ರದೇಶಕ್ಕೆ ನೀರು ನುಗ್ಗಿದೆ. ಕಾರ್ಪೋರೇಷನ್ ಬಳಿ ರಸ್ತೆ ಬದಿ ನಿಂತಿದ್ದ ಆಟೋ ಮೇಲೆ ಮರದ ಕೊಂಬೆ ಬಿದ್ದಿದ್ದು, ಟಾಪ್ ಸಂಪೂರ್ಣ ಹಾನಿಯಾಗಿದೆ. ಅದೃಷ್ಟವಶಾತ್ ಆಟೋ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಐದೂ ‘ಗ್ಯಾರಂಟಿ’, ಆರನೇ ಭರವಸೆ ಗ್ಯಾರಂಟಿಯಾ?: ರಾಹುಲ್ ಗಾಂಧಿ ಹೇಳಿದ್ದೇನು?

    ಬಂಕ್​ನಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುವಾಗ ಧಗ್ಗನೆ ಹೊತ್ತಿಕೊಂಡ ಬೆಂಕಿ: ಪುತ್ರಿ ಸಾವು, ತಾಯಿ ಪರಿಸ್ಥಿತಿ ಗಂಭೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts