Zodiac Signs : ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಅವಧಿಯ ಬಳಿಕ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸುತ್ತವೆ. ಯಾವಾಗ ಒಂದೇ ರಾಶಿಯಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಗ್ರಹಗಳು ಇದ್ದಾಗ, ಅವು ಸಂಯೋಗವನ್ನು ರೂಪಿಸುತ್ತವೆ. ಇದು ರಾಶಿಚಕ್ರ ಚಿಹ್ನೆಗಳ ಮೇಲೆ ಒಳಿತು ಮತ್ತು ಕೆಡುಕಿನ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.
ಈ ತಿಂಗಳ (ಫೆಬ್ರವರಿ) ಕೊನೆಯ ವಾರದಲ್ಲಿ ಮೀನ ರಾಶಿಯಲ್ಲಿ ವಿಶೇಷ ಗ್ರಹಗಳ ಸಂಯೋಗ ನಡೆಯಲಿದೆ. 3 ಗ್ರಹಗಳು ಒಂದೇ ಸಮಯದಲ್ಲಿ ಒಟ್ಟಿಗೆ ಸೇರಿ ಮೀನ ರಾಶಿಯಲ್ಲಿ ತ್ರಿಗ್ರಹಿ ಯೋಗವನ್ನು ರೂಪಿಸುತ್ತವೆ. ಕ್ಯಾಲೆಂಡರ್ ಫೆಬ್ರವರಿ 27 ರಂದು ಬುಧ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ರಾಹು ಮತ್ತು ಶುಕ್ರ ಈಗಾಗಲೇ ಮೀನ ರಾಶಿಯಲ್ಲಿದ್ದಾರೆ. ಈ ಮೂರು ಗ್ರಹಗಳ ಸಂಯೋಜನೆಯು ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ. ಆ ರಾಶಿಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.
ತುಲಾ ರಾಶಿ
ತುಲಾ ರಾಶಿಯಡಿ ಜನಿಸಿದವರಿಗೆ ಈ ಸಮಯ ಸ್ವಲ್ಪ ತೊಂದರೆದಾಯಕವಾಗಿರುತ್ತದೆ. ಹೀಗಾಗಿ ಬಹಳ ಎಚ್ಚರಿಕೆಯಿಂದ ಇರಬೇಕು. ನಂಬಿದವರೇ ನಿಮಗೆ ದ್ರೋಹ ಮಾಡುವ ಸಾಧ್ಯತೆ ಇದೆ. ಹತ್ತಿರ ಇರುವವರು ನಿಮ್ಮ ವಿರುದ್ಧ ಸಂಚು ಮಾಡಬಹುದು. ಹೀಗಾಗಿ ಹುಷಾರಾಗಿರಿ. ಇದಲ್ಲದೆ, ಈ ಸಮಯದಲ್ಲಿ ನಿಮ್ಮ ಶತ್ರುಗಳು ನಿಮ್ಮ ಕೆಲಸಕ್ಕೆ ಅಡ್ಡಿ ಮಾಡಬಹುದು. ಉದ್ಯೋಗಕ್ಕಾಗಿ ಅಲೆದಾಡುತ್ತಿರುವವರು ಕರಿಣ ಶ್ರಮ ಹಾಕಬೇಕಾಗುತ್ತದೆ. ಈ ಸಮಯದಲ್ಲಿ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಬಯಸುವುದಾದರೆ ನೀವು ಶಿವನನ್ನು ಪೂಜಿಸಿ.
ಮೇಷ ರಾಶಿ
ತ್ರಿಗ್ರಹಿ ಯೋಗವು ಮೇಷ ರಾಶಿಯ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಹಾಗಾಗಿ ಈ ಸಮಯದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವೈಯಕ್ತಿಕವಾಗಿ ಅಥವಾ ವ್ಯಾಪರದಲ್ಲಿ ಭಾರಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಏನೇ ಮಾಡಬೇಕೆಂದರೂ ಬಹಳ ಎಚ್ಚರಿಯಿಂದ ಮಾಡಿ. ಮನೆಯಲ್ಲಿಯೂ ಶಾಂತಿಯ ವಾತಾವರಣ ಕದಡುವ ಸಾಧ್ಯತೆ ಇದೆ. ಹೀಗಾಗಿ ಯಾರೊಂದಿಗೂ ಅನಗತ್ಯವಾಗಿ ವಾಗ್ವಾದ ಮಾಡಬೇಡಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೂ ಈ ಅವಧಿ ಶುಭವಲ್ಲ. ನಿಮ್ಮ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯ ಸಮಸ್ಯಗಳು ಕಾಡಬಹುದು. ಒತ್ತಡ ಮತ್ತು ಆತಂಕ ನಿಮ್ಮನ್ನು ಬಾದಿಸಬಹುದು. ನಿಮ್ಮಲ್ಲಿ ಏಕಾಗ್ರತೆ ಕೊರತೆ ಉಂಟಾಗಬಹುದು. ಏನೇ ಕೆಲಸ ಮಾಡಲೂ ಹೋದರು ಅದರಲ್ಲಿ ಹಿನ್ನಡೆಯನ್ನು ಅನುಭವಿಸುವ ಸಾಧ್ಯತೆ ಇದೆ. ಯಾವುದೇ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳದೇ ಈ ಸಮಯದಲ್ಲಿ ಕೊಂಚ ತಾಳ್ಮೆಯನ್ನು ಕಾಯ್ದುಕೊಂಡರೆ ಆಪತ್ತಿಂದ ಪಾರಾಗಬಹುದು. ಹಣಕಾಸಿನ ವಿಚಾರದಲ್ಲಂತೂ ಬಹಳ ಎಚ್ಚರಿಕೆಯಿಂದಿರಿ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್ ನೆಟ್ ಸೈಟ್ ಜವಾಬ್ದಾರರಾಗಿರುವುದಿಲ್ಲ.
ನಿಜ ಜೀವನದ ಘೋಸ್ಟ್ ರೈಡರ್! ಯುವಕನ ವೈರಲ್ ವಿಡಿಯೋ ನೋಡಿ ಹುಬ್ಬೇರಿಸಿದ ನೆಟ್ಟಿಗರು | Ghost Rider
ಜೀನಿಯಸ್ ಮಾತ್ರ ಕೇವಲ 10 ಸೆಕೆಂಡ್ಗಳಲ್ಲಿ ಈ ಫೋಟೋದಲ್ಲಿರುವ ಬೆಕ್ಕನ್ನು ಹುಡುಕಬಲ್ಲರು! Optical Illusion