ಬೆಂಗಳೂರು: ನಟ ಧ್ರುವ ಸರ್ಜಾ ದೈತ್ಯ ದೇಹವನ್ನು ವರ್ಣಿಸಬೇಕಾಗಿಲ್ಲ. ಅವರ ಸ್ನಾಯುಗಳು, ಬೈಸೆಪ್ಸ್ ನೋಡಿದ ಗಂಡು ಮಕ್ಕಳು ಅವರಂತೆ ದೇಹದ ನಿರ್ವಹಣೆ ಮಾಡಬೇಕೆಂದು ಬಯಸುತ್ತಾರೆ. ಇನ್ನು, ಹೆಣ್ಣು ಮಕ್ಕಳು ಅಂತೂ ನಟ ಧ್ರುವಗೆ ಫಿದಾ ಆಗಿದ್ದಾರೆ ಎಂದು ಹೇಳಬಹುದು. ಆದರೆ, ತಮ್ಮ ದೈತ್ಯ ದೇಹಕ್ಕೆ ಇದೀಗ ನಟ ಧ್ರುವ ಸರ್ಜಾ ಹೆಚ್ಚು ಹೆಚ್ಚು ಸಾಣೆ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಎಂದರೆ ನಿಮಗೆ ಹೇಗೆ ಅನಿಸಬಹುದು? ಹೌದು, ಮುಂಬರುವ ಒಂದು ಸಿನಿಮಾಗೆ ಧ್ರುವ ಮತ್ತೆ ಜಿಮ್ ಹೊಕ್ಕಿದ್ದಾರೆ.