Eggs : ಮೊಟ್ಟೆಯು ಅನೇಕ ಮಂದಿಯ ನೆಚ್ಚಿನ ಆಹಾರವಾಗಿದೆ. ದಿನಕ್ಕೆ ಕನಿಷ್ಠ ಒಂದು ಮೊಟ್ಟೆಯನ್ನಾದರೂ ತಿನ್ನುವವರಿದ್ದಾರೆ. ಕೆಲವರು ಅತಿಯಾಗಿ ಮೊಟ್ಟೆ ತಿನ್ನುತ್ತಾರೆ. ಆದರೆ, ಅತಿಯಾಗಿ ಮೊಟ್ಟೆ ತಿನ್ನುವುದು ಒಳ್ಳೆಯದಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. ಯಾವುದೇ ಇರಲಿ ಮಿತಿಯಾಗಿರಬೇಕು. ಒಂದು ದಿನಕ್ಕೆ ಸುಮಾರು 2 ರಿಂದ 3 ಮೊಟ್ಟೆಗಳನ್ನು ತಿನ್ನಬೇಕೆಂದು ಸಲಹೆ ನೀಡುತ್ತಾರೆ.
ಹಾಗಾದರೆ, ಒಂದು ದಿನದಲ್ಲಿ 30 ಮೊಟ್ಟೆಗಳನ್ನು ತಿಂದರೆ ಏನಾಗಬಹುದು? ಒಂದು ತಿಂಗಳಲ್ಲಿ ಸಾವಿರ ಮೊಟ್ಟೆಗಳನ್ನು ತಿಂದರೆ ದೇಹದಲ್ಲಿ ಏನೆಲ್ಲ ಬದಲಾವಣೆ ಆಗಬಹುದು? ಪೋಷಕಾಂಶಗಳ ಉಗ್ರಾಣವಾಗಿರುವ ಮೊಟ್ಟೆಗಳನ್ನು ನಾವು ಅತಿಯಾಗಿ ತಿಂದರೆ ಏನಾಗುತ್ತದೆ? ಇದರ ಪ್ರಯೋಗವನ್ನು ಮಾಡಿದ ಖ್ಯಾತ ಬಾಡಿಬಿಲ್ಡರ್ ಜೋಸೆಫ್ ಎವೆರೆಟ್ ಕೊಡುವ ಉತ್ತರವಿದು.
ಜಪಾನಿನ ಮೂಲದ ಜೋಸೆಫ್, ಟೋಕಿಯೊದಲ್ಲಿ ವಾಸಿಸುತ್ತಿದ್ದಾರೆ. ಯೂಟ್ಯೂಬರ್ ಕೂಡ ಆಗಿರುವ ಈ ಯುವಕ ತನ್ನ ಪ್ರಯೋಗದ ವಿಡಿಯೋಗಳನ್ನು ತನ್ನ ಚಾನೆಲ್‌ನಲ್ಲಿ ಆಗಾಗ ಹಂಚಿಕೊಳ್ಳುತ್ತಾನೆ. ಜೋಸೆಫ್ ಅವರು ಅಗತ್ಯಕ್ಕಿಂತ ಹೆಚ್ಚಿನ ಮೊಟ್ಟೆಗಳನ್ನು ತಿನ್ನುವ ಪ್ರಯೋಗವನ್ನು ಮಾಡಿದ್ದಾನೆ.
ಇದನ್ನೂ ಓದಿ: ಕೇಳಿದಷ್ಟು ವರದಕ್ಷಿಣೆ ತರಲಿಲ್ಲವೆಂದು ಸೊಸೆಗೆ HIV ಸೋಂಕಿತ ಸೂಜಿಯನ್ನು ಚುಚ್ಚಿದ ಅತ್ತೆ-ಮಾವ
ಪ್ರಯೋಗವನ್ನು ಪ್ರಾರಂಭಿಸುವ ಮೊದಲು, ತನ್ನ ಫಿಟ್ನೆಸ್ ಅನ್ನು ಅಳೆದನು. ದೇಹದ ತೂಕವನ್ನು ಅಳೆಯುವುದರೊಂದಿಗೆ ದೇಹದಲ್ಲಿನ ಪೋಷಕಾಂಶಗಳ ಪ್ರಮಾಣವನ್ನು ದಾಖಲಿಸಲು ರಕ್ತ ಪರೀಕ್ಷೆಗಳನ್ನು ಸಹ ಮಾಡಿಸಿದನು. ಕೊಲೆಸ್ಟ್ರಾಲ್ ಮತ್ತು ಟೆಸ್ಟೋಸ್ಟೆರಾನ್ ಮಟ್ಟವನ್ನು ಸಹ ದಾಖಲಿಸಿದನು. ಬಳಿಕ ಒಂದು ತಿಂಗಳಲ್ಲಿ 1000 ಮೊಟ್ಟೆಗಳನ್ನು ತಿಂದು ಮತ್ತೆ ಪರೀಕ್ಷೆ ಮಾಡಿಸಿದನು.
ಒಂದು ತಿಂಗಳ ನಂತರ, ಎಲ್ಲ ಪರೀಕ್ಷೆಗಳನ್ನು ಪುನರಾವರ್ತಿಸಿದಾಗ, ದೇಹದಲ್ಲಿ ಸ್ನಾಯುಗಳ ಬಲವು ಸುಮಾರು ಆರು ಕಿಲೋಗ್ರಾಂಗಳಷ್ಟು ಹೆಚ್ಚಾಗಿರುವುದು ಕಂಡುಬಂತು. ಕೆಟ್ಟ ಕೊಬ್ಬು ಹೆಚ್ಚಾಗಿರಲಿಲ್ಲ ಆದರೆ, ಉತ್ತಮ ಕೊಲೆಸ್ಟ್ರಾಲ್ ಹೆಚ್ಚಾಗಿತ್ತು. ರಕ್ತದಲ್ಲಿ ಕಂಡುಬರುವ ಅಪಾಯಕಾರಿ ಕೊಬ್ಬು ಟ್ರೈಗ್ಲಿಸರೈಡ್‌ಗಳು ಗಮನಾರ್ಹವಾಗಿ ಕಡಿಮೆಯಾಗಿತ್ತು. ಇದು ಹೃದಯ ಕಾಯಿಲೆಗೆ ಕಾರಣವಾಗುವ ಕೊಬ್ಬು. ಟೆಸ್ಟೋಸ್ಟೆರಾನ್ ಮಟ್ಟದಲ್ಲೂ ಕೂಡ ಯಾವುದೇ ಬದಲಾವಣೆ ಆಗಿರಲಿಲ್ಲ.
ಅಂದಹಾಗೆ ದಿನಕ್ಕೆ 30 ಮೊಟ್ಟೆಗಳನ್ನು ತಿನ್ನುತ್ತಿದ್ದ ಜೋಸೆಫ್ ಎವೆರೆಟ್, ನಿಯಮಿತವಾಗಿ ವ್ಯಾಯಾಮ ಮಾಡಿ ತೂಕ ಎತ್ತುವ ಮೂಲಕ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತಿದ್ದರು. ಆದ್ದರಿಂದ, ಇಷ್ಟೊಂದು ಮೊಟ್ಟೆಗಳನ್ನು ತಿನ್ನುವುದರಿಂದ ಅವರಿಗೆ ಯಾವುದೇ ಪರಿಣಾಮ ಬೀರಿಲ್ಲ. ಆದಾಗ್ಯೂ, ಇದು ಸಂಪೂರ್ಣವಾಗಿ ವೈಯಕ್ತಿಕ ಅನುಭವವಾಗಿದ್ದು, ಇತರರು ಜೋಸೆಫ್ ಅವರನ್ನು ಅನುಕರಿಸಬಾರದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. (ಏಜೆನ್ಸೀಸ್)
ನಿಜ ಜೀವನದ ಘೋಸ್ಟ್ ರೈಡರ್! ಯುವಕನ ವೈರಲ್ ವಿಡಿಯೋ ನೋಡಿ ಹುಬ್ಬೇರಿಸಿದ ನೆಟ್ಟಿಗರು | Ghost Rider