ನೀನು ಕಪ್ಪು, ಕೊಳಕು, ಏಕೆ ಸಾಯಬಾರದು... ಅಚ್ಚರಿ ಸಂಗತಿ ಬಿಚ್ಚಿಟ್ಟ ಬಾಲಿವುಡ್​​ ಖ್ಯಾತ ನಟನ ಮಗಳು! | Bollywood Actor

dk - 2025-06-10T182310.223
Published on

Bollywood Actor : ಜೀವನದ ಒಂದು ಹಂತದಲ್ಲಿ ಎಲ್ಲಿಯಾದರೂ ಒಮ್ಮೆ ನೋವು, ಕಷ್ಟ, ಜನಾಂಗೀಯ ನಿಂದನೆ ಸೇರಿ ಕೃತ್ಯಗಳು ಎದುರಿಸಿರುತ್ತಾರೆ. ಇದು ಸಾಮಾನ್ಯರಿಗೆ ಮಾತ್ರಲ್ಲ ಸೆಲೆಬ್ರೆಟಿಗಳು ಸೇರಿ ಖ್ಯಾತನಾಮರು ಇಂತಹ ನೋವು ಎದುರಿಸಿರುತ್ತಾರೆ. ಇದೀಗ ಅಂತದ್ದೇ ನೋವು ತಿಂದಿರುವ ಬಾಲಿವುಡ್​ನ ಖ್ಯಾತ ಸ್ಟಾರ್​ ಮಗಳು ಒಬ್ಬಳು ತನಗಾದ ನೋವಿನ ಕಥೆಯನ್ನು ಬಹಿರಂಗ ಪಡಿಸಿದ್ದಾರೆ.

ಹೌದು, ಬಾಲಿವುಡ್​ನ ಪ್ರಸಿದ್ಧ ನಟ ಜಾನಿ ಲಿವರ್ ಅವರ ಮಗಳು ಜೇಮೀ ಲಿವರ್ ಸಂದರ್ಶನವೊಂದರಲ್ಲಿ ತನ್ನ ಚರ್ಮದ ಬಣ್ಣ ಮತ್ತು ದೇಹದ ಆಕಾರಕ್ಕಾಗಿ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದರು ಮತ್ತು ಅನೇಕ ಜನರು ತನ್ನ ದೇಹದ ಬಗ್ಗೆ ಅಶ್ಲೀಲ ಕಾಮೆಂಟ್‌ಗಳನ್ನು ಸಹ ಮಾಡಿದ್ದಾರೆ ಎಂದು ಇದೀಗ ಬಹಿರಂಗ ಪಡಿಸಿದ್ದಾರೆ.

ಜೇಮೀ ಲಿವರ್ ಹೇಳಿದ್ದೇನು..?

ನನ್ನ ತಂದೆ ಜಾನಿ ಲಿವರ್​ ಖ್ಯಾತ ನಟನಾಗಿದ್ರು ಅನೇಕರು ನನ್ನ ಕೆಟ್ಟದಾಗಿ ಹಾಗೂ ಕೊಳುಕು ಕಾಮೆಂಟ್​​ಗಳನ್ನು ಮಾಡುತ್ತಿದ್ದರು. ಇದರಿಂದ ಸಾಕಷ್ಟು ನೋವು ಅನುಭವಿಸಿದ್ದೇನೆ. ಇದೇ ಮಾತ್ರವಲ್ಲ ಸೌಂದರ್ಯದ ಬಗ್ಗೆ ಅಸಹ್ಯಕರ ಕಾಮೆಂಟ್‌ಗಳು ಬಂದವು. ಕೆಲವರು, 'ನೀನು ಯಾಕೆ ಸಾಯಬಾರದು?' ಎಂದೂ ಕೇಳಿದರು.

ನೀನು ಕೊಳಕು, ನಿನಗೆ ಈ ಉದ್ಯಮದಲ್ಲಿ ಕೆಲಸ ಸಿಗುವುದಿಲ್ಲ' ಎಂದು ಹೇಳುತ್ತಿದ್ದರು. ನನ್ನ ನೋಟದಿಂದಾಗಿ ಅವಳಿಗೆ ಸಿನಿಮಾಗಳಲ್ಲಿ ಅವಕಾಶ ಸಿಗುವುದಿಲ್ಲ. ಅಲ್ಲದೇ ಪದೇಪದೆ ನನ್ನ ಮೈ ಬಣ್ಣದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರು. ಇದು ಕೇವಲ ಸಾಮಾಜಿಕ ಮಾಧ್ಯಮದಲ್ಲಿ ಮಾತ್ರದಲ್ಲಿ ಮಾತ್ರ ಅಲ್ಲ. ನರೆಹೊರೆಯವರಿಂದಲೂ ಅನುಭವಿಸಿದ್ದೇನೆ ಎಂದಿದ್ದಾರೆ.

ಭಾರತದಲ್ಲಿ ಬಿಳಿ ಚರ್ಮದ ಬಗ್ಗೆ ಅಪಾರ ಗೀಳು ಇದೆ. ಹೀಗಾಗಿ, ಬಾಲ್ಯದಲ್ಲಿ ಉಬ್ತಾನ್ ಮತ್ತು ಅರಿಶಿನವನ್ನು ಹಚ್ಚಲು ಸಲಹೆ ನೀಡಲಾಗಿತ್ತು.ಚಲನಚಿತ್ರೋದ್ಯಮವು ಮಹಿಳೆಯರಿಗೆ ಕಟ್ಟುನಿಟ್ಟಾದ ಸೌಂದರ್ಯ ಮಾನದಂಡಗಳನ್ನು ಹೊಂದಿರುವುದರಿಂದ ಆಕೆಯ ತಾಯಿ ಕೂಡ ತೂಕ ಇಳಿಸಿಕೊಳ್ಳಲು ಸಲಹೆ ನೀಡಿದರು. ಇದರಿಂದ ನಾನು ನನ್ನನ್ನು ನಾನು ಅಪ್ಪಿಕೊಳ್ಳಲು ಮತ್ತು ಪ್ರೀತಿಸಲು ಕಲಿತೆ ಎಂದು ಹೇಳಿಕೊಂಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net