ಪಾಲಕರು ತಮ್ಮ ಮಕ್ಕಳ ಮುಂದೆ ಈ ತಪ್ಪುಗಳನ್ನು ಮಾಡಿದರೆ ಖಂಡಿತ ದಾರಿತಪ್ಪುತ್ತಾರೆ: ಎಚ್ಚರವಿರಲಿ | Parents

Parents
Published on

Parents: ಇತ್ತೀಚಿನ ದಿನಗಳಲ್ಲಿ ಪೋಷಕರಾಗುವುದು ಸುಲಭವಲ್ಲ. ಹೊಸ ಪೀಳಿಗೆ ಹಿಂದಿನ ಪೀಳಿಗೆಗಿಂತ ಹೆಚ್ಚು ಚುರುಕಾಗಿದೆ. ಅವರು ಏನು ನೋಡಿದರೂ ಅದನ್ನೇ ಮಾಡಲು ಮುಂದಾಗುತ್ತಾರೆ. ಅದಕ್ಕಾಗಿಯೇ ಆ ವಯಸ್ಸಿನಲ್ಲಿ ಅವರಿಗೆ ಒಳ್ಳೆಯದನ್ನು ಕಲಿಸಬೇಕು. ಆದರೆ, ಪೋಷಕರು ತಮಗೆ ತಿಳಿಯದೆ ಮಾಡುವ ಸಣ್ಣ ತಪ್ಪುಗಳು ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತಿವೆ. ಹಾಗಾದ್ರೆ ಪಾಲಕರು ತಮ್ಮ ಮಕ್ಕಳ ಮುಂದೆ ಅನುಸರಿಸಬೇಕಾದ ಕೆಲವು ಮುನ್ನೆಚ್ಚರಿಕೆಗಳು ಇಲ್ಲಿವೆ ನೋಡಿ.

ಟೀಕಿಸುವುದು

ಗಂಡ ಹೆಂಡತಿ ಮಕ್ಕಳ ಮುಂದೆ ಒಬ್ಬರನ್ನೊಬ್ಬರು ಅತಿಯಾಗಿ ಕೂಗಾಡುವುದು ಒಳ್ಳೆಯದಲ್ಲ. ಮಕ್ಕಳ ಮುಂದೆ ಹೀಗೆ ಮಾಡುವುದರಿಂದ ಅವರ ಮಾನಸಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆ ಸಮಯದಲ್ಲಿ ಆಡುವ ಕೆಲವು ಅನುಚಿತ ಪದಗಳನ್ನು ಮಕ್ಕಳು ಬಹಳ ಬೇಗ ಅರ್ಥಮಾಡಿಕೊಳ್ಳುತ್ತಾರೆ. ನಂತರ ಅದನ್ನೇ ಅವರು ಕೂಡ ಆಡಲು ಬಳಸುತ್ತಾರೆ. ಅದಕ್ಕಾಗಿಯೇ ಸಾಧ್ಯವಾದಷ್ಟು ಒಬ್ಬರನ್ನೊಬ್ಬರು ಟೀಕಿಸುವುದನ್ನು ನಿಲ್ಲಿಸಬೇಕು. ಅದನ್ನು ಹೇಳುವ ರೀತಿಯಲ್ಲಿಯೇ ಹೇಳಬೇಕು.

ನಿರ್ಲಕ್ಷಿಸುವುದು

ಕೋಪ ಸಾಮಾನ್ಯ. ಆದರೆ ಗಂಡ ಹೆಂಡತಿ ಒಬ್ಬರಿಗೊಬ್ಬರು ಮಾತನಾಡದೆ ಸುಮ್ಮನೆ ಕುಳಿತರೆ ಮಕ್ಕಳು ತೊಂದರೆಗೆ ಸಿಲುಕುತ್ತಾರೆ. ಯಾರ ಜೊತೆ ಮಾತನಾಡಬೇಕೆಂದು ತಿಳಿಯದೆ ಅವರು ಗೊಂದಲಕ್ಕೊಳಗಾಗುತ್ತಾರೆ. ಇದಲ್ಲದೆ, ಆ ಹಂತದಲ್ಲಿ ನಿಮ್ಮನ್ನು ಅರ್ಥಮಾಡಿಕೊಳ್ಳುವ ಪ್ರಬುದ್ಧತೆ ಅವರಿಗಿರುವುದಿಲ್ಲ. ಗಂಡ ಹೆಂಡತಿಯರು ಪರಸ್ಪರ ನಿರ್ಲಕ್ಷಿಸುವುದು ಒಳ್ಳೆಯದಲ್ಲ. ನಿಮ್ಮ ಮಕ್ಕಳ ಮುಂದೆ ಹೀಗೆ ಮಾಡಿದರೆ, ನೀವು ಮತ್ತು ನಿಮ್ಮ ಮಕ್ಕಳು ಖಂಡಿತವಾಗಿಯೂ ತೊಂದರೆಗೆ ಸಿಲುಕುತ್ತೀರಿ.

ವಾದ ಮಾಡುವುದು

ಮನೆಯಲ್ಲಿ ಸಣ್ಣಪುಟ್ಟ ಜಗಳಗಳು ಸಂಭವಿಸುವುದು ಬಹಳ ಸಾಮಾನ್ಯ. ಆದರೆ ನಾವು ಅವುಗಳನ್ನು ಯಾವ ಹಂತದಲ್ಲಿ ನಿಲ್ಲಿಸುತ್ತೇವೆ ಎಂಬುದು ಮಗುವಿನ ಮಾನಸಿಕ ಸ್ಥಿತಿಯನ್ನು ನಿರ್ಧರಿಸುತ್ತದೆ. ಕೆಲವು ಗಂಡ ಹೆಂಡತಿಯರು ಕ್ಷುಲ್ಲಕ ವಿಷಯಗಳಿಗೂ ಜಗಳವಾಡುತ್ತಾರೆ. ಮನೆಯಲ್ಲಿ ಬಹಳ ಸಮಯದವರೆಗೆ ಜಗಳವಾಡುತ್ತಿರುತ್ತಾರೆ. ಇದು ಮಕ್ಕಳಲ್ಲಿ ಕಿರಿಕಿರಿ, ಕೋಪ ಮತ್ತು ಗೊಂದಲಕ್ಕೆ ಕಾರಣವಾಗುತ್ತದೆ. ನಂತರ ಅವರು ಕೂಡ ಈ ರೀತಿಯಾಗಿ ಬೇರೊಬ್ಬರ ಜೊತೆ ಜಗಳವಾಡುತ್ತಾರೆ. ಅದಕ್ಕಾಗಿಯೇ ಸಾಧ್ಯವಾದಷ್ಟು ಕಾಲ ಮನೆಯಲ್ಲಿ ಜಗಳವಾಡುವುದನ್ನು ತಪ್ಪಿಸುವುದು ಉತ್ತಮ.

ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡಬೇಡಿ

ನಿಮ್ಮ ಮಕ್ಕಳ ಮುಂದೆ ನಿಮ್ಮ ವೈಯಕ್ತಿಕ ವಿಷಯಗಳನ್ನು ಚರ್ಚಿಸಬಾರದು. ಹೀಗೆ ಮಾಡಿದರೆ ಅವರು ಕೂಡ ನಿಮ್ಮ ಮುಂದೆಯೇ ಅಂತಹ ವಿಷಯಗಳ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾರೆ. ಬೇರೆ ನೆರೆಯ ವ್ಯಕ್ತಿಗಳ ಜೊತೆಗೆ ಮಾತನಾಡಲು ಶುರುಮಾಡಬಹುದು. ಇದು ನಿಮಗೆ ಮುಂದೆ ಸಂಕಷ್ಟಕ್ಕೆ ಸಿಲುಕಿಸಬಹುದು. ವೈಯಕ್ತಿಕ ವಿಷಯಗಳನ್ನು ವೈಯಕ್ತಿಕವಾಗಿ ಇಟ್ಟುಕೊಳ್ಳುವುದು ಉತ್ತಮ.

ಹೀಗೆ ನಿಮ್ಮ ಮಕ್ಕಳ ಮುಂದೆ ಈ ರೀತಿಯ ವಿಷಗಳಿಂದ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net