

Sir Isaac Newton : ಇಡೀ ಬ್ರಹ್ಮಾಂಡದಲ್ಲಿ ಜೀವಿಗಳಿರುವ ಏಕೈಕ ಗ್ರಹವೆಂದರೆ ಅದು ಭೂಮಿ. ಕೆಲವರು ಅನ್ಯಗ್ರಹ ಜೀವಿಗಳಿರುವ ಬಗ್ಗೆ ಮಾತನಾಡುತ್ತಾರೆ. ಆದರೆ, ಇಂದಿಗೂ ಸೂಕ್ತ ಪುರಾವೆಗಳು ಸಿಕ್ಕಿಲ್ಲ. ಏಲಿಯನ್ಗಳು ಕೇವಲ ಚರ್ಚಾ ವಿಷಯವಾಗಿದೆ. ಇಡೀ ಬ್ರಹ್ಮಾಂಡದಲ್ಲಿ ಭೂಮಿಯು ಒಂದು ವಿಶಿಷ್ಟ ಮತ್ತು ಸುಂದರವಾದ ಗ್ರಹ. ಇದು ಸುಮಾರು ನಾಲ್ಕೂವರೆ ಶತಕೋಟಿ ವರ್ಷಗಳ ಹಿಂದೆ ರೂಪುಗೊಂಡಿತು ಎಂದು ನಂಬಲಾಗಿದೆ.
ಇಂದು ನಾವು ನೋಡುತ್ತಿರುವ ಭೂಮಿಯು ಪ್ರಾಚೀನ ಕಾಲದಿಂದಲೂ ಅನೇಕ ವಿಕಸನಗಳಿಗೆ ಒಳಗಾಗಿದೆ. ಈ ಮಧ್ಯೆ, ಅನೇಕ ಜೀವಿಗಳು ಭೂಮಿಯಿಂದ ಕಣ್ಮರೆಯಾಗಿವೆ. ಇನ್ನೂ ಅನೇಕ ಜನರು ಈ ಭೂಮಿಯು ಕೊನೆಗೊಳ್ಳುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ಹಲವು ಭವಿಷ್ಯವಾಣಿಗಳು ಬಂದಿವೆ. ಧಾರ್ಮಿಕ ವಿದ್ವಾಂಸರು, ವಿಜ್ಞಾನಿಗಳು ಹಾಗೂ ಜ್ಯೋತಿಷಿಗಳು ಸಹ ಪ್ರಪಂಚದ ಅಂತ್ಯದ ಬಗ್ಗೆ ಅನೇಕ ವಾದಗಳನ್ನು ಮಂಡಿಸುತ್ತಿದ್ದಾರೆ. ಈ ಹಿಂದೆ 2021 ಡಿಸೆಂಬರ್ 21ಕ್ಕೆ ಭೂಮಿ ಅಂತ್ಯವಾಗಲಿದೆ ಎಂದಿದ್ದರು. ಆದರೆ, ಅದು ಸುಳ್ಳಾಯಿತು.
ಇನ್ನು ಬಲ್ಗೇರಿಯನ್ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಪ್ರಕಾರ 5079ಕ್ಕೆ ಜಗತ್ತು ಕೊನೆಯಾಗುತ್ತದೆ ಎಂದಿದ್ದಾರೆ. ಆದರೆ, ನಿಜವಾಗುತ್ತಾ ಎಂದು ತಿಳಿಯಲು ನಾವೇ ಇರುವುದಿಲ್ಲ. ಇದರ ನಡುವೆ ಮತ್ತೊಂದು ಸಂಗತಿ ಚರ್ಚೆಯಾಗುತ್ತಿದೆ. ಅದೇನೆಂದರೆ, ಈ ಜಗತ್ತು ಯಾವಾಗ ಕೊನೆಗೊಳ್ಳುತ್ತದೆ ಎಂದು ಪ್ರಖ್ಯಾತ ವಿಜ್ಞಾನಿ ಸರ್ ಹೈಸಾಕ್ ನ್ಯೂಟನ್ ಅವರ ಪತ್ರದಲ್ಲಿ ಉಲ್ಲೇಖವಾಗಿದೆಯಂತೆ. ಅದರ ಪ್ರಕಾರ ಭೂಮಿಯ ಅಂತ್ಯ ಸಮೀಪಿಸುತ್ತಿದೆ.
ಚಲನೆ ಮತ್ತು ಗುರುತ್ವಾಕರ್ಷಣೆಯ ನಿಯಮಗಳನ್ನು ರೂಪಿಸಿದ ಪ್ರಸಿದ್ಧ ಗಣಿತಜ್ಞ ಮತ್ತು ಭೌತಶಾಸ್ತ್ರಜ್ಞ ಸರ್ ಐಸಾಕ್ ನ್ಯೂಟನ್ 1704ರಲ್ಲಿ ಬರೆದ ಪತ್ರದಲ್ಲಿ ಜಗತ್ತು ಯಾವಾಗ ಕೊನೆಯಾಗುತ್ತದೆ ಎಂಬುದನ್ನು ಉಲ್ಲೇಖಿಸಿದ್ದಾರೆ. ಅವರ ಪ್ರಕಾರ 2060 ರಲ್ಲಿ ಈ ಜಗತ್ತು ಕೊನೆಗೊಳ್ಳುತ್ತದೆ. ನ್ಯೂಟನ್ ಅವರು ತಮ್ಮ ಭವಿಷ್ಯವಾಣಿಯನ್ನು ಬೈಬಲ್ನ ಪ್ರೊಟೆಸ್ಟಂಟ್ ವ್ಯಾಖ್ಯಾನ, ಬೈಬಲ್ ನಂತರ ಸಂಭವಿಸಿದ ಘಟನೆಗಳು ಮತ್ತು ಆರ್ಮಗೆಡ್ಡೋನ್ ಯುದ್ಧದ ಆಧಾರದ ಮೇಲೆ ಹೇಳಿದ್ದಾರೆ.
ಸರ್ ಐಸಾಕ್ ನ್ಯೂಟನ್ ಅವರು ತಮ್ಮ ಭವಿಷ್ಯವಾಣಿಯನ್ನು ನುಡಿಯಲು ಬೈಬಲ್ ಇತಿಹಾಸದಲ್ಲಿನ ಗಣಿತ ಮತ್ತು ದಿನಾಂಕಗಳನ್ನು ಬಳಸಿಕೊಂಡು ಲೆಕ್ಕ ಹಾಕಿದ್ದಾರೆ. ಇದರ ಪ್ರಕಾರ 21ನೇ ಶತಮಾನದ ಮಧ್ಯದಲ್ಲಿ ಜಗತ್ತು ಕೊನೆಯಾಗುತ್ತದೆ ಎಂದಿದ್ದಾರೆ. ಅಂದರೆ, 2060ಕ್ಕೆ ಕೊನೆಯಾಗಲಿದೆ. ನ್ಯೂಟನ್ ಅವರು ಡೇನಿಯಲ್ ಅಂಡ್ ರಿವಿಲೇಷನ್ ಪುಸ್ತಕದಲ್ಲಿ 1260, 1290 ಮತ್ತು 2300 ಸಂಖ್ಯೆಗಳನ್ನು ಹೊಂದಿರುವ ದಿನಗಳನ್ನು ಬಳಸಿದ್ದು, ಇದು ಅಪೋಕ್ಯಾಲಿಪ್ಸ್ನಲ್ಲಿ ಕೆಲವು ಪ್ರಮುಖ ಕ್ಷಣಗಳ ಅಂತ್ಯ ಮತ್ತು ಆರಂಭವನ್ನು ಗುರುತಿಸುತ್ತದೆ. ಆದಾಗ್ಯೂ, ಅವರು ಈ ದಿನಗಳನ್ನು ವರ್ಷಗಳೆಂದು ವ್ಯಾಖ್ಯಾನಿಸಿದ್ದಾರೆ. ಇದರ ಪರಿಣಾಮವಾಗಿ 800ಎಡಿ ಅನ್ನು ಚರ್ಚ್ ತ್ಯಜಿಸುವ ಅಧಿಕೃತ ದಿನಾಂಕವಾಗಿ ನಿಗದಿಪಡಿಸಲಾಗಿದೆ.
ಪವಿತ್ರ ರೋಮನ್ ಸಾಮ್ರಾಜ್ಯ ಸ್ಥಾಪನೆಯಾದ ಅದೇ ವರ್ಷ, ಅಂದರೆ ಜಗತ್ತು ಅದರ ಆರಂಭದಿಂದ 1,260 ವರ್ಷಗಳಿಗೆ ಮರುಸ್ಥಾಪಿಸಲ್ಪಡುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಕ್ರಿ.ಪೂ. 800 ರಲ್ಲಿ ಮೂವರು ರಾಜರ ಸಂಪೂರ್ಣ ವಿಜಯದ ದಿನಾಂಕಗಳನ್ನು 1260 ದಿನಗಳ ಅವಧಿ ಎಂದು ನಿರ್ಧರಿಸಿದರೆ, ಆ ಅವಧಿಯ ಅಂತ್ಯವು ಕ್ರಿ.ಪೂ. 2060 ರಲ್ಲಿ ಕೊನೆಗೊಳ್ಳುತ್ತದೆ ಎಂದು ನ್ಯೂಟನ್ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಜಗತ್ತಿನ ಅಂತ್ಯವು ಪ್ಲೇಗ್ ರೋಗಳು ಮತ್ತು ಯುದ್ಧಗಳಿಂದ ಆಗುತ್ತದೆ ಎಂದು ನ್ಯೂಟನ್ ಭವಿಷ್ಯ ನುಡಿದಿದ್ದಾರೆ.
ಇಡೀ ಜಗತ್ತಿನ ನೂರಾರು ವರ್ಷಗಳ ಹಾಗುಹೋಗುಗಳ ಬಗೆಗೆ ಭವಿಷ್ಯ ನುಡಿದಿರುವ ಬಾಗಾ ವಂಗಾ ಪ್ರಕಾರ, 5079ಕ್ಕೆ ಜಗತ್ತು ಕೊನೆಯಾಗುತ್ತದೆ. 2028ರಲ್ಲಿ ಮಾನವರು ಶುಕ್ರವನ್ನು ಭೇಟಿ ಮಾಡುತ್ತಾರೆ, 2033ರಲ್ಲಿ ಧ್ರುವೀಯ ಮಂಜುಗಡ್ಡೆಗಳು ಕರಗಿ, ಜಾಗತಿಕವಾಗಿ ಸಮುದ್ರ ಮಟ್ಟವು ವೇಗವಾಗಿ ಏರುತ್ತೆ, ಮುಸ್ಲಿಮರು 2043 ರಲ್ಲಿ ಯುರೋಪ್ ಅನ್ನು ಆಳುತ್ತಾರೆ, 2076ರಲ್ಲಿ ಕಮ್ಯುನಿಸಂ ಪ್ರಪಂಚದಾದ್ಯಂತ ಹರಡುತ್ತದೆ, 2130ರಲ್ಲಿ ಮಾನವರು ಅನ್ಯಗ್ರಹ ಜೀವಿಗಳೊಂದಿಗೆ ಸಂಪರ್ಕ ಹೊಂದುತ್ತಾರೆ, 2170ರಲ್ಲಿ ಭೂಮಿಯ ಬಹುತೇಕ ಭಾಗಗಳಲ್ಲಿ ಬರ ಉಂಟಾಗುತ್ತದೆ, 3005ರಲ್ಲಿ ಭೂಮಿಯು ಮಂಗಳದ ನಾಗರಿಕತೆಯೊಂದಿಗೆ ಯುದ್ಧದಲ್ಲಿ ತೊಡಗುತ್ತದೆ, 3797ರಲ್ಲಿ ವಾಸಯೋಗ್ಯವಲ್ಲದ ಕಾರಣ ಮಾನವರು ಭೂಮಿಯಿಂದ ಸ್ಥಳಾಂತರವಾಗುತ್ತಾರೆ ಮತ್ತು 5079 ರಲ್ಲಿ ಬ್ರಹ್ಮಾಂಡವು ಕೊನೆಗೊಳ್ಳುತ್ತದೆ ಎಂದು ಬಾಂಬಾ ವಂಗಾರ ಭವಿಷ್ಯದ ಭವಿಷ್ಯವಾಣಿಗಳಾಗಿವೆ. (ಏಜೆನ್ಸೀಸ್)