More

    ಅತಿಯಾದ ಮೇಕಪ್‌ನಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟಿ!

    ಮುಂಬೈ: ಮೇಕಪ್ ಮತ್ತು ಸಿನಿಮಾ ನಟರ ನಡುವಿನ ಬಂಧವನ್ನು ವರ್ಣಿಸಲು ಸಾಧ್ಯವಿಲ್ಲ. ಪಾತ್ರ ಮತ್ತು ಚಿತ್ರಕ್ಕೆ ನ್ಯಾಯ ಮಾಡಲು, ನಟರು ಸಾಕಷ್ಟು ಮೇಕಪ್ ಹಾಕಬೇಕು. ಆದರೆ ಕೆಲವೊಮ್ಮೆ ಈ ಮೇಕಪ್ ಆರೋಗ್ಯಕ್ಕೆ ಅಪಾಯಕಾರಿ ಆಗುತ್ತೆ. ಹಿಂದಿ ನಟಿ ಯಾನೀ ಭಾರದ್ವಾಜ್ ಅವರಿಗೂ ಅದೆ ಆಗಿದೆ. ಅವರು ಅಮೆಜಾನ್ ಪ್ರೈಮ್​​ನಲ್ಲಿ ಇತ್ತೀಚಿನ ಭಯಾನಕ ಚಲನಚಿತ್ರ ಛೋರಿಯಲ್ಲಿ ಚೋಟಿ ಮಾಯಿ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸಿನಿಮಾದಲ್ಲಿ ತುಂಬಾ ಭಾಗಗಳಲ್ಲಿ ನಟಿಯ ಪಾತ್ರಕ್ಕೆಂದು ಅವರ ಮುಖವನ್ನು ಪ್ರಾಸ್ಥೆಟಿಕ್ಸ್‌ ಮೇಕಪ್​​ನಿಂದ ಕವರ್ ಮಾಡಲಾಗಿತ್ತು, ನಟಿ ಯಾನೀ ಅವರ ಲುಕ್, ಮುಖ ಸುಟ್ಟ ಮಹಿಳೆಯಂತೆ ಕಾಣಲು ಪ್ರಾಸ್ಥೆಟಿಕ್ಸ್‌ ಮೇಕಪ್ ಮಾಡಿದ್ದು, ಅವರನ್ನು ಭಯಾನಕ, ಪ್ರೇತದಂತಹ ನೋಟದಲ್ಲಿ ಕಂಡ ಅಭಿಮಾನಿಗಳು ಸಾಕಷ್ಟು ಪ್ರಶಂಸಿಸಿದರು. ಆದರೆ, ಪ್ರಾಸ್ಥೆಟಿಕ್ಸ್‌ ಮೇಕಪ್​ನಿಂದ ನಟಿ ಅನುಭವಿಸಿದ ನೋವು ಇದೀಗ ಎಲ್ಲರಿಗೆ ಗೊತ್ತಾಗಿದೆ.
    ಇದರ ಬಗ್ಗೆ ಯಾನೀ ಅವರೆ ಮಾತಾಡಿದ್ದು, ”ಪ್ರಾಸ್ತೆಟಿಕ್ಸ್ ಮೇಕಪ್ ಹಾಕಲು 3-4 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಆ ಮೇಕಪ್ ತೆಗೆದುಹಾಕಲು 2 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ, ನಾನು ಸೆಟ್‌ನಲ್ಲಿ ಇತರರಿಗಿಂತ ಮುಂಚೆಯೇ ಹೋಗಬೇಕಿತ್ತು ಎಂದು ಅವರ ನೋವನ್ನು ಹೇಳಿಕೊಂಡರು ನಟಿ. ಸ್ಕ್ರೀನ್‌ನಲ್ಲಿ ಹೇಗೆ ಕಾಣುತ್ತದೆ ಎನ್ನುವುದಕ್ಕಿಂತಲೂ ಆ ಮೇಕಪ್ ಅನ್ನು ಭರಿಸುವುದು ತುಂಬಾನೆ ಕಷ್ಟಕರವಾಗಿತ್ತು. ನನ್ನ ಇಡೀ ದೇಹಕ್ಕೆ ಮೇಕಪ್ ಮಾಡುತ್ತಿದ್ದರು. ಹಾಗಾಗಿ, ಪೂರ್ತಿ ದೇಹದಿಂದ ಮೇಕಪ್ ತೆಗೆಯುವುದು ತುಂಬಾ ಕಷ್ಟದ ಕೆಲಸವಾಗಿತ್ತು. ಹೊಟ್ಟೆಯ ಮೇಲಿದ್ದ ಆ ಮೇಕಪ್ ಅನ್ನು ಒರೆಸುವಾಗ ಚಿಕ್ಕ ಚಿಕ್ಕ ಕೂದಲು ಎಳೆದಾಡುತಿದ್ದವು. ಆದರಿಂದ, ನನಗೆ ಆ ಭಾಗದಲ್ಲಿ ದದ್ದುಗಳು ಮತ್ತು ರಕ್ತಸ್ರಾವವೂ ಆಗುತ್ತಿತ್ತು. ಮುಖದ ಮೇಲೆ ಆ ಮೇಕಪ್ ಹಾಕಿಕೊಂಡು ಊಟ ಮಾಡಕ್ಕೂ ಅಗಲ್ಲ.

    ಅತಿಯಾದ ಮೇಕಪ್‌ನಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟಿ!

    ನಾನು ಪ್ರತಿದಿನ ನೋವು ನಿವಾರಕಗಳನ್ನು (Pain Killers) ನುಂಗುತ್ತಿದ್ದೆ. ಇದರಿಂದ, ನನಗೆ ಜ್ವರ ಬರುತ್ತಿತ್ತು, ನನ್ನ ಶ್ವಾಸಕೋಶಗಳು ಊದಿಕೊಂಡವು ಮತ್ತು ನನ್ನನ್ನು ಆಸ್ಪತ್ರೆಗೆ ಸಹ ಸೇರಿಸಲಾಯಿತು. ಜೊತೆಗೆ, ನಾನು ಮೆಂಟಲ್ ಸ್ಟ್ರೆಸ್​ಗೂ ಗುರಿಯಾಗಿದ್ದೆ”, ಎಂದು ನಟಿ ಹೇಳಿದ್ದಾರೆ. ನಟಿ ಯಾನೀ, ‘ನಾನು ‘ಛೋರಿ’ ಚಿತ್ರಕ್ಕೆ ಸಹಿ ಮಾಡಿದಾಗ ನನ್ನ ಬ್ಯಾಂಕ್ ಖಾತೆಯಲ್ಲಿ ಕೇವಲ 500 ರೂ. ಮಾತ್ರ ಇತ್ತು. ದುಡ್ಡಿಗಾಗಿ ಆ ಪಾತ್ರವನ್ನು ನಾನು ಒಪ್ಪಿಕೊಂಡೆಅಂತ ತಿಳಿಸಿದ್ದಾರೆ. ಮೇಕಪ್ ಮಾಡಿಕೊಂಡು ಚೆಂದ ಕಾಣಲು ಎಲ್ಲಾ ಹೆಣ್ಣು ಮಕ್ಕಳು ಬಯಸುತ್ತಾರೆ. ಆದರೆ, ಈ ನಟಿ ಮಾತ್ರ ಮೇಕಪ್ ಮಾಡಿಕೊಂಡು ಆರೋಗ್ಯವನ್ನೆ ಹಾಳು ಮಾಡಿಕೊಂಡಿದ್ದಾರೆ. ನಟಿ ಯಾನೀ ಅವರ ಕಥೆ ಕೇಳಿ ಇದೀಗ ಮೇಕಪ್ ನಮ್ಮ ದೇಹದ ಮೇಲೆ ಬೀರುವ ಪರಿಣಾಮಗಳನ್ನು ಯೋಚಿಸಿದರೆ ಹಲವರಿಗೆ ಹೆದರಿಕೆಯಾಗುತ್ತಿದೆ.

    ಸಮಂತಾ ಐಟಂ ಹಾಡಿನ ಮೊದಲ ಲುಕ್ ರಿಲೀಸ್! ಈ ಹಾಡಿಗೆ ನಟಿ ತಗೊಂಡಿದ್ದು ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ!

    ‘ಪುಷ್ಪ’ ಟ್ರೈಲರ್ ನೋಡಿದ ‘ಕನ್ನಡಿಗರು’ ಮತ್ತೆ ‘ರಶ್ಮಿಕಾ ಮಂದಣ್ಣ’ ಮೇಲೆ ಗರಂ! ಕಾರಣ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts