ಈಗಾಗಲೇ, ನಟಿ ರಶ್ಮಿಕಾ ಕನ್ನಡ ಸಿನಿಮಾಗಳಲ್ಲಿ ನಟಿಸುವುದು ಸಂಪೂರ್ಣ ನಿಲ್ಲಿಸಿದಂತಾಗಿದೆ. ಆದರೆ, ಅವರು ಕನ್ನಡಿಗರೆ ಅಲ್ವಾ. ಮತ್ತೆ ಬೇರೆ ಭಾಷೆಗಳಲ್ಲಿ ನಟಿಸುವುದು ಆರಂಭಿಸಿದ ಕೂಡಲೆ ಮಾತೃ ಭಾಷೆ ಕನ್ನಡವನ್ನೆ ಮಾರೆತರಾ? 'ಪುಷ್ಪ' ಚಿತ್ರ ಮೂಲತಃ ತೆಲುಗಿನದ್ದಾಗಿದ್ದು, ಆ ಭಾಷೆಯ ಟ್ರೈಲರ್ನಲ್ಲಿ ನಟಿ ರಶ್ಮಿಕಾ ತಮ್ಮ ಶ್ರೀವಲ್ಲಿ ಪಾತ್ರಕ್ಕೆ ಅವರದ್ದೆ ಧ್ವನಿಯಲ್ಲಿ ಡಬ್ಬಿಂಗ್ ಮಾಡಿದ್ದಾರೆ. ಆದರೆ, ಚಿತ್ರದ ಕನ್ನಡ ಟ್ರೈಲರ್ನಲ್ಲಿ ರಶ್ಮಿಕಾ ಅವರ ಪಾತ್ರಕ್ಕೆ ಬೇರೆಯವರ ಧ್ವನಿಯಲ್ಲಿ ಡಬ್ಬಿಂಗ್ ನೀಡಲಾಗಿದೆ. ಈ ವಿಚಾರ ಗಮನಿಸಿದ ಕನ್ನಡಿಗರು, ಸಿನಿಪ್ರಿಯರು, ರಶ್ಮಿಕಾ ಅಭಿಮಾನಿಗಳಿಗೆ ಬೇಸರ ತಂದಿದೆ. ಮಾತೃ ಭಾಷೆ ಕ್ನನಡವನ್ನು ಮರೆತರಾ ನಟಿ ರಶ್ಮಿಕಾ ಮಂದಣ್ಣ ಎಂದು ಅಭಿಮಾನಿಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸ ತೊಡಗಿದ್ದಾರೆ.