Ghost Rider : ಘೋಸ್ಟ್ ರೈಡರ್ ಚಿತ್ರದ ಬಗ್ಗೆ ತಿಳಿದಿಲ್ಲದವರು ಬಹಳ ಕಡಿಮೆ. 2007 ರಲ್ಲಿ ಹಾಲಿವುಡ್ನಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಗಳು ಬಂದವು. ಹಾಲಿವುಡ್ ಬಾಕ್ಸ್ಆಫೀಸ್ನಲ್ಲಿ ಈ ಸಿನಿಮಾ ಧೂಳೆಬ್ಬಿಸಿತು. ಅಲ್ಲದೆ, ಬಹುತೇಕ ಭಾಷೆಗೆ ಈ ಸಿನಿಮಾ ಡಬ್ ಕೂಡ ಆಯಿತು.
ನಾಯಕನ ಇಡೀ ದೇಹ ಬೆಂಕಿಯಲ್ಲಿ ಸುಟ್ಟು ಕರಕಲಾಗಿರುತ್ತದೆ. ಅಲ್ಲದೆ, ಅವನ ತಲೆಯಲ್ಲಿ ಬೆಂಕಿ ಧಗಧಗನೇ ಉರಿಯುತ್ತಿರುತ್ತದೆ. ಅದೇ ರೀತಿಯಲ್ಲಿ ನಿಜ ಜೀವನದಲ್ಲಿ ಈ ರೀತಿಯ ಘಟನೆ ನಡೆದಿದೆ. ಯುವಕನೊಬ್ಬನ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಹುಬ್ಬೇರಿಸಿದ್ದಾರೆ. ನಿಜ ಜೀವನದ ಘೋಸ್ಟ್ ರೈಡರ್ ಎಂದು ಹೇಳುತ್ತಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಯುವಕನೊಬ್ಬ ತನ್ನ ಒಂದು ಕೈಯಲ್ಲಿ ಲೈಟರ್ ಹಿಡಿದು ಬೆಂಕಿ ಹಚ್ಚುತ್ತಾನೆ. ಇದೇ ವೇಳೆ ಇನ್ನೊಂದು ಕೈಯಲ್ಲಿರುವ ಲೈಟರ್ ಅನ್ನು ಬಾಯಿಯಲ್ಲಿ ಇಟ್ಟು ಕಡಿದಾಗ ಅದರಲ್ಲಿರುವ ಲಿಕ್ವಿಡ್ ಲೀಕ್ ಆಗಿ ಬೆಂಕಿ ಹೊತ್ತಿಕೊಳ್ಳುತ್ತದೆ. ಒಂದು ಕ್ಷಣ ಬೆಂಕಿ ಅವನ ಮುಖದಾದ್ಯಂತ ಹರಡಿ ನಂತರ ಆರಿಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು. ಬಳಿಕ ಆ ಯುವಕ ಕ್ಯಾಮೆರಾ ಮುಂದೆ ಬಂದು ತನ್ನ ಮುಖವನ್ನು ನೋಡುತ್ತಾನೆ. ಆದರೆ ಆ ಯುವಕನಿಗೆ ಯಾವುದೇ ಹಾನಿಯಾಗಿರುವುದಿಲ್ಲ.
GHOST RIDER IN REAL LIFE🗿 pic.twitter.com/rvFvBtVztq
— Riky y (@Rikyy1913634) January 28, 2025
ಈ ಅಪಾಯಕಾರಿ ಘಟನೆಯಿಂದ ಯುವಕ ಬದುಕುಳಿದಿದ್ದು ನಿಜಕ್ಕೂ ಅದೃಷ್ಟ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕ ಜನರು ತಮ್ಮದೇಯಾದ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್)
ಚಾಣಕ್ಯನ ಪ್ರಕಾರ ಈ ಅಭ್ಯಾಸಗಳು ನಿಮ್ಮಲ್ಲಿದ್ರೆ ನೀವೆಂದಿಗೂ ಬಡತನದಿಂದ ಹೊರಬರಲು ಸಾಧ್ಯವಿಲ್ಲ! Chanakya Niti