ಕಸದ ತೊಟ್ಟಿಯ ಬಳಿ ಶೂಟಿಂಗ್​ ಮಾಡುವಾಗ ರಶ್ಮಿಕಾ ವರ್ತನೆಯ ಬಗ್ಗೆ ನಟ ಧನುಷ್​ ಅಚ್ಚರಿ ಹೇಳಿಕೆ! Rashmika Mandanna

Rashmika Mandanna
Published on

Rashmika Mandanna : ನ್ಯಾಷನಲ್​ ಕ್ರಶ್​ ಎಂದೇ ಖ್ಯಾತಿಯಾಗಿರುವ ರಶ್ಮಿಕಾ ಮಂದಣ್ಣ ಪ್ರಸ್ತುತ ಪ್ಯಾನ್ ಇಂಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿರುವ ನಾಯಕಿ. ಅನಿಮಲ್​, ಪುಷ್ಪ-2 ಮತ್ತು ಚಾವಾ ಮುಂತಾದ ಯಶಸ್ವಿ ಚಿತ್ರಗಳ ಮೂಲಕ ಕೋಟಿ ಕೋಟಿ ರೂಪಾಯಿ ಬಾಚುತ್ತಿರುವ ರಶ್ಮಿಕಾ, ಪ್ರಸ್ತುತ ಸಿನಿಮಾ ರಂಗದ ಉತ್ತುಂಗದಲ್ಲಿದ್ದಾರೆ. ಗೆಲುವಿನ ಅಲೆಯಲ್ಲಿ ತೇಲುತ್ತಿರುವ ರಶ್ಮಿಕಾ, ಸದ್ಯ ಅನೇಕ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ.

ಅಂದಹಾಗೆ, ರಶ್ಮಿಕಾರ ಇತ್ತೀಚಿನ ಚಿತ್ರ ಕುಬೇರ. ಇದು ಜೂನ್ 20 ರಂದು ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ, ಚಿತ್ರತಂಡ ಪ್ರಸ್ತುತ ಪ್ರಚಾರದಲ್ಲಿ ಬಿಜಿಯಾಗಿದೆ. ಇತ್ತೀಚೆಗೆ, ಮುಂಬೈನಲ್ಲಿ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ನಟ ಧನುಷ್, ರಶ್ಮಿಕಾ ಬಗ್ಗೆ ಒಂದು ಕುತೂಹಲಕಾರಿ ಸಂಗತಿಯನ್ನು ತಿಳಿಸಿದರು.

ಈ ಚಿತ್ರದಲ್ಲಿ ನಾನು ಭಿಕ್ಷುಕನ ಪಾತ್ರವನ್ನು ನಿರ್ವಹಿಸಿದ್ದೇನೆ. ಒಮ್ಮೆ ಡಂಪ್ ಯಾರ್ಡ್‌ನಲ್ಲಿ ಸುಮಾರು ಆರು ಗಂಟೆಗಳ ಕಾಲ ಚಿತ್ರೀಕರಣ ಮಾಡಬೇಕಾಗಿತ್ತು. ಆ ಸಮಯದಲ್ಲಿ, ಎಲ್ಲರೂ ಕಸದಿಂದ ಬರುವ ದುರ್ವಾಸನೆಯಿಂದ ಬಳಲುತ್ತಿದ್ದಾಗ, ರಶ್ಮಿಕಾ ಮಾತ್ರ ತನಗೆ ಏನೂ ವಾಸನೆ ಬರುತ್ತಿಲ್ಲ ಎನ್ನುತ್ತಿದ್ದರು. ಅದನ್ನು ಕೇಳಿ ನನಗೆ ಆಶ್ಚರ್ಯವಾಯಿತು ಎಂದು ಧನುಷ್ ಹೇಳಿದರು. ಇದೇ ಸಂದರ್ಭದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಧನುಷ್​, ಕುಬೇರ ಪಾತ್ರವು ತನಗೆ ಜೀವನದ ಇನ್ನೊಂದು ಮಗ್ಗುಲನ್ನು ಪರಿಚಯಿಸಿತು ಮತ್ತು ತನ್ನ ಬಾಲ್ಯದ ದಿನಗಳನ್ನು ನೆನಪಿಸಿತು ಎಂದರು.

ಇದೇ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿರುವ ನಟ ನಾಗಾರ್ಜುನ ಅವರು ಮಾತನಾಡಿ, ಈ ಸಿನಿಮಾದಲ್ಲಿ ರಶ್ಮಿಕಾ ಅವರನ್ನು ಆಕಾಶಕ್ಕೆ ಏರಿಸಿದ್ದೇನೆ ಎಂದರು. ಪ್ರತಿಭೆಯ ವಿಷಯದಲ್ಲಿ ರಶ್ಮಿಕಾ ತುಂಬಾ ಶಕ್ತಿಶಾಲಿ ಎಂದು ಹೊಗಳಿದರು. ಶೀಘ್ರದಲ್ಲೇ 'ಕೂಲಿ' ಸಿನಿಮಾ ಮೂಲಕ ಮತ್ತೊಮ್ಮೆ ಹಿಂದಿ ಪ್ರೇಕ್ಷಕರ ಮುಂದೆ ಬರುವುದಾಗಿ ಹೇಳಿದರು.

ಅಂದಹಾಗೆ, ಶೇಖರ್ ಕಮ್ಮುಲ ನಿರ್ದೇಶನದ 'ಕುಬೇರ' ಸಿನಿಮಾ ಬಹು ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಕೆಲವು ದಿನಗಳ ಹಿಂದೆ ಬಿಡುಗಡೆಯಾದ ಟೀಸರ್ ನೋಡಿದ ನಂತರ ಆ ನಿರೀಕ್ಷೆ ಹೆಚ್ಚಾಗಿದೆ. ಈಗಿನ ಟ್ರೆಂಡ್ ಪ್ರಕಾರ ಇದು ಆಕ್ಷನ್ ಸಿನಿಮಾ ಅಲ್ಲ. ಹಣ ಮತ್ತು ಅದರಿಂದ ಬರುವ ದುಷ್ಪರಿಣಾಮಗಳ ಬಗ್ಗೆ ತಿಳಿಸಲು ಈ ಸಿನಿಮಾವನ್ನು ನಿರ್ಮಿಸಲಾಗಿದೆ ಎಂದು ತೋರುತ್ತದೆ. ಕುಬೇರ ದೊಡ್ಡ ಪರದೆಯ ಮೇಲೆ ಯಾವ ರೀತಿಯ ಮ್ಯಾಜಿಕ್ ಮಾಡಲಿದೆ ಎಂಬುದನ್ನು ಕಾದು ನೋಡೋಣ? (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net