blank

ನನ್ನ ಜೀವನದಲ್ಲಿ ಯಾವುದೇ ರೀತಿಯಲ್ಲೂ ಅವುಗಳಿಂದ ನನಗೆ ಪ್ರಯೋಜನವಿಲ್ಲ! ರಶ್ಮಿಕಾ ಅಚ್ಚರಿಯ ಹೇಳಿಕೆ | Rashmika Mandanna

Rashmika Mandanna

Rashmika Mandanna : ಸ್ಯಾಂಡಲ್​​ವುಡ್, ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ಹೀಗೆ ಹಂತ ಹಂತವಾಗಿ ಬೆಳೆಯುತ್ತಾ ನಾಯಕಿಯಾಗಿ ಅಗ್ರ ಸ್ಥಾನಕ್ಕೇರಿರುವ ನಟಿ ರಶ್ಮಿಕಾ ಮಂದಣ್ಣ, ಸದ್ಯ ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ತೆರೆಕಂಡ ಪುಷ್ಪ 2 ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದ್ದು ನಿಮಗೆಲ್ಲರಿಗೂ ತಿಳಿದೇ ಇದೆ.

ಗುಡ್ ಬೈ ಚಿತ್ರದ ಮೂಲಕ ರಶ್ಮಿಕಾ ಹಿಂದಿಗೆ ಪಾದಾರ್ಪಣೆ ಮಾಡಿದರು. ಆದರೆ, ಆ ಚಿತ್ರದಿಂದ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಆದರೂ, ಬಾಲಿವುಡ್​ನಿಂದ ಅವಕಾಶಗಳು ಬರುತ್ತಲೇ ಇದ್ದವು. ಇದರ ನಡುವೆ ರಶ್ಮಿಕಾ ನಟಿಸಿದ ‘ಅನಿಮಲ್’ ಚಿತ್ರವು ದೊಡ್ಡ ಯಶಸ್ಸು ತಂದುಕೊಟ್ಟಿತು. ಇತ್ತೀಚೆಗೆ, ರಶ್ಮಿಕಾ ಅವರು ವಿಕ್ಕಿ ಕೌಶಲ್ ಜೊತೆ ‘ಚಾವಾ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಪ್ರೇಮಿಗಳ ದಿನದಂದು (ಫೆ.14) ತೆರೆಗೆ ಅಪ್ಪಳಿಸಿತು. ಮೊದಲ ದಿನವೇ ಚಿತ್ರದ ಬಗ್ಗೆ ಉತ್ತಮ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ನಿಜ ಜೀವನದ ಘೋಸ್ಟ್​ ರೈಡರ್! ಯುವಕನ ವೈರಲ್​ ವಿಡಿಯೋ ನೋಡಿ ಹುಬ್ಬೇರಿಸಿದ ನೆಟ್ಟಿಗರು​ | Ghost Rider

ಚಾವಾ ಸಿನಿಮಾದಲ್ಲಿ ನಟಿ ರಶ್ಮಿಕಾ, ಮಹಾರಾಣಿ ಪಾತ್ರದಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಸಿನಿಮಾ ಬಿಡಗಡೆ ಬೆನ್ನಲ್ಲೇ ಮಾಧ್ಯಮ ಸಂದರ್ಶನವೊಂದರಲ್ಲಿ ರಶ್ಮಿಕಾ ಮುಕ್ತವಾಗಿ ಮಾತನಾಡಿದ್ದಾರೆ. ನ್ಯಾಷನಲ್ ಕ್ರಶ್​ನಂತಹ ಶೀರ್ಷಿಕೆಗಳು ಜೀವನದಲ್ಲಿ ಯಾವುದೇ ರೀತಿಯಲ್ಲೂ ಉಪಯುಕ್ತವಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಸಿನಿಮಾಗಳಲ್ಲಿ ನೀಡಲಾಗುವ ಬಿರುದುಗಳು ಮತ್ತು ಹೆಸರುಗಳು ಜೀವನದಲ್ಲಿ ಉಪಯುಕ್ತವಲ್ಲ. ಇವು ಅಭಿಮಾನಿಗಳ ಪ್ರೀತಿಯಿಂದ ಬರುತ್ತವೆ. ಹೃದಯದಿಂದ ನನಗೆ ಶುಭ ಹಾರೈಸುವವರು ಇದ್ದಾರೆ. ಅದಕ್ಕಾಗಿಯೇ ತನ್ನ ಅಭಿಮಾನಿಗಳು ಇಷ್ಟಪಡುವ ಚಿತ್ರಗಳನ್ನು ಮಾಡುತ್ತಿದ್ದೇನೆ. ಅಭಿಮಾನಿಗಳ ಪ್ರೀತಿ ನನಗೆ ಅತ್ಯಂತ ಮುಖ್ಯ. ಅಭಿಮಾನಿಗಳಿಗಾಗಿ ಏನು ಬೇಕಾದರೂ ಮಾಡಲು ಸಿದ್ಧ ಎಂದು ರಶ್ಮಿಕಾ ಹೇಳಿದರು. (ಏಜೆನ್ಸೀಸ್​)

ಬದುಕನ್ನೇ ಕೊಚ್ಚಿಕೊಂಡು ಹೋಯ್ತು ಸುನಾಮಿ… ಬಡತನಕ್ಕೆ ಸವಾಲೆಸೆದು IAS, IPS ಆದ ಅಕ್ಕ-ತಂಗಿಯ ಯಶೋಗಾಥೆ! Inspirational Stories

ಆಸ್ಪತ್ರೆಯಿಂದ ಮನೆಗೆ ಡೆಡ್​ಬಾಡಿ ತೆಗೆದುಕೊಂಡು ಹೋಗುವಾಗ ಬದುಕಿದ್ದ ಹಾವೇರಿ ವ್ಯಕ್ತಿ ಮತ್ತೆ ಸಾವು! Haveri Man

Share This Article

ಮೊಬೈಲ್ ಫೋನ್‌ಗಳು ಸ್ಫೋಟಗೊಳ್ಳಲು ಕಾರಣವೇನು? mobile ಸುರಕ್ಷಿತವಾಗಿ ಬಳಸುವುದು ಹೇಗೆ?

mobile: ಮೊಬೈಲ್ ಫೋನ್‌ಗಳು ನಮ್ಮ ಜೀವನದ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿ ಮಾರ್ಪಟ್ಟಿವೆ. ಮೊಬೈಲ್ ಫೋನ್ ಸ್ಫೋಟಗಳು…

ಬೇಸಿಗೆ ಬಿಸಿ ಸುಡುತ್ತಿದೆಯೇ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ನೋಡಿ ಸಿಂಪಲ್​ ಟೆಕ್ನಿಕ್ಸ್​! Home Cooling Techniques

Home Cooling Techniques : ದಿನದಿಂದ ದಿನಕ್ಕೆ ಸೂರ್ಯನ ಉರಿ ಹೆಚ್ಚಾಗುತ್ತಿದೆ. ಎಷ್ಟರ ಮಟ್ಟಿಗೆ ಅಂದರೆ,…