More

    ನಗರದ ಸುಶಿಕ್ಷಿತ ಸತ ಪ್ರಜೆಗಳಿಗೆ ನಮ್ಮ ಶ್ರದ್ಧಾಂಜಲಿ:ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

    ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 14 ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ ನಡೆಯಿತು. ಆದರೆ, ಪ್ರತಿ ಬಾರಿಯಂತೆ ಈ ಬಾರಿಯೂ ಬೆಂಗಳೂರಿನಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದ್ದು, ಈ ಮೂಲಕ “ಫಸ್ಟ್​ ಕ್ಲಾಸ್​ ಸಿಟಿಯಲ್ಲಿ ಸೆಕೆಂಡ್​ ಕ್ಲಾಸ್​ ಮತದಾನ’ ಎಂಬ ಬಿರುದು ಬೆಂಗಳೂರಿಗೆ ಪಾಲಾಗಿದೆ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.

    ಅಲ್ಲದೆ, ನಗರದ ಪ್ರಬುದ್ಧ ಮತದಾರರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಅಷ್ಟೊಂದು ಪ್ರಚಾರದ ನಂತರವೂ ಮತದಾನದಿಂದ ದೂರ ಉಳಿದು ಬದುಕಿದ್ದರೂ ಸತ್ತಂತೆ ವರ್ತಿಸಿದ ಬೆಂಗಳೂರು ನಗರದ ಸುಶಿಕ್ಷಿತ ಸತ ಪ್ರಜೆಗಳಿಗೆ ನಮ್ಮ ಶ್ರದ್ಧಾಂಜಲಿಗಳು’ ಎಂದು ಬ್ಯಾನರ್​ ಹಾಕಿದ್ದಾರೆ. ಕೆಲವರು ಇದನ್ನು ವಾಟ್ಸಾಪ್​ ಸ್ಟೇಟಸ್​ನಲ್ಲಿ ಹಾಕಿ ಮತ ಹಾಕಲು ನಿರ್ಲಕ್ಷ್ಯವಹಿಸಿರುವ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ಪ್ರತಿ ಸಲದಂತೆ 2024ರ ಲೋಕಸಭಾ ಚುನಾವಣೆಯಲ್ಲಿಯೂ ವಲಸಿಗರು ಕೈ ಕೊಟ್ಟಿದ್ದಾರೆ. ಮತದಾನ ಮಾಡುವ ಹಕ್ಕು ಇದ್ದರೂ ಮತ ಹಾಕಿಲ್ಲ. ಇವರು ಬದುಕಿದ್ದು ಸತ್ತಂತೆ. ಪ್ರತಿ ಚುನಾವಣೆಯಲ್ಲಿ ನಗರದಲ್ಲಿ ಕಡಿಮೆ ಮತದಾನವಾಗುತ್ತಿದೆ.ಮತದಾನ ಪ್ರಮಾಣ ಹೆಚ್ಚಿಸಲು ಬಿಬಿಎಂಪಿ ಸಾಕಷ್ಟು ಪ್ರಯತ್ನಿಸಿದ್ದರೂ ಪ್ರಯೋಜನವಾಗಲಿಲ್ಲ. ಪ್ರಜಾಪ್ರಭುತ್ವ ಹಬ್ಬದಲ್ಲಿ ತಮ್ಮ ಹಕ್ಕು ಚಲಾಯಿಸಬೇಕಾದ ಪ್ರಬುದ್ಧ ಮತದಾರರು ಮತದಾನದಿಂದ ದೂರವುಳಿಯುತ್ತಿರುವುದು ಸರಿಯಲ್ಲ ಎಂದು ಹೆಸರು ಹೇಳದ ವ್ಯಕ್ತಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

    15 ಜಿಲ್ಲೆಗಳಲ್ಲಿ ಮುಂದುವರಿದ ಶಾಖ ಅಲೆ:ಮೊದಲ ಬಾರಿ ಬೆಂಗಳೂರಿನಲ್ಲಿ ಅಧಿಕ ತಾಪಮಾನ

    ಅಭಿಪ್ರಾಯ ಹಂಚಿಕೊಂಡ ಶಾಸಕ
    ರಾಜ್ಯ ರಾಜಧಾನಿಯಲ್ಲಿ ಕಡಿಮೆ ಮತದಾನಕ್ಕೆ ಕಾರಣಗಳೇನು? ಮತ್ತು ಏನು ಪರಿಹಾರ ಕಂಡುಕೊಳ್ಳಬಹುದು ಎಂಬುದರ ಬಗ್ಗೆ ಶಾಸಕ ಸುರೇಶ್​ ಕುಮಾರ್​, ಫೇಸ್​ಬುಕ್​ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಬೆಂಗಳೂರು ನಗರದಲ್ಲಿ ಮತ್ತೊಮ್ಮೆ ಕಡಿಮೆ ಮತದಾನವಾಗಿದೆ. ಈ ಮೂಲಕ “ಫಸ್ಟ್​ ಕ್ಲಾಸ್​ ಸಿಟಿಯಲ್ಲಿ ಸೆಕೆಂಡ್​ ಕ್ಲಾಸ್​ ಮತದಾನ’ ಎಂಬ ಬಿರುದು ಸಹ ನಮ್ಮ ಪಾಲಾಗಿದೆ. ಚುನಾವಣಾ ಆಯೋಗವನ್ನು ಕನಿಷ್ಠ ಮೂರ್ನಾಲ್ಕು ಬಾರಿ ಮನವಿ ಮಾಡಿಕೊಂಡಿದ್ದೇನೆ. ಬೆಂಗಳೂರು ನಗರದಲ್ಲಿ ಚುನಾವಣೆಯನ್ನು ಶುಕ್ರವಾರ, ಶನಿವಾರ, ಭಾನುವಾರ ಮತ್ತು ಸೋಮವಾರ ಇಡಬಾರದು. ಮತದಾನ ದಿನ ಶುಕ್ರವಾರವಾದರೆ, ಆಯಾ ದಿನವನ್ನು ರಜೆಯೆಂದು ಘೋಷಿಸಿದರೆ ಅನೇಕರು ಇದನ್ನು ದೀರ್ ವಾರಾಂತ್ಯವೆಂದು ಪರಿಗಣಿಸಿ ತಮ್ಮ ಸಂತೋಷಕ್ಕಾಗಿ ಉಪಯೋಗಿಸಿಕೊಳ್ಳುತ್ತಾರೆ. ಇದು ಸಹಜ ಎಂದು ಬೆರೆದುಕೊಂಡಿದ್ದಾರೆ. ಅಲ್ಲದೆ, ಮತದಾರ ಪಟ್ಟಿಯನ್ನು ಪೂರ್ಣ ಸ್ವಚ್ಛಗೊಳಿಸುವ ಕಾರ್ಯ ಆಗಬೇಕು. ಆಧಾರ್​ ಕಾರ್ಡ್​ ಲಿಂಕ್​ ಆಗುವವರೆಗೂ 2-3 ಕಡೆಗಳಲ್ಲಿ ಮತದಾರರ ಹೆಸರು ಇರುತ್ತದೆ. ಇದರಿಂದಾಗಿ ಮತದಾನ ಪ್ರಮಾಣಕ್ಕೆ ಏಟು ಬೀಳುತ್ತದೆ. ಹಾಗಾಗಿ, ವೋಟರ್​ ಐಡಿಗೆ ಆಧಾರ್​ ಕಾರ್ಡ್​ ಲಿಂಕ್​ ಮಾಡಬೇಕು ಎಂದು ಸುರೇಶ್​ ಕುಮಾರ್​ ಸಲಹೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts