ನಿಮ್ಮ ಕನ್ನಡ ಹುಟ್ಟಿದ್ದು ತಮಿಳಿನಿಂದ: ನಟ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ..! | Controversial Statement

dk - 2025-05-27T173153.587
Published on

Controversial Statement: ಇತ್ತೀಚಿಗೆ ಚೆನ್ನೈನಲ್ಲಿ ನಡೆದ ಥಗ್ ಲೈಫ್ ಸಿನಿಮಾದ ಈವೆಂಟ್​ನಲ್ಲಿ ತಮಿಳು ನಟ ಕಮಲ್​ ಹಾಸನ್​ ವಿವಾದಾತ್ಮಾಕ ಹೇಳಿಕೆ ನೀಡಿದ್ದು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹೌದು, ಕಾರ್ಯಕ್ರಮದ ವೇದಿಕೆಯಲ್ಲಿ ನಟ ಶಿವರಾಜ್​ಕುಮಾರ್ ಎದುರೇ ನಿಮ್ಮ ''ಕನ್ನಡ ಹುಟ್ಟಿದ್ದು ತಮಿಳಿನಿಂದ'' ಎಂದ ಕಮಲ್ ಹಾಸನ್​ ಹೇಳಿದ್ದಾರೆ. ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ಥಗ್ ಲೈಫ್ ಈವೆಂಟ್‌ನಲ್ಲಿ ಭಾಗವಹಿಸಿ ಚಿತ್ರಕ್ಕೆ ಬೆಂಬಲ ನೀಡಿದ್ದ ಶಿವಣ್ಣ ಈ ವೇಳೆ ಕಮಲ್ ಹಾಸನ್ ಅವರೂ ಡಾ.ರಾಜ್‌ಕುಮಾರ್ ಬಗ್ಗೆ ತಮಗಿದ್ದಾರೆ ಎಂದು ಕಾರ್ಯಕ್ರಮಕ್ಕೆ ಗೌರವದದಿಂದ ಭಾಗವಹಿಸಿದ್ದಾಗಿ ಹೇಳಿದ್ದರು. ಕನ್ನಡಿಗರ ಪ್ರೀತಿ, ಗೌರವಕ್ಕೆ ವಂದಿಸುತ್ತಲೇ ನಿಮ್ಮ ಕನ್ನಡ ನಮ್ಮಿಂದ ಬಂದಿದ್ದು ಎಂದು ಕಮಲ್ ಹಾಸನ್ ಅವರು ಹೇಳಿಕೆ ನೀಡಿದ್ದಾರೆ. ಕಮಲ್ ಹಾಸನ್ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕನ್ನಡವು ತಮಿಳಿನ ಬೇರುಗಳಂತೆ ಬೆಳೆದಿದೆ. ಖಂಡಿತ ನಾವು ಶಬ್ದಕೋಶವನ್ನು ಹಂಚಿಕೊಂಡಿದ್ದೇವೆ ಆದರೆ ನಿಮ್ಮ (ತಮಿಳು) ಭಾಷೆ ಕನ್ನಡದ ತಾಯಿಯಲ್ಲ ಅಂತ ಎಂಬ ಸೋಷಿಯಲ್​ ಮೀಡಿಯಾದಲ್ಲಿ ನೆಟ್ಟಿಗರು ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net