Astronauts : ನಾವೆಲ್ಲರೂ ಗುರುತ್ವಾಕರ್ಷಣಾ ಶಕ್ತಿ ಹೊಂದಿರುವ ಭೂಮಿಯ ಮೇಲೆ ನಮ್ಮ ಜೀವನವನ್ನ ಕಟ್ಟಿಕೊಂಡು ಆರೋಗ್ಯವಾಗಿ ದಿನ ಕಳೆಯುತ್ತಿದ್ದೇವೆ. ಆದರೆ ಗುರುತ್ವಾಕರ್ಷಣೆಯೇ ಇಲ್ಲದ ವಾತಾವರಣದಲ್ಲಿ ಬದುಕುವುದು ಹೇಗೆ ಎಂದು ಒಂದು ಕ್ಷಣ ಊಹೆ ಮಾಡಲು ಕೂಡ ಅಸಾಧ್ಯ. ಆದರೆ ಅಂತಹ ವಾತಾವರಣದಲ್ಲಿದ್ದರೆ ಮಾನವನ ದೇಹಕ್ಕೆ ಕೂಡ ಹಲವು ಪರಿಣಾಗಳು ಬಿರುತ್ತದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶದಲ್ಲಿ ಒಂಬತ್ತು ತಿಂಗಳುಗಳ ಕಾಲ ಸಿಲುಕಿಕೊಂಡ ನಂತರ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್ ಭೂಮಿಗೆ ವಾಪಸ್ ಬರುವುದನ್ನು ನೋಡಲು ಇಡೀ ಜಗತ್ತೇ ಕಾದು ಕುಳಿತ್ತಿತ್ತು. ಸಂಶೋಧನೆ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ವೀರ ಗಗನಯಾತ್ರಿಗಳು ಸುಮಾರು 300 ದಿನಗಳ ನಂತರ ಭೂಮಿಗೆ ವಾಪಸ್ ಆದರು. ಇಬ್ಬರು ಗಗನಯಾತ್ರಿಗಳನ್ನು ಹೊತ್ತ ವಿಮಾನವು ಫ್ಲೋರಿಡಾದಲ್ಲಿ ಬಂದು ಇಳಿಯುವುದನ್ನು ಜಗತ್ತು ಸಂತೋಷದಿಂದ ನೋಡಿತು. ವಿಲ್ಮೋರ್ ಮತ್ತು ವಿಲಿಯಮ್ಸ್ ಪಟ್ಟಂತಹ ಸಾಹಸಕ್ಕೆ ಇಡೀ ಪ್ರಪಂಚವೇ ಪ್ರಶಂಸೆ ವ್ಯಕ್ತಪಡಿಸಿತು.
ಬಾಹ್ಯಾಕಾಶದ ಬದುಕು ಹೀಗಿರುತ್ತೆ..
ದೀರ್ಘಕಾಲದವರೆಗೆ ಬಾಹ್ಯಾಕಾಶದಲ್ಲಿ ಇರುವುದು ದೇಹವನ್ನು ಸೆಲ್ಯುಲಾರ್ ಮಟ್ಟದಲ್ಲಿ ಬದಲಾಯಿಸುತ್ತದೆ. ನಮ್ಮ ದೇಹದ ಸ್ನಾಯುವಿನ ಕಾರ್ಯದಿಂದ ಹಿಡಿದು ನಮ್ಮಲ್ಲಿರುವ ಸೂಕ್ಷ್ಮಜೀವಿಯವರೆಗೆ ನಮ್ಮ ದೇಹದ ಪ್ರತಿಯೊಂದು ಭಾಗವು ಕೆಲವು ಬದಲಾವಣೆಗೆ ಒಳಗಾಗುತ್ತದೆ. ಗಗನಯಾತ್ರಿಗಳು ಈ ಕಾರಣಗಳಿಗಾಗಿ ಯಾವುದೇ ಕಾರ್ಯಾಚರಣೆಗಳಿಗೆ ಒಳಗಾಗುವ ಮೊದಲು ಕಠಿಣ ದೈಹಿಕ ಮತ್ತು ಮಾನಸಿಕ ಪರೀಕ್ಷೆಗೆ ಒಳಗಾಗುತ್ತಾರೆ.
ಬಾಹ್ಯಾಕಾಶದ ಶೂನ್ಯ-ಗುರುತ್ವಾಕರ್ಷಣೆಯ ಪ್ರದೇಶದಲ್ಲಿ ಉಂಟಾಗುವ ತೀವ್ರವಾದ ಶಾರೀರಿಕ ಬದಲಾವಣೆಗಳನ್ನು ತಡೆದುಕೊಳ್ಳುವ ಸಲುವಾಗಿ ಅವರ ಆರೋಗ್ಯವು ಸರಿಯಾಗಿದೇ ಎಂದು ಖಚಿತಪಡಿಸಿಕೊಳ್ಳುತ್ತಾರೆ. ನಂತರ ಗಗನಯಾತ್ರಿಗಳು ತಮ್ಮ ದೈಹಿಕ ಸದೃಢತೆ ಮತ್ತು ಸ್ನಾಯುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಾಹ್ಯಾಕಾಶದಲ್ಲಿ ಪ್ರತಿನಿತ್ಯ ಸುಮಾರು ಎರಡು ಗಂಟೆಗಳ ವ್ಯಾಯಾಮವನ್ನು ಮಾಡಬೇಕಾಗಿರುತ್ತದೆ. ಹೆಚ್ಚಿನ ಬಾಹ್ಯಾಕಾಶ ಉತ್ಸಾಹಿಗಳು ಮತ್ತು ಗಗನಯಾತ್ರಿಗಳು ನಮ್ಮ ಗ್ರಹದ ನೋಟ ಮತ್ತು ತಮ್ಮ ಅನುಭವವನ್ನು ಬಾಹ್ಯಾಕಾಶದಲ್ಲಿ ಕಳೆಯಲು ಯೋಚಿಸುತ್ತಾರೆ.
ಆದರೆ ಇತ್ತೀಚಿನ ಬಾಹ್ಯಾಕಾಶ ಸಾಹಸಿಗರು ಅನುಭವಿಸುವ ಆರೋಗ್ಯ ಸವಾಲುಗಳ ಬಗ್ಗೆಯೂ ಗಮನವಹಿಸಬೇಕಾಗಿರುತ್ತದೆ. ಭೂಮಿಯ ಮೇಲಿನ ಎಲ್ಲಾ ಜೀವಿಗಳಂತೆ ಮಾನವರು, ಭೂಮಿಯ ಗುರುತ್ವಾಕರ್ಷಣೆಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಮತ್ತು ಅಭಿವೃದ್ಧಿ ಹೊಂದಲು ಶ್ರಮ ವಹಿಸುತ್ತಾರೆ. ಆದರೆ, ಬಾಹ್ಯಾಕಾಶ ಮತ್ತು ಶೂನ್ಯ ಗುರುತ್ವಾಕರ್ಷಣೆಯ ಪ್ರದೇಶಕ್ಕೆ ಕಾಲಿಡುವ ಯಾವುದೇ ವ್ಯಕ್ತಿ ಹಲವಾರು ಶಾರೀರಿಕ ಸಮಸ್ಯೆಗಳಿಗೆ ಒಳಗಾಗುತ್ತಾನೆ. ಅವುಗಳಲ್ಲಿ ಕೆಲವು ಸಮಸ್ಯೆಗಳನ್ನು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ವರ್ಷಗಳೇ ಆಗುತ್ತವೆ ಎಂದು ತಜ್ಞರು ಹೇಳುತ್ತಾರೆ.
ಮಾನವನ ದೇಹದಲ್ಲಾಗುವ ಬದಲಾವಣೆಗಳೇನು.?
1.ಗುರುತ್ವಾಕರ್ಷಣೆಯಿಲ್ಲದೆ ದ್ರವಗಳು ಸ್ಥಳಾಂತರಗೊಳ್ಳುತ್ತವೆ
ಮಾನವನ ದೇಹವು ಸರಿಸುಮಾರು ಶೇಕಡಾ 70 ರಷ್ಟು ನೀರಿನಿಂದ ಕೂಡಿದೆ. ದ್ರವಗಳಲ್ಲಿನ ಈ ಬದಲಾವಣೆಯು ಮೆದುಳಿನಲ್ಲಿ ಊತ ಮತ್ತು ರೆಟಿನಾ ಮತ್ತು ಆಪ್ಟಿಕ್ ನರವನ್ನು ಒಳಗೊಂಡ ಕಣ್ಣಿನ ತೊಂದರೆಗಳ ಸಮಸ್ಯೆ ಸೇರಿದಂತೆ ಸರಿಪಡಿಸಲಾಗದಂತಹ ಸಮಸ್ಯೆಗೆ ಕಾರಣವಾಗಬಹುದು.
2.ತಲೆ ತಿರುಗುವಿಕೆ
ದೃಷ್ಟಿಯ ಮೇಲೆ ಸೂಕ್ಷ್ಮ ಗುರುತ್ವಾಕರ್ಷಣೆ ಪರಿಣಾಮ ಬೀರುವುದರಿಂದ, ಇದು ವ್ಯಕ್ತಿಯ ಸುತ್ತಮುತ್ತಲಿನ ಸಮತೋಲನ ಮತ್ತು ಸಂವೇದನೆಯ ಸಾಮರ್ಥ್ಯಕ್ಕೆ ಅಡ್ಡಿಪಡಿಸುತ್ತದೆ. ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆಯಿಲ್ಲದ ಕಾರಣ ಮೇಲೆ, ಕೆಳಗೆ ಅಥವಾ ಪಕ್ಕಕ್ಕೆ ಸರಿಯುವುದು ಎಂಬ ಭಾವನೆಯೇ ಮೂಡುವುದಿಲ್ಲ.
2.ಸ್ನಾಯು ಕ್ಷೀಣಿಸುವಿಕೆ
ಬಾಹ್ಯಾಕಾಶದಲ್ಲಿ, ಗುರುತ್ವಾಕರ್ಷಣೆಯ ಕೊರತೆಯು ಸ್ನಾಯುಗಳ ಕಾರ್ಯ ಮತ್ತು ಗಾತ್ರಕ್ಕೆ ಹಾನಿಯನ್ನುಂಟು ಮಾಡುತ್ತದೆ. ಸಾಮಾನ್ಯ ಬಾಹ್ಯಾಕಾಶದಲ್ಲಿ ದೇಹವು ತೂಕ ಅಥವಾ ಒತ್ತಡವನ್ನು ಹೊಂದಿರದ ಕಾರಣ, ದೇಹವನ್ನು ಹಿಡಿದಿಟ್ಟುಕೊಳ್ಳಲು ಮತ್ತು ಚಲಿಸಲು ಬಳಸುವ ಸ್ನಾಯುಗಳು ನಾನಾ ಸಮಸ್ಯೆಗೆ ಒಡ್ಡಿಕೊಳ್ಳುತ್ತವೆ.
3.ಬೇಗ ವಯಸ್ಸಾದಂತೆ ಕಾಣುವುದು
ಸಾಮಾನ್ಯವಾಗಿ ಗಗನಯಾತ್ರಿಗಳನ್ನು ಭೂಮಿಯ ಮೇಲಿನವರು ಎದುರಿಸುತ್ತಿರುವ ವಯಸ್ಸಾದ ಅಪಾಯಗಳಿಂದ ದೂರವಿದ್ದಾರೆ ಎಂದು ಸೂಚಿಸುತ್ತದೆ. ವಾಸ್ತವದಲ್ಲಿ ಇದು ಆ ಸತ್ಯದಿಂದ ದೂರವಿದೆ. ಗುರುತ್ವಾಕರ್ಷಣೆಯ ಕೊರತೆಯು ದೇಹದ ಸ್ನಾಯುಗಳನ್ನು ಕಡಿಮೆ ಶ್ರಮದಿಂದ ದುರ್ಬಲಗೊಳಿಸುವಂತೆಯೇ, ಹೃದಯ ಮತ್ತು ರಕ್ತನಾಳಗಳು ಸಹ ದುರ್ಬಲಗೊಳ್ಳುತ್ತವೆ.(ಏಜೆನ್ಸೀಸ್)
ಗಗನಯಾತ್ರಿಗಳು ಭೂಮಿಗೆ ಬಂದ ತಕ್ಷಣ ಮಗುವಿನಂತೆ ನಡೆಯಲು ಕಾರಣವೇನು?; ಇದು ಏಕೆ ಸಂಭವಿಸುತ್ತೆ ತಿಳಿಯಿರಿ | Astronauts