Repeat Of The Glory : ದೇಶ ಕಂಡ ಅತ್ಯಂತ ಸ್ಫೋಟಕ ಮತ್ತು ಆಕರ್ಷಕ ಬ್ಯಾಟರ್ಗಳಲ್ಲಿ ಒಬ್ಬರಾದ ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ 2007 ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ 6 ಬಾಲ್ಗೆ 6 ಸಿಕ್ಸರ್ ಹೊಡೆಯುವ ಬ್ಯಾಟಿಂಗ್ ಅನ್ನು ಮತ್ತೊಮ್ಮೆ ಗುರುವಾರ ಅಭಿಮಾನಿಗಳಿಗೆ ಉಣಬಡಿಸಿದರು.
ಹೌದು, ಗುರುವಾರ ರಾಯಪುರ್ನಲ್ಲಿ ನಡೆದ ಇಂಡಿಯನ್ ಮಾಸ್ಟರ್ಸ್ ಲೀಗ್‌ನಲ್ಲಿ(International Masters League) ಯುವರಾಜ್ ಸಿಂಗ್ 30 ಎಸೆತಗಳಲ್ಲಿ 59 ರನ್ ಗಳಿಸಿದರು, 7 ಸಿಕ್ಸರ್‌ಗಳು ಮತ್ತು 1 ಬೌಂಡರಿಯೊಂದಿಗೆ ಭಾರತ ತಂಡವು ಆಸ್ಟ್ರೇಲಿಯಾವನ್ನು ಟೂರ್ನಿಯಿಂದ ಹೊರ ಹಾಕಿತು. ಇವರ ಆಮೋಘ ಸಿಕ್ಸರ್‌ಗಳು 2007ರ ಐಸಿಸಿ ಟಿ-20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ವಿರುದ್ಧ ಒಂದೇ ಓವರ್‌ನಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿದ್ದ ಅವರ ಸಾಹಸವನ್ನು ಅಭಿಮಾನಿಗಳಿಗೆ ನೆನಪಿಸಿತು.
ಮಧ್ಯಮ ಕ್ರಮಾಂಕದಲ್ಲಿ ಬಂದ ಯುವಿ ಆಸ್ಟ್ರೇಲಿಯಾದ ಲೆಗ್-ಸ್ಪಿನ್ನರ್ ಮೆಕ್‌ಗೈನ್ ಅವರ ಒಂದೇ ಓವರ್‌ನಲ್ಲಿ ಮೂರು ಸಿಕ್ಸರ್‌ಗಳು ಹೊಡೆಯುವ ಮೂಲಕ ಬ್ಯಾಟಿಂಗ್ ವೈಖರಿಯನ್ನು ಮತ್ತೊಮ್ಮೆ ಸಾಬೀತುಪಡಿಸಿತು.
𝐘𝐮𝐯𝐫𝐚𝐣’𝐬 𝐬𝐢𝐱-𝐬𝐚𝐭𝐢𝐨𝐧𝐚𝐥 5️⃣0️⃣! 💪
His powerful display leads him to a remarkable half-century! ⚡🙌
Watch the action LIVE ➡ on @JioHotstar, @Colors_Cineplex & @CCSuperhits! #IMLT20 #TheBaapsOfCricket #IMLonJioHotstar #IMLonCineplex pic.twitter.com/QhJRdyh4zu
— INTERNATIONAL MASTERS LEAGUE (@imlt20official) March 13, 2025
ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಕೂಡ ತಮ್ಮ ಶ್ರೇಷ್ಠ ಪ್ರದರ್ಶನ ನೀಡಿ 30 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ 42 ರನ್ ಗಳಿಸಿದರು. ಇಂಡಿಯಾದ ಮಾಜಿ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ 21 ಎಸೆತಗಳಲ್ಲಿ 36 ರನ್ ಗಳಿಸಿದರೆ, ಯೂಸುಫ್ ಪಠಾಣ್ 10 ಎಸೆತಗಳಲ್ಲಿ 23 ರನ್ ಗಳಿಸಿದರು. ಇರ್ಫಾನ್ ಪಠಾಣ್ ಕೂಡ 7 ಎಸೆತಗಳಲ್ಲಿ 19 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು.(ಏಜೆನ್ಸೀಸ್)
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಟೀಮ್ ಇಂಡಿಯಾ ಆಲ್‌ರೌಂಡರ್ ಅಕ್ಷರ್ ಪಟೇಲ್ ಆಯ್ಕೆ! Delhi Capitals