Hair Loss : ಅತಿಯಾಗಿ ಹೆಲ್ಮೆಟ್ ಬಳಸುವ ಸವಾರರಲ್ಲಿ ಕೂದಲು ಉದುರುವಿಕೆ ಮತ್ತು ತಲೆಹೊಟ್ಟಿನ ಸಮಸ್ಯೆ ಸಾಮಾನ್ಯವಾಗಿವೆ. ಇದಕ್ಕೆ ಮುಖ್ಯ ಕಾರಣವೆಂದರೆ ದೇಹದ ಬೆವರು ಹೆಲ್ಮೆಟ್‌ನಲ್ಲಿ ಅಂಟಿಕೊಳ್ಳುವುದು. ಇದು ಮಹಿಳೆಯರಿಗಿಂತ ಪುರುಷರ ಮೇಲೆ ಹೆಚ್ಚು ಪರಿಣಾಮವನ್ನು ಬೀರುತ್ತದೆ.
ತಲೆಯನ್ನು ಸಂಪೂರ್ಣವಾಗಿ ಮುಚ್ಚುವ ಹೆಲ್ಮೆಟ್ ಬಳಸುವ ಜನರು ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ಅನುಭವಿಸುವ ಸಾಧ್ಯತೆ ಹೆಚ್ಚು. ಆದರೆ, ಕೆಲವು ವಿಷಯಗಳ ಕಡೆ ಗಮನ ಕೊಡುವುದರಿಂದ ಈ ಸಮಸ್ಯೆಗಳನ್ನು ಸುಲಭವಾಗಿ ತಪ್ಪಿಸಬಹುದು.
ಅಂದಹಾಗೆ ದೀರ್ಘಕಾಲದವರೆಗೆ ಹೆಲ್ಮೆಟ್ ಧರಿಸುವುದರಿಂದ ಸ್ವಾಭಾವಿಕವಾಗಿ ನಿಮ್ಮ ತಲೆಯ ಮೇಲೆ ಶಾಖ ಹೆಚ್ಚಾಗುತ್ತದೆ. ಇದು ನಿಮ್ಮ ಕೂದಲಿನ ಆರೋಗ್ಯಕ್ಕೂ ಕೆಟ್ಟದು. ಅನೇಕ ಜನರು ಹೆಲ್ಮೆಟ್ ಹಾಕುವ ಮೊದಲು ತಮ್ಮ ಕೂದಲಿನ ಮೇಲೆ ಕರವಸ್ತ್ರದಂತಹ ಬಟ್ಟೆಯನ್ನು ಹಾಕಿಕೊಳ್ಳುತ್ತಾರೆ. ಆದರೆ, ಈ ರೀತಿ ಬಳಸುವ ಬಟ್ಟೆಯನ್ನು ತೊಳೆಯದೆ ಎರಡು ದಿನಗಳಿಗಿಂತ ಹೆಚ್ಚು ಕಾಲ ಬಳಸಬಾರದು. ಬಳಸಿದರೆ, ಕೂದಲಿಗೆ ಹಾನಿಯಾಗುತ್ತದೆ.
ಹೆಲ್ಮೆಟ್‌ನಲ್ಲಿ ಅಂಟಿಕೊಂಡ ಬೆವರು ಶಿಲೀಂಧ್ರದ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ, ಬೇರೆಯವರ ಹೆಲ್ಮೆಟ್ ಬಳಸುವ ಜನರಲ್ಲಿ ಈ ಸಮಸ್ಯೆಗಳು ಹೆಚ್ಚಾಗಬಹುದು. ಹಾಗಾಗಿ ಸಾಧ್ಯವಾದಷ್ಟು ಹೆಲ್ಮೆಟ್ಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದನ್ನು ತಪ್ಪಿಸಿ.
ಬೆವರು ಸಂಗ್ರಹವಾಗುವುದನ್ನು ತಡೆಯಲು, ಹೆಲ್ಮೆಟ್ ಅನ್ನು ಪ್ರತಿ ಎರಡು ವಾರಗಳಿಗೊಮ್ಮೆ ತೊಳೆಯಬೇಕು ಅಥವಾ ಬಿಸಿಲಿನಲ್ಲಿ ಒಣಗಿಸಬೇಕು. ಬೆವರು ಸಂಗ್ರಹವಾದಾಗಲೆಲ್ಲ ಸೂಕ್ಷ್ಮಜೀವಿಗಳಂತಹ ಶಿಲೀಂಧ್ರಗಳು ಬೆಳೆಯಬಹುದು. ಇದು ತಲೆಹೊಟ್ಟುಗೂ ಕಾರಣವಾಗುತ್ತದೆ. ಹೀಗಾಗಿ ಪ್ರತಿ ಎರಡು ವಾರಗಳಿಗೊಮ್ಮೆ ಹೆಲ್ಮೆಟ್ ತೊಳೆಯುವುದು ಉತ್ತಮ. ತೊಳೆದ ಹೆಲ್ಮೆಟ್ ಅನ್ನು ಬಿಸಿಲಿನಲ್ಲಿ ಒಣಗಿಸಲು ಮರೆಯಬೇಡಿ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ಈ ಉದ್ಯೋಗದಲ್ಲಿರುವ ಗಂಡಸರು ತಮ್ಮ ಪತ್ನಿಯರಿಗೆ ಹೆಚ್ಚು ಮೋಸ ಮಾಡ್ತಾರಂತೆ! ಪರೀಕ್ಷೆಯಲ್ಲಿ ಸಾಬೀತು | Unfaithful Men