More

    ಐದೂ ‘ಗ್ಯಾರಂಟಿ’, ಆರನೇ ಭರವಸೆ ಗ್ಯಾರಂಟಿಯಾ?: ರಾಹುಲ್ ಗಾಂಧಿ ಹೇಳಿದ್ದೇನು?

    ಬೆಂಗಳೂರು: ಬಹುತೇಕ ಐದು ಗ್ಯಾರಂಟಿಗಳ ಭರವಸೆ ಮೇಲೆಯೇ ಬಹುಮತ ಪಡೆದು ಗೆದ್ದ ಕಾಂಗ್ರೆಸ್ ರಾಜ್ಯದಲ್ಲಿ ಇಂದು ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ.ಶಿವಕುಮಾರ್ ಹಾಗೂ ಇತರ 8 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಸರ್ಕಾರ ರಚನೆಯಾಗಿದೆ.

    ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಾವು ನಿಮಗೆ ಐದು ಭರವಸೆಗಳನ್ನು ನೀಡಿದ್ದೆವು. ಹಾಗೇ ನಾವು ಸುಳ್ಳು ಭರವಸೆ ನೀಡುವುದಿಲ್ಲ ಎಂದೂ ಮಾತು ನೀಡಿದ್ದೆವು. ನಾವು ಏನು ಹೇಳಿದ್ದೆವೋ ಅದನ್ನು ಮಾಡುತ್ತೇವೆ. ಸರ್ಕಾರ ರಚನೆಯಾದ ಒಂದೆರಡು ಗಂಟೆಗಳಲ್ಲಿ ಮೊದಲ ಸಂಪುಟ ಸಭೆ ನಡೆಯುತ್ತದೆ, ಅಲ್ಲಿ ಐದೂ ಗ್ಯಾರಂಟಿಗಳು ಕಾನೂನಾಗುತ್ತವೆ ಎನ್ನುವ ಮೂಲಕ ರಾಹುಲ್​ ಗಾಂಧಿ ತಮ್ಮ ಪಕ್ಷ ನೀಡಿದ್ದ ಐದು ‘ಗ್ಯಾರಂಟಿ’ಗಳು ಈಡೇರುವುದು ಗ್ಯಾರಂಟಿ ಎಂದರು.

    ಇದನ್ನೂ ಓದಿ: 2000 ರೂ. ನೋಟು ಹಿಂಪಡೆತ: ಒಮ್ಮೆಗೆ 20 ಸಾವಿರ ರೂ. ಮಾತ್ರ ಬದಲಿಸಿಕೊಳ್ಳಲು ಅವಕಾಶ

    ಇದೇ ಸಂದರ್ಭದಲ್ಲಿ ಅವರು ಇನ್ನೊಂದು ಭರವಸೆಯನ್ನೂ ನೀಡಿದರು. ನಾವು ನಿಮಗೆ ಸ್ವಚ್ಛ ಹಾಗೂ ಭ್ರಷ್ಟಾಚಾರ ರಹಿತ ಸರ್ಕಾರ ನೀಡುವುದಾಗಿ ಹೇಳಿದರು. ಐದು ಗ್ಯಾರಂಟಿಗಳ ಕುರಿತು ಮಾತನಾಡಿದ್ದ ಸಂದರ್ಭದಲ್ಲೇ ಅವರು ಹೇಳಿರುವ ಈ ಆರನೇ ಭರವಸೆ ಈಡೇರುವುದು ಗ್ಯಾರಂಟಿಯಾ? ಎಂಬ ಜಿಜ್ಞಾಸೆ ಈಗ ಜನರಲ್ಲಿ ಮೂಡಿದೆ. ಏಕೆಂದರೆ ಕಾಂಗ್ರೆಸ್ ತನ್ನ ಹಿಂದಿನ ಅವಧಿಯ ಆಡಳಿತದಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿದ್ದು, 10% ಸರ್ಕಾರ ಎಂಬ ಟೀಕೆಗೆ ಗುರಿಯಾಗಿತ್ತು. ಬಳಿಕ ಬಂದ ಬಿಜೆಪಿ ಕೂಡ ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿದ್ದು, 40% ಕಮಿಷನ್ ಸರ್ಕಾರ ಎಂದು ನೇರವಾಗಿ ಗುತ್ತಿಗೆದಾರರಿಂದಲೇ ಆರೋಪಕ್ಕೆ ಒಳಗಾಗಿತ್ತು. ಈಗ ಮತ್ತೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನಿಜವಾಗಿಯೂ ಭ್ರಷ್ಟಾಚಾರರಹಿತ ಸರ್ಕಾರ ನೀಡಲಿದೆಯೇ? ರಾಹುಲ್ ಗಾಂಧಿ ನೀಡಿದ್ದ ಭರವಸೆ ಗ್ಯಾರಂಟಿ ಈಡೇರಲಿದೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

    ಬಂಕ್​ನಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುವಾಗ ಧಗ್ಗನೆ ಹೊತ್ತಿಕೊಂಡ ಬೆಂಕಿ: ಪುತ್ರಿ ಸಾವು, ತಾಯಿ ಪರಿಸ್ಥಿತಿ ಗಂಭೀರ

    ನಾರಾಯಣ ನೇತ್ರಾಲಯದ ಡಾ.ಭುಜಂಗ ಶೆಟ್ಟಿ ಇನ್ನಿಲ್ಲ: ವ್ಯಾಯಾಮ ಮಾಡುತ್ತಿದ್ದಾಗ ಹೃದಯಾಘಾತ, ಕುಸಿದು ಬಿದ್ದು ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts