More

    ಇಂದು ವಿಶ್ವ ಕ್ಷೀರ ದಿನ 2023; ಈ ದಿನದ ಮಹತ್ವ, ಉದ್ದೇಶವೇನು ಗೊತ್ತಾ?

    ಬೆಂಗಳೂರು: ಹಾಲು ಪೌಷ್ಟಿಕ ಆಹಾರದ ಅತ್ಯಗತ್ಯ ಭಾಗವಾಗಿದೆ. ಉಪಾಹಾರಕ್ಕಾಗಿ ಬೆಳಿಗ್ಗೆ ಟೋಸ್ಟ್ ಮತ್ತು ಬ್ರೆಡ್‌ನ ಮೇಲೆ ಹರಡುವ ಬೆಣ್ಣೆಯಿಂದ ಹಿಡಿದು ಜನರು ಫಿಟ್‌ ಆಗಿರಲು ಪ್ರತಿದಿನ ಸೇವಿಸುವ ಬಿಸಿಬಿಸಿ ಹಾಲು ಎಲ್ಲವೂ ಮುಖ್ಯವಾಗಿದೆ. ಹೈನುಗಾರಿಕೆಯಿಂದ ದೇಶದ ಕೋಟ್ಯಂತರ ಕುಟುಂಬಗಳ ಜೀವನಾಧಾರವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.

    ಹಾಲು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಕ್ಷೀರ ಹಾಗೂ ಹಾಲಿನಿಂದ ತಯಾರಿಸುವ ಪದಾರ್ಥಗಳನ್ನು ನಾಲಿಗೆ ಚಪ್ಪರಿಸಿ ತಿನ್ನುವ ನಮಗೆ ಹಾಲಿನ ಕುರಿತಾಗಿ ಎಷ್ಟೋ ವಿಚಾರಗಳು ಗೊತ್ತಿರುವುದಿಲ್ಲ. ವಿಶ್ವ ಕ್ಷೀರ ದಿನ ಎಂದು ಆಚರಣೆ ಮಾಡುವ ಒಂದು ದಿನ ಇದೆ? ಅದು ಯಾವಾಗ? ಮಹತ್ವ ಏನು ಎಂಬುದು ತಿಳಿದೆ ಇರುವುದಿಲ್ಲ. ಪ್ರತಿ ವರ್ಷ ಜೂನ್ 1 ರಂದು ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತದೆ. 2023ಕ್ಕೆ ಅದರ ಇತಿಹಾಸ, ಮಹತ್ವ ಮತ್ತು ಥೀಮ್ ಕುರಿತು ಇನ್ನಷ್ಟು ತಿಳಿಯಿರಿ.

    ವಿಶ್ವ ಹಾಲಿನ ದಿನ: 2001ರಲ್ಲಿ ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಜೂನ್‌ 1ನ್ನು ವಿಶ್ವ ಕ್ಷೀರ ದಿನವಾಗಿ ಆಚರಿಸಲು ಆರಂಭಿಸಿತು. ಜಗತ್ತಿನ ಎಲ್ಲೆಡೆ ಆರೋಗ್ಯಕರ ಆಹಾರವಾದ ಹಾಲನ್ನು ಎಲ್ಲರಿಗೆ ದೊರೆಯುವಂತೆ ಮಾಡುವುದು, ಮಕ್ಕಳಿಗೆ ಅಪೌಷ್ಟಿಕತೆ ಉಂಟಾಗದಂತೆ ತಡೆಯಲು ಹಾಲು ಮತ್ತು ಡೈರಿ ಉತ್ಪನ್ನಗಳು ದೊರೆಯುವಂತೆ ಮಾಡುವ ಜಾಗೃತಿ ಮೂಡಿಸುವುದು ಈ ದಿನ ಆಚರಣೆಯ ಉದ್ದೇಶವಾಗಿದೆ.

    ಇದನ್ನೂ ಓದಿ: ಜೂನ್​ 4ರಂದು ಸ್ಥಳದಲ್ಲೇ ಚಿತ್ರ ಬಿಡಿಸಿ ಸ್ಪರ್ಧೆ: ವಿಜಯವಾಣಿ, ದಿಗ್ವಿಜಯ ನ್ಯೂಸ್​ನಿಂದ ಮಕ್ಕಳಿಗಾಗಿ ಆಯೋಜನೆ

    ವಿಶ್ವ ಹಾಲು ದಿನದ ಮಹತ್ವ: ವಿಶ್ವ ಹಾಲು ದಿನವು ಜನರಿಗೆ ಹಾಲಿನ ಮಹತ್ವದ ಬಗ್ಗೆ ಅರಿವು ಮೂಡಿಸಲು ಮತ್ತು ಉತ್ತಮ ಮತ್ತು ಆರೋಗ್ಯಕರ ಆಹಾರದ ಅತ್ಯಂತ ಅಗತ್ಯವಾದ ಭಾಗದ ಕಡೆಗೆ ಗಮನವನ್ನು ಸೆಳೆಯಲು ನಮಗೆ ಅವಕಾಶವನ್ನು ಒದಗಿಸುತ್ತದೆ. ಆಹಾರ ಮತ್ತು ಕೃಷಿ ಸಂಸ್ಥೆಯ (FAO) ದತ್ತಾಂಶದ ಪ್ರಕಾರ, ಒಂದು ಶತಕೋಟಿಗೂ ಹೆಚ್ಚು ಜೀವನೋಪಾಯವನ್ನು ಡೈರಿ ವಲಯವು ನೋಡಿಕೊಳ್ಳುತ್ತದೆ ಮತ್ತು ಜಾಗತಿಕವಾಗಿ ಆರು ಶತಕೋಟಿಗೂ ಹೆಚ್ಚು ಜನರು  ಹಾಲಿನ ಉತ್ಪನ್ನಗಳನ್ನು ಸೇವಿಸುತ್ತಾರೆ.

    ವಿಶ್ವ ಹಾಲು ದಿನದ ಆಚರಣೆ: ಪೌಷ್ಟಿಕ ಆಹಾರ ಮತ್ತು ಜೀವನೋಪಾಯವನ್ನು ಒದಗಿಸುವಲ್ಲಿ ಹಾಲು ಮುಖ್ಯವಾಗಿದೆ. ಇದು ಮುಖ್ಯವಾಗಿ ಈ ಕೆಳಗಿನ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ರೈತರು ತಮ್ಮ ಸಮುದಾಯಗಳು, ಭೂಮಿ ಮತ್ತು ಅವರ ಪ್ರಾಣಿಗಳ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ.ಆರ್ಥಿಕ ಅಭಿವೃದ್ಧಿ ಮತ್ತು ಜೀವನೋಪಾಯಕ್ಕೆ ಹೈನುಗಾರಿಕೆಯ ಕೊಡುಗೆಯಾಗಿದೆ.

    ವಿಶ್ವ ಹಾಲು ದಿನದ ಆಚರಣೆಯು ಜನರ ಜೀವನದಲ್ಲಿ ಹಾಲಿನ ಪ್ರಾಮುಖ್ಯತೆಯನ್ನು ತೋರಿಸುವ ವಿವಿಧ ಕಾರ್ಯಕ್ರಮಗಳು, ಚಟುವಟಿಕೆಗಳು, ಸೆಮಿನಾರ್‌ಗಳು ಮತ್ತು ಕಾರ್ಯಾಗಾರಗಳನ್ನು ವಿಶ್ವದಾದ್ಯಂತ ಆಯೋಜಿಸಲಾಗುತ್ತದೆ. #WorldMilkDay & #EnjoyDairy ನಂತಹ ಹ್ಯಾಶ್‌ಟ್ಯಾಗ್‌ಗಳ ಮೂಲಕ ಸಾಮಾಜಿಕ ಮಾಧ್ಯಮ ಆಚರಣೆಗಳನ್ನು ಸಹ ನಡೆಸಲಾಗುತ್ತದೆ.

    ಮಲೈಕಾ ಆರೋರಾ ಗರ್ಭಿಣಿ ಗಾಸಿಪ್​​; ಸುಮ್ಮನೆ ಊಹಿಸಿ ಎಲ್ಲವನ್ನೂ ಬರೆಯಬೇಡಿ ಎಂದ ಅರ್ಜುನ್​ ಕಪೂರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts