Haveri Man : ಸತ್ತು ಬದುಕಿದ್ದ ವ್ಯಕ್ತಿಯೊಬ್ಬ ಇದೀಗ ಮತ್ತೆ ಕೊನೆಯುಸಿರೆಳೆದಿರುವ ವಿಚಿತ್ರ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಬಿಷ್ಟಪ್ಪ ಅಶೋಕ ಗುಡಿಮನಿ (45) ಎಂದು ಗುರುತಿಸಲಾಗಿದೆ. ಬಿಷ್ಟಪ್ಪ ಅವರು ಹಲವು ತಿಂಗಳುಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿದ್ದರಿಂದ ಒಂದು ವಾರದ ಹಿಂದೆ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ನೀಡಿದ ವೈದ್ಯರು ಬಿಷ್ಟಪ್ಪ ಗುಡಿಮನಿ ಸತ್ತಿದ್ದಾನೆ ನಿಮ್ಮ ಊರಿಗೆ ತೆಗೆದುಕೊಂಡು ಹೋಗಿ ಎಂದು ತಿಳಿಸಿದರು.
ಪತ್ನಿ ಶೀಲಾ, ಸಂಬಂಧಿಕರ ಜತೆಗೆ ಆಂಬ್ಯುಲೆನ್ಸ್‌ನಲ್ಲಿ ಮೃತದೇಹವನ್ನು ಬಂಕಾಪುರಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಊರಿಗೆ ವಾಪಸ್ ಬರುತ್ತಿದ್ದ ದಾರಿಯಲ್ಲಿ ಆತನ ಇಷ್ಟವಾದ ಡಾಬಾ ಹೋಟೆಲ್ ಬಂದಿದೆ. ಈ ವೇಳೆ ಬಿಷ್ಟಪ್ಪನ ಪತ್ನಿ ಶೀಲಾ, ನೀನು ಊಟ ಮಾಡೋ ಡಾಬಾ ಬಂತು ನೋಡು, ಊಟ ಮಾಡ್ತಿಯಾ ಎಂದು ಜೋರಾಗಿ ಅಳುತ್ತಿದ್ದಾಗ, ಏಕಾಏಕಿ ಉಸಿರಾಟ ಆರಂಭವಾಗಿ ಬಿಷ್ಟಪ್ಪನಿಗೆ ಮರಳಿ ಜೀವ ಬಂದಿತ್ತು.
ಇದನ್ನೂ ಓದಿ: ನೀವು ಬೋಳು ತಲೆ ಹೊಂದಿದ್ದೀರಾ? ಹಾಗಾದ್ರೆ ಶಫೀಕ್ ಐಡಿಯಾ ಫಾಲೋ ಮಾಡಿ ಲಕ್ಷ ಲಕ್ಷ ಸಂಪಾದಿಸಿ! Bald Head
ಇದಾದ ತಕ್ಷಣ ಮತ್ತೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಬಿಷ್ಟಪ್ಪ ಕೊನೆಗೂ ಮೃತ್ಯುವನ್ನು ಜಯಸದೇ ಇಹಲೋಕ ತ್ಯಜಿಸಿದ್ದಾರೆ. ಮೃತದೇಹವನ್ನು ಬಂಕಾಪುರದ ಮನೆಗೆ ತರಲಾಗಿದ್ದು, ಕುಟುಂಬದ ಸಂಪ್ರದಾಯದಂತೆ ವಿಧಿವಿಧಾನ ನೇರವೇರಿಸುತ್ತಿದ್ದಾರೆ.
ಇಂದು ಸಂಜೆ 5 ಗಂಟೆ ವೇಳೆಗೆ ಬಂಕಾಪುರ ಮುಕ್ತಿಧಾಮದಲ್ಲಿ ಬಿಷ್ಟಪ್ಪ ಅಂತ್ಯಕ್ರಿಯೆ ನೇರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ನೀವು ಬೋಳು ತಲೆ ಹೊಂದಿದ್ದೀರಾ? ಹಾಗಾದ್ರೆ ಶಫೀಕ್ ಐಡಿಯಾ ಫಾಲೋ ಮಾಡಿ ಲಕ್ಷ ಲಕ್ಷ ಸಂಪಾದಿಸಿ! Bald Head
ರಾಹು-ಕೇತು ಸಂಚಾರದಿಂದ ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ… ಹಣದ ಸಮಸ್ಯೆ ದೂರ! Zodiac Signs