India slams Pakistan : ನೆರೆಯ ರಾಷ್ಟ್ರ ಪಾಕಿಸ್ತಾನ ಮತ್ತೊಮ್ಮೆ ಭಾರತದ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸಿದೆ. ಇತ್ತೀಚೆಗೆ ಬಲೂಚಿಸ್ತಾನ್ ಬಂಡುಕೋರರು ಪಾಕಿಸ್ತಾನದಲ್ಲಿ ರೈಲು ಅಪಹರಿಸಿದರು. ಈ ಪ್ರಕರಣವನ್ನು ಮುಂದಿಟ್ಟುಕೊಂಡು ಭಾರತದತ್ತ ಬೊಟ್ಟು ಮಾಡಿರುವ ಪಾಕ್, ಬಲೂಚ್ ಬಂಡಕೋರರನ್ನು ಪ್ರಚೋದಿಸುವಲ್ಲಿ ಭಾರತದ ಪಾತ್ರವಿದೆ ಮತ್ತು ನೆರೆಯ ರಾಷ್ಟ್ರಗಳನ್ನು ಅಸ್ಥಿರಗೊಳಿಸುವ ಕೆಲಸವನ್ನು ಭಾರತ ಮಾಡುತ್ತಿದೆ ಎಂದು ಆರೋಪಿಸಿದೆ. ಆದರೆ, ಪಾಕ್ ಆರೋಪಗಳನ್ನು ನಿರಾಕರಿಸಿರುವ ಭಾರತ ಖಡಕ್ ತಿರುಗೇಟು ನೀಡಿದೆ.
ಇತ್ತೀಚೆಗೆ ನಡೆದ ರೈಲು ಹೈಜಾಕ್ ಪ್ರಕರಣದ ಬಗ್ಗೆ ಮಾತನಾಡಿದ ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ಶಫ್ಕತ್ ಅಲಿ ಖಾನ್, ಭಾರತವನ್ನು ದೂಷಿಸಿದರು. ಭಾರತ ತಮ್ಮ ದೇಶದ ವಿರುದ್ಧ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದೆ. ಪ್ರಪಂಚದಾದ್ಯಂತ ಕೊಲೆಗಳನ್ನು ನಡೆಸುತ್ತಿದೆ. ಅಲ್ಲದೆ, ಭಾರತೀಯ ಮಾಧ್ಯಮಗಳು ಬಿಎಲ್‌ಎಯನ್ನು ವೈಭವೀಕರಿಸುತ್ತಿವೆ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಭಾರತದ ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಪಾಕಿಸ್ತಾನದ ವಿದೇಶಾಂಗ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಪಾಕಿಸ್ತಾನ ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ. ಅವರು ಇತರರ ಕಡೆಗೆ ಬೆರಳು ತೋರಿಸುವ ಬದಲು ತಮ್ಮ ಆಂತರಿಕ ಸಮಸ್ಯೆಗಳತ್ತ ಗಮನಹರಿಸಿದರೆ ಉತ್ತಮ. ಭಯೋತ್ಪಾದನೆಯ ಕೇಂದ್ರ ಎಲ್ಲಿದೆ ಎಂದು ಇಡೀ ಜಗತ್ತಿಗೆ ತಿಳಿದಿದೆ. ಅವರು ಮೊದಲು ತಮ್ಮದ್ದನ್ನು ನೋಡಿಕೊಳ್ಳಬೇಕು ಎಂದು ತಿರುಗೇಟು ನೀಡಿದ್ದಾರೆ.
Our response to media queries on the remarks made by the Pakistan side ⬇️
🔗 https://t.co/8rUoE8JY6A pic.twitter.com/2LPzACbvbf
— Randhir Jaiswal (@MEAIndia) March 14, 2025
ಇತ್ತೀಚೆಗೆ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಪ್ರತ್ಯೇಕತಾವಾದಿ ಬಲೂಚ್ ಉಗ್ರರು ಪ್ರಯಾಣಿಕ ರೈಲನ್ನು ಅಪಹರಿಸಿದ್ದರು. 400 ಜನರನ್ನು ಹೊತ್ತೊಯ್ಯುತ್ತಿದ್ದ ರೈಲಿನ ಮೇಲೆ ಉಗ್ರರು ದಾಳಿ ಮಾಡಿದ್ದರು. ರೈಲ್ವೆ ಮಾರ್ಗದಲ್ಲಿ 17 ಸುರಂಗಗಳಿವೆ. ಉಗ್ರರು 8ನೇ ಸುರಂಗದಲ್ಲಿ ಹಳಿಯನ್ನು ಸ್ಫೋಟಿಸಿ ಜಾಫರ್ ಎಕ್ಸ್‌ಪ್ರೆಸ್ ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ಬಲೂಚ್ ಉಗ್ರರು 33 ಜನರನ್ನು ಕೊಂದಿದ್ದಾರೆ ಎಂದು ಪಾಕಿಸ್ತಾನಿ ಸೇನೆ ಈಗಾಗಲೇ ಘೋಷಿಸಿದೆ. 21 ಪ್ರಯಾಣಿಕರು ಸೇರಿದಂತೆ ನಾಲ್ವರು ಸೈನಿಕರು ಉಗ್ರರ ಕೈಯಿಂದ ಮೃತಪಟ್ಟಿದ್ದಾರೆ. (ಏಜೆನ್ಸೀಸ್)
ಈ 3 ರಾಶಿಯ ಮಹಿಳೆಯರು ಅಯಸ್ಕಾಂತದಂತೆ ಪುರುಷರನ್ನು ತನ್ನತ್ತ ಸೆಳೆಯುತ್ತಾರಂತೆ! ನಿಮ್ಮ ರಾಶಿ ಯಾವುದು? Zodiac Signs
ಇವರೇ ನೋಡಿ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟ್ಸ್ಮನ್ಗಳು! IPL