Crime: ಗಂಡ ಎಂದರೆ ಎಲ್ಲವನ್ನು ಸಹಿಸಿಕೊಳ್ಳುವ ವ್ಯಕ್ತಿ, ಒಡನಾಡಿ, ನೆರಳು, ಓರ್ವ ಉತ್ತಮ ಸ್ನೇಹಿತ ಎಂದು ಹೇಳುತ್ತಾರೆ. ಏಳು ಹೆಜ್ಜೆಗಳನ್ನು ಇಟ್ಟ ಬಳಿಕ ತನ್ನನ್ನೇ ನಂಬಿ ಬರುವ ಮಹಿಳೆಯನ್ನು ಸದಾ ರಕ್ಷಣೆ ಮಾಡುವ ಜವಾಬ್ದಾರಿಯನ್ನು ಗಂಡ ತೆಗೆದುಕೊಳ್ಳುತ್ತಾನೆ. ಆದರೆ, ಇಲ್ಲೊಬ್ಬ ಗಂಡ ಅದಕ್ಕೆ ವಿರುದ್ಧವಾಗಿದ್ದು, ಹಣಕ್ಕಾಗಿ ಸೈಕೋ ಆಗಿದ್ದಾನೆ.
ಹಣದ ಗೀಳಿಗೆ ಬಿದ್ದ ಗಂಡನೊಬ್ಬ ತನ್ನ ಪತ್ನಿಯಿಂದ ಬೆತ್ತಲೆ ಕರೆ ಮಾಡಿಸಿ ಕಿರುಕುಳ ನೀಡುತ್ತಿದ್ದ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಕೊನೆಗೆ ಗಂಡನ ಕಿರುಕುಳವನ್ನು ಸಹಿಸಲಾರದೇ ಸಂತ್ರಸ್ತ ಮಹಿಳೆ ಪತ್ರಿಕಾಗೋಷ್ಠಿ ನಡೆಸಿ ಗಂಡನ ಕರಾಳ ಮುಖವನ್ನು ಹೊರ ಜಗತ್ತಿಗೆ ಅನಾವರಣ ಮಾಡಿದ್ದಾಳೆ. ಅಲ್ಲದೆ, ಪೊಲೀಸ್ ಠಾಣೆಯ ಮೆಟ್ಟಿಲೇರಿ ದೂರು ಸಹ ದಾಖಲಿಸಿದ್ದಾಳೆ.
ಆರೋಪಿ ಪತಿಯ ಹೆಸರು ಸುಬ್ರಹ್ಮಣ್ಯ ರೆಡ್ಡಿ. ಈತ ಚಮೆಟ್ ಮತ್ತು ಚಿಲ್ ಚಾಟ್ ನಂತಹ ಅಪ್ಲಿಕೇಶನ್‌ಗಳ ಮೂಲಕ ತಮ್ಮ ಪತ್ನಿಯಿಂದ ಬಲವಂತವಾಗಿ ನಗ್ನ ಕರೆಗಳನ್ನು ಮಾಡಿಸಿದ್ದಾನೆ. ಈ ಘಟನೆ ಆಂಧ್ರದ ತಿರುಪತಿಯಲ್ಲಿ ನಡೆದಿದೆ.
ಮಹಾಮಾರಿ ಕರೊನಾ ಅವಧಿಯಲ್ಲಿ, ಪತಿ ಸುಬ್ರಹ್ಮಣ್ಯ ಆ್ಯಪ್‌ಗಳಲ್ಲಿ ನಗ್ನ ವಿಡಿಯೋ ಕರೆಗಳನ್ನು ಮಾಡುವಂತೆ ಒತ್ತಡ ಹೇರಿದನು. ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ, ಈ ರೀತಿ ಮಾಡಿದರೆ ಚೆನ್ನಾಗಿ ಹಣ ಗಳಿಸಬಹುದು ಎಂದು ಹೇಳಿ ಬಲವಂತದಿಂದ ಪತ್ನಿಯಿಂದ ಬೆತ್ತಲೆ ಕರೆಗಳನ್ನು ಮಾಡಿಸಿದನು. ಗಂಡನ ಒತ್ತಾಯಕ್ಕೆ ಮಣಿದ ಪತ್ನಿ, ಬೆತ್ತಲೆ ಕರೆಗಳನ್ನು ಮಾಡಿದಳು. ಎರಡು ವರ್ಷಗಳಲ್ಲಿ ಸುಮಾರು 18 ಲಕ್ಷ ರೂ. ಹಣವನ್ನು ಗಳಿಸಿದರು.
ಇದರ ನಡುವೆ ಪತ್ನಿಯ ಒಂದು ನಗ್ನ ವಿಡಿಯೋ ಕರೆ ವೈರಲ್ ಆದ ನಂತರ, ಸುಬ್ರಹ್ಮಣ್ಯ ಪತ್ನಿಯಿಂದ ದೂರಾಗಿದ್ದಾನಂತೆ. ಹೀಗಾಗಿ ಸಂತ್ರಸ್ತೆ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದು, ತನಗೆ ನ್ಯಾಯ ಕೊಡಿಸಬೇಕೆಂದು ಆಕೆ ಬೇಡಿಕೊಂಡಿದ್ದಾಳೆ.
ನನ್ನ ಗಂಡನ ವಿರುದ್ಧ ಪ್ರಕರಣ ದಾಖಲಿಸಲು ನಾನು ಆರ್‌ಸಿ ಪುರಂ ಪೊಲೀಸ್ ಠಾಣೆಗೆ ಹೋದಾಗ, ಕಾನ್ಸ್ಟೆಬಲ್ ರಮಣ ನನಗೆ ಲೈಂಗಿಕ ಕಿರುಕುಳ ನೀಡಿದ್ದು, ಅಶ್ಲೀಲ ಸಂದೇಶಗಳನ್ನು ಕಳುಹಿಸಿ, ರಾತ್ರಿ ರೂಮಿಗೆ ಬರುವಂತೆ ಕಿರುಕುಳ ನೀಡಿದ್ದಾರೆ ಎಂದು ಇದೇ ವೇಳೆ ಸಂತ್ರಸ್ತೆ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದರು. (ಏಜೆನ್ಸೀಸ್)
ಫೆಬ್ರವರಿ ಕೊನೆಯ ವಾರದಲ್ಲಿ ಈ 3 ರಾಶಿಯವರು ಎಚ್ಚರದಿಂದಿರಿ… ಇಲ್ಲವಾದಲ್ಲಿ ಸಂಕಷ್ಟ ತಪ್ಪಿದ್ದಲ್ಲ! Zodiac Signs
ಈ ಉದ್ಯೋಗದಲ್ಲಿರುವ ಗಂಡಸರು ತಮ್ಮ ಪತ್ನಿಯರಿಗೆ ಹೆಚ್ಚು ಮೋಸ ಮಾಡ್ತಾರಂತೆ! ಪರೀಕ್ಷೆಯಲ್ಲಿ ಸಾಬೀತು | Unfaithful Men