Muhsin Hendricks : ವಿಶ್ವದ ಮೊದಲ ಸ್ವಯಂಘೋಷಿತ ಸಲಿಂಗಕಾಮಿ ಇಮಾಮ್ ಎಂದೇ ಖ್ಯಾತಿ ಪಡೆದ ಮುಹ್ಸಿನ್ ಹೆಂಡ್ರಿಕ್ಸ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಭೀಕರ ಘಟನೆ ದಕ್ಷಿಣ ಆಫ್ರಿಕಾದ ದಕ್ಷಿಣ ನಗರವಾದ ಗ್ಕೆಬೆರಾ ಬಳಿ ಶನಿವಾರ (ಫೆ.15) ನಡೆದಿದೆ.
ಕಾರ್ಯಕ್ರಮವೊಂದನ್ನು ಮುಗಿಸಿ ಕಾರಿನಲ್ಲಿ ಹಿಂತಿರುಗುತ್ತಿದ್ದ ಮುಹ್ಸಿನ್ ಹೆಂಡ್ರಿಕ್ಸ್ ಮೇಲೆ ಇಬ್ಬರು ಮುಸುಕುಧಾರಿಗಳು ಗುಂಡು ಹಾರಿಸಿದ್ದಾರೆ. ಈ ವೇಳೆ ಹೆಂಡ್ರಿಕ್ಸ್ ಅವರು ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದರು. ಗುಂಡು ಹಾರಿಸಿದ ನಂತರ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ಈ ಘಟನೆಯ ಬಗ್ಗೆ ಕೇಪ್ಟೌನ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಹಂಡ್ರಿಕ್ಸ್ ಹತ್ಯೆಯನ್ನು ಅಂತಾರಾಷ್ಟ್ರೀಯ ಲೆಸ್ಬಿಯನ್, ಗೇ, ಬೈಸೆಕ್ಸುವಲ್, ಟ್ರಾನ್ಸ್ ಮತ್ತು ಇಂಟರ್‌ಸೆಕ್ಸ್ ಅಸೋಸಿಯೇಷನ್ (ILGA) ಖಂಡಿಸಿದೆ. ಅಲ್ಲದೆ, ಇದೊಂದು ದ್ವೇಷಪೂರಿತ ಘಟನೆಯಾಗಿದ್ದು, ಸಂಪೂರ್ಣ ತನಿಖೆ ನಡೆಸುವಂತೆ ಅಸೋಸಿಯೇಷನ್ ಆಗ್ರಹಿಸಿದೆ.
ಅಂದಹಾಗೆ ಮುಹ್ಸಿನ್ ಹೆಂಡ್ರಿಕ್ಸ್ ಅವರು ವಿಶ್ವದ ಮೊದಲ ಸ್ವಯಂಘೋಷಿತ ಸಲಿಂಗಕಾಮಿ ಇಮಾಮ್. ಇವರು ದಕ್ಷಿಣ ಆಫ್ರಿಕಾದ ಕೇಪ್ ಟೌನ್ನಲ್ಲಿ ಜನಿಸಿದರು. ಪಾಕಿಸ್ತಾನದ ಇಸ್ಲಾಮಿಕ್ ವಿಶ್ವವಿದ್ಯಾಲಯದಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, 1991ರಲ್ಲಿ ಕೇಪ್ ಟೌನ್ ಮೂಲದವರನ್ನು ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಇದನ್ನೂ ಓದಿ: ಬೆತ್ತಲೆ ವಿಡಿಯೋ ಕರೆ ಮಾಡಿಸಿ 18 ಲಕ್ಷ ರೂ. ಸಂಪಾದನೆ: ಗಂಡನ ಕರಾಳ ಮುಖ ಬಿಚ್ಚಿಟ್ಟ ಪತ್ನಿ! Crime
ಆದರೆ, ಮುಹ್ಸಿನ್ ಹೆಂಡ್ರಿಕ್ಸ್ 1996ರಲ್ಲಿ ವಿಚ್ಛೇದನ ಪಡೆದರು. ಇದಾದ ಮುಂದಿನ ವರ್ಷವೇ ತಾನೊಬ್ಬ ಸಲಿಂಗಕಾಮಿ ಎಂದು ಘೋಷಿಸಿಕೊಂಡರು. ಈ ವೇಳೆ ಅವರು ತೀವ್ರ ತಾರತಮ್ಯ ಮತ್ತು ಸಾಕಷ್ಟು ಬೆದರಿಕೆಗಳನ್ನು ಎದುರಿಸಿದರು. ಆದರೆ ಏಕಾಂಗಿಯಾಗಿ ಹೋರಾಡಿದರು.
ಸಲಿಂಗಕಾಮಿಗಳಿಗಾಗಿ ಒಂದು ಸಂಘಟನೆ ಮತ್ತು ಪ್ರಾರ್ಥನಾ ಮಂದಿರವನ್ನು ಸ್ಥಾಪಿಸಿದರು. ಈ ಮೂಲಕ ಸಲಿಂಗಕಾಮಿ ಸಮುದಾಯದ ಸ್ವಂತ ಇಮಾಮ್ ಎಂದು ಪ್ರಸಿದ್ಧರಾದರು. ಅನೇಕ ಸಲಿಂಗ ವಿವಾಹಗಳನ್ನು ನಡೆಸಿದ್ದಾರೆ. ಮುಹ್ಸಿನ್ ಹೆಂಡ್ರಿಕ್ಸ್ ಅವರ ಜೀವನ ಸಂಗಾತಿ ಓರ್ವ ಹಿಂದು. ಹನ್ನೊಂದು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದರೆಂದು ವರದಿಯಾಗಿದೆ. (ಏಜೆನ್ಸೀಸ್)
ಹೆಲ್ಮೆಟ್ ಬಳಸುವುದರಿಂದ ಕೂದಲು ಉದುರುತ್ತಿದೆಯೇ? ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್…! Hair Loss