Unfaithful Men : ಪ್ರಪಂಚದಾದ್ಯಂತ ನಮ್ಮ ಸುತ್ತಮುತ್ತಲೂ ಇರುವ ಅನೇಕ ಜನರು ವಿವಿಧ ವಿಧಾನಗಳಲ್ಲಿ ಹಣ ಸಂಪಾದಿಸುತ್ತಾರೆ. ಕೆಲವರು ಒಳ್ಳೆಯ ಹಾದಿಯಲ್ಲಿ ಸಂಪಾದಿಸಿದರೆ, ಇನ್ನು ಕೆಲವರು ಅಡ್ಡದಾರಿಯಲ್ಲಿ ಹಣ ಗಳಿಸುತ್ತಾರೆ. ಆದರೆ, ನೀವು ವೃತ್ತಿಪರವಾಗಿ ಪ್ರೇಮ ಅಥವಾ ನಂಬಿಕೆ ದ್ರೋಹವನ್ನು ಪತ್ತೆ ಮಾಡುವಂತಹ ಕೆಲಸದ ಬಗ್ಗೆ ಕೇಳಿದ್ದೀರಾ? ಇದು ಕೇಳಲು ಕೊಂಚ ವಿಚಿತ್ರ ಎನಿಸಬಹುದು. ಆದರೆ, ತುಂಬಾ ಇಂಟ್ರೆಸ್ಟಿಂಗ್ ಆಗಿದೆ.
ಹೌದು, ಮ್ಯಾಡೆಲಿನ್ ಸ್ಮಿತ್ ಎಂಬಾಕೆ ಮೋಸ ಮಾಡುವ ಗಂಡಸರನ್ನು ಬಲೆಗೆ ಬೀಳಿಸುವ ತನ್ನ ವಿಶಿಷ್ಟ ವೃತ್ತಿಯ ಬಗ್ಗೆ ಹೇಳಿಕೊಂಡಿದ್ದಾರೆ. ವಿವಾಹಿತ ಮಹಿಳೆಯರು ಮತ್ತು ಪ್ರೀತಿಯಲ್ಲಿ ಬಿದ್ದ ಯುವತಿಯರೇ ಮ್ಯಾಡೆಲಿನ್ ಸ್ಮಿತ್ ಅವರ ಗ್ರಾಹಕರು. ಪ್ರೀತಿ ಪಾತ್ರರಿಂದ ಆಗುತ್ತಿರುವ ವಂಚನೆಯನ್ನು ಪತ್ತೆಹಚ್ಚುವುದೇ ಮ್ಯಾಡೆಲಿನ್ ಸ್ಮಿತ್ ಕೆಲಸವಾಗಿದೆ.
ಡೈಲಿ ಸ್ಟಾರ್ ಪ್ರಕಾರ, ಮ್ಯಾಡೆಲಿನ್ ಸ್ಮಿತ್ ವಿಶ್ವಾಸದ್ರೋಹಿ ಪುರುಷರನ್ನು ಬಹಿರಂಗಪಡಿಸಲು, ಅವರ ಗ್ರಾಹಕರ ಅನುಮಾನಗಳನ್ನು ಪರಿಹರಿಸಲು ಸಾಮಾಜಿಕ ಜಾಲತಾಣವನ್ನು ಬಳಸುತ್ತಾರೆ. ಹಣ ಪಾವತಿಯಾದ ಬಳಿಕ ಒಂದು ಪ್ಲಾನ್ ಮಾಡುವ ಸ್ಮಿತ್, ಸಂಬಂಧದಿಂದ ಅಂತರ ಕಾಯ್ದುಕೊಳ್ಳುವ ಗಂಡಸರನ್ನು ಬಲೆಗೆ ಬೀಳಿಸುತ್ತಾರೆ.
ಸ್ಮಿತ್ ಅವರು ಕಳೆದ ಮೂರು ವರ್ಷಗಳಿಂದ ಈ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಈವರೆಗೆ 5,000ಕ್ಕೂ ಹೆಚ್ಚು ಪರೀಕ್ಷೆಗಳನ್ನು ಮಾಡಿದ್ದಾರೆ. ಈಗಾಗಲೇ ನೂರಾರು ಪುರುಷರನ್ನು ಯಶಸ್ವಿಯಾಗಿ ತಮ್ಮ ಬಲೆಗೆ ಬೀಳಿಸಿದ್ದಾರೆ. ಮಹಿಳೆಯರು ನೇರವಾಗಿ ಆಕೆಯನ್ನು ಸಂಪರ್ಕಿಸಿ, 65 (5,614 ರೂಪಾಯಿ) ಡಾಲರ್ ಶುಲ್ಕವನ್ನು ಪಾವತಿಸಿ, ತಮ್ಮ ಗಂಡಂದಿರ ವಂಚನೆ ತಿಳಿದುಕೊಳ್ಳಲು ಬಯಸುತ್ತಾರೆ. ಹಣ ಪಡೆದ ಕೂಡಲೇ ಮ್ಯಾಡೆಲಿನ್ ಸ್ಮಿತ್, ಸಾಮಾಜಿಕ ಜಾಲತಾಣದ ಮೂಲಕ ಗಂಡಸರನ್ನು ಸಂಪರ್ಕಿಸಿ, ಅವರ ಪ್ರತಿಕ್ರಿಯೆಗಳ ಸ್ಕ್ರೀನ್‌ಶಾಟ್‌ಗಳನ್ನು ತನ್ನ ಗ್ರಾಹಕರಿಗೆ ಕಳುಹಿಸುತ್ತಾರೆ. ಹೆಚ್ಚು ಕಠಿಣವಾದ ಕೆಲಸಗಳಿಗೆ ಶುಲ್ಕವು ಕೂಡ ಹೆಚ್ಚಾಗುತ್ತದೆ. 30 ವರ್ಷದ ಮ್ಯಾಡೆಲಿನ್ ಪ್ರಕಾರ, ಅವರಿಗೆ ಎಂದಿಗೂ ಬೇಡಿಕೆಗಳು ಕಡಿಮೆಯಾಗಿಲ್ಲ ಎಂದಿದ್ದಾರೆ.
ಅತ್ಯಂತ ನಂಬಿಕೆದ್ರೋಹಿ ವೃತ್ತಿಗಳು
ತನ್ನ ಅನುಭವದ ಆಧಾರದ ಮೇಲೆ, ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಪುರುಷರು ವಿಶ್ವಾಸದ್ರೋಹಿಗಳಾಗಿರುವುದು ಹೆಚ್ಚು ಎಂದು ಮ್ಯಾಡೆಲಿನ್ ಸ್ಮಿತ್ ಹೇಳುತ್ತಾರೆ. ನಾನು ಈ ಕೆಲಸ ಮಾಡಲು ಪ್ರಾರಂಭಿಸಿದಾಗಿನಿಂದ ಬಹುಶಃ 100 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ಹಿಡಿದಿದ್ದೇನೆ. ನನ್ನ ಅನುಭವದಲ್ಲಿ ಪೊಲೀಸರೇ ಮೋಸ ಮಾಡುವ ಸಾಧ್ಯತೆ ಹೆಚ್ಚು ಎಂದಿದ್ದಾರೆ.
ಎರಡನೇ ಸ್ಥಾನದಲ್ಲಿ ವೈಯಕ್ತಿಕ ಫಿಟ್‌ನೆಸ್ ತರಬೇತುದಾರರಿದ್ದಾರೆ. ನ್ಯಾಯ ಒದಗಿಸುವ ಸ್ಥಾನದಲ್ಲಿರುವ ವಕೀಲರು ಕೂಡ ತಮ್ಮ ಸಂಗಾತಿಗೆ ಮೋಸ ಮಾಡುವುದು ಸಹ ಕಂಡುಬಂದಿದೆ. ವೈದ್ಯರು ಎಂದು ಹೇಳಿದಾಗ ಯಾರು ಕೂಡ ನಿಜವಾಗಿಯೂ ನಂಬುವುದಿಲ್ಲ. ಮ್ಯಾಡಲಿನ್ ಸ್ಮಿತ್ ಜೊತೆ ತೊಡಗಿಸಿಕೊಂಡ ಕೆಲವು ಪುರುಷರು ವೈದ್ಯರಾಗಿದ್ದರು ಎಂಬುದು ಆಶ್ಚರ್ಯಕರವಾಗಿದೆ. ಅಗ್ನಿಶಾಮಕ ದಳ, ಮಿಲಿಟರಿ ಸಿಬ್ಬಂದಿಯೂ ಕೂಡ ಸ್ಮಿತ್ ಪಟ್ಟಿಯಲ್ಲಿದ್ದಾರೆ.
ಮ್ಯಾಡಲಿನ್ ಸ್ಮಿತ್ ಪ್ರಕಾರ, ತಮ್ಮ ಸ್ನಾಯುಗಳನ್ನು ಪ್ರದರ್ಶಿಸುವ ಫೋಟೋಗಳನ್ನು ಹಂಚಿಕೊಳ್ಳುವ ಪುರುಷರು ಮೋಸ ಮಾಡುವ ಸಾಧ್ಯತೆ ಹೆಚ್ಚೆಂದು ಹೇಳಿದ್ದಾರೆ. ಅಲ್ಲದೆ, ಕೆಲವರು ಸಾಮಾಜಿಕ ಜಾಲತಾಣದಲ್ಲಿ ಒಂಟಿಯಾಗಿರುವ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಅವರು ತಮ್ಮ ಕುಟುಂಬ ಮತ್ತು ಸಂಗಾತಿಯನ್ನು ಪರಿಚಯಿಸಲು ಬಯಸುವುದಿಲ್ಲ. ಅಂತಹ ಜನರು ಸಮಾಜದಲ್ಲಿ ಅನೇಕ ಜನರನ್ನು ಮೋಸಗೊಳಿಸುವ ಪ್ರಮುಖ ವ್ಯಕ್ತಿಗಳು ಎಂದು ಮ್ಯಾಡಲಿನ್ ಸ್ಮಿತ್ ಹೇಳಿದ್ದಾರೆ. (ಏಜೆನ್ಸೀಸ್)
ಭಾರತದ ಈ ಹಳ್ಳಿಯಲ್ಲಿ ಪ್ರತಿ ವ್ಯಕ್ತಿಗೆ ಇಬ್ಬರು ಹೆಂಡ್ತಿಯರು ಇರಲೇಬೇಕು! ಕಾರಣ ಕೇಳಿದ್ರೆ ಅಚ್ಚರಿ ಖಚಿತ | Two Wives