ಅಂದಹಾಗೆ, 'ಪುಷ್ಪ' ಸಿನಿಮಾ ನೋಡಲು ನಟ ಅಲ್ಲು ಅರ್ಜುನ್, ನಟಿ ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳು ಹೇಗೆ ಕಾದು ಕೂತಿದ್ದರೋ, ಹಾಗೆಯೇ ಸಮಂತಾಳ ಐಟಂ ಹಾಡನ್ನು ನೋಡಲು ಅವರ ಅಭಿಮಾನಿಗಳು ಕಾತುರರಾಗಿದ್ದರು. ಅಭಿಮಾನಿಗಳ ಕಾತುರಕ್ಕೆ ಒಂದು ಉಡುಗೊರೆಯಂತೆ ಇದೇ ಮೊದಲ ಭಾರಿ ಐಟಂ ಹಾಡಿನಲ್ಲಿ ನಟಿ ಸಮಂತಾ ಕಾಣಿಸಿಕೊಳ್ಳಲಿದ್ದು, ಆ ಹಾಡಿನ ಒಂದು ಲುಕ್, ಝಲಕ್ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ. ಹೌದು, ಸಮಂತಾ ಐಟಂ ಹಾಡಿನಲ್ಲಿ ತೊಟ್ಟಿರುವ ಉಡುಪಿನಲ್ಲೊಂದು ಫೋಟೋ ಸದ್ಯ ಪಡ್ಡೆ ಹುಡುಗರ ನಿದ್ದೆ ಗೆಡಿಸಿದೆ. ಈ ಫೋಟೋದಲ್ಲಿ ನಟಿ ಸಮಂತಾಳ ಮಾದಕ ಲುಕ್ ಅಭಿಮಾನಿಗಳನ್ನು ನಶೆಯಲ್ಲಿ ತೆಲಿಸುವಂತಿದೆ.