blank

ಇವರೇ ನೋಡಿ ಐಪಿಎಲ್​​ ಇತಿಹಾಸದಲ್ಲೇ ಅತಿ ಹೆಚ್ಚು ರನ್​ ಗಳಿಸಿದ ಟಾಪ್​ 5 ಬ್ಯಾಟ್ಸ್​ಮನ್​ಗಳು! IPL

IPL

IPL : ಈವರೆಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸದ್ದು ಮೊಳಗುತ್ತಿತ್ತು. ಆದರೆ, ಮಾರ್ಚ್​ 9ರಂದು ಈ ಪ್ರತಿಷ್ಠಿತ ಟೂರ್ನಿ ಮುಗಿದಿದೆ. ಫೈನಲ್​ ಪಂದ್ಯದಲ್ಲಿ ನ್ಯೂಜಿಲೆಂಡ್​ ತಂಡವನ್ನು ಮಣಿಸಿ ಟೀಮ್​ ಇಂಡಿಯಾ ಟ್ರೋಫಿ ಜಯಿಸಿದೆ. ಇದೀಗ ಎಲ್ಲರ ಕಣ್ಣು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್​) ಮೇಲೆ ಬಿದ್ದಿದೆ. ಈ ಕ್ಯಾಶ್​ ರಿಚ್​ ಲೀಗ್​ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಲು ಮತ್ತೊಮ್ಮೆ ಸಿದ್ಧವಾಗುತ್ತಿದೆ.

ಹೌದು, ಐಪಿಎಲ್ 2025ನೇ ಸೀಸನ್​ ಮಾರ್ಚ್ 22ರಿಂದ ಆರಂಭವಾಗಲಿದೆ. ಫೈನಲ್​ ಪಂದ್ಯ ಮೇ 25 ರಂದು ನಡೆಯಲಿದೆ. ಐಪಿಎಲ್ 2025ರ ಉದ್ಘಾಟನಾ ಪಂದ್ಯವು ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಈ ಪಂದ್ಯಾವಳಿ ಪ್ರಾರಂಭವಾಗುವ ಮೊದಲು, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್-5 ಬ್ಯಾಟ್ಸ್‌ಮನ್‌ಗಳು ಯಾರು ಎಂಬುದನ್ನು ನಾವೀಗ ನೋಡೋಣ.

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. 2008 ರಿಂದ ಕೊಹ್ಲಿ ಅವರು ಒಟ್ಟು 252 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, ಕೊಹ್ಲಿ 244 ಇನ್ನಿಂಗ್ಸ್‌ಗಳಲ್ಲಿ 8004 ರನ್ ಗಳಿಸಿದ್ದಾರೆ. ರನ್ ಮೆಷಿನ್ ಸರಾಸರಿ 38 ಮತ್ತು 131 ಸ್ಟ್ರೈಕ್ ರೇಟ್​ನಲ್ಲಿ ರನ್​ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಕಿಂಗ್ ಕೊಹ್ಲಿಯ ಅತ್ಯಧಿಕ ಸ್ಕೋರ್ 113 ರನ್‌ಗಳು (ಔಟಾಗದೆ). ಇಲ್ಲಿಯವರೆಗೆ ಕೊಹ್ಲಿ ಐಪಿಎಲ್‌ನಲ್ಲಿ 8 ಶತಕಗಳು ಮತ್ತು 55 ಅರ್ಧಶತಕಗಳನ್ನು ಗಳಿಸಿದ್ದಾರೆ.

ಶಿಖರ್ ಧವನ್

ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಮಾಜಿ ಬ್ಯಾಟ್ಸ್‌ಮನ್ ಶಿಖರ್ ಧವನ್ ಐಪಿಎಲ್‌ನಲ್ಲಿ ಐದು ತಂಡದ ಸದಸ್ಯರಾಗಿದ್ದಾರೆ. ಅವರು 2008 ರಿಂದ 2024 ರವರೆಗೆ ತಮ್ಮ ವೃತ್ತಿಜೀವನದಲ್ಲಿ 222 ಪಂದ್ಯಗಳನ್ನು ಆಡಿದ್ದಾರೆ. ಧವನ್ 6769 ರನ್ ಗಳಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅವರು ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಧವನ್ ಅವರ ಅತ್ಯಧಿಕ ಸ್ಕೋರ್ ಔಟಾಗದೆ 106. ಅವರು ಐಪಿಎಲ್ ಟೂರ್ನಿಯಲ್ಲಿ ಎರಡು ಬಾರಿ 100 ರನ್ ಮತ್ತು 51 ಅರ್ಧಶತಕಗಳನ್ನು ಗಳಿಸಿದ್ದಾರೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಹೆಚ್ಚೆಚ್ಚು ಎಳನೀರು ಕುಡಿಯುತ್ತೀರಾ? ಈ ಅಡ್ಡಪರಿಣಾಮಗಳಿವೆ ಎಚ್ಚರ! ಇವರಂತೂ ಕುಡಿಯಲೇಬಾರದು… Coconut water

ರೋಹಿತ್​ ಶರ್ಮ

ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮ 2008 ರಿಂದ ಐಪಿಎಲ್‌ನಲ್ಲಿ ಒಟ್ಟು 257 ಪಂದ್ಯಗಳನ್ನು ಆಡಿದ್ದಾರೆ. ಹಿಟ್‌ಮ್ಯಾನ್ 252 ಇನ್ನಿಂಗ್ಸ್‌ಗಳಲ್ಲಿ 6628 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಅವರು ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಅವರ ಅತ್ಯಧಿಕ ಸ್ಕೋರ್ 109 (ಅಜೇಯ). ಅವರು ತಮ್ಮ ಬ್ಯಾಟ್‌ನಿಂದ 2 ಶತಕಗಳು ಮತ್ತು 43 ಅರ್ಧಶತಕಗಳನ್ನು ಗಳಿಸಿದ್ದಾರೆ.

ಡೇವಿಡ್ ವಾರ್ನರ್

ಐಪಿಎಲ್ 2024ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಡೇವಿಡ್ ವಾರ್ನರ್ ಅವರನ್ನು ಐಪಿಎಲ್ 2025ರ ಹರಾಜಿನಲ್ಲಿ ಯಾವುದೇ ತಂಡ ಬಿಡ್ ಮಾಡಲಿಲ್ಲ. ಐಪಿಎಲ್ ಇತಿಹಾಸದಲ್ಲಿ ಡೇವಿಡ್ ವಾರ್ನರ್​ ಅತಿ ಹೆಚ್ಚು ರನ್ ಗಳಿಸಿದ ನಾಲ್ಕನೇ ಆಟಗಾರ. 2009 ರಿಂದ 2024 ರವರೆಗೆ ಒಟ್ಟು 184 ಪಂದ್ಯಗಳಲ್ಲಿ ಅವರು 6565 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 126 ರನ್. ಅವರ ಹೆಸರಿನಲ್ಲಿ 4 ಶತಕಗಳು ಮತ್ತು 62 ಅರ್ಧಶತಕಗಳಿವೆ.

ಸುರೇಶ್ ರೈನಾ

ಸಿಎಸ್‌ಕೆ ತಂಡದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ 2008 ರಿಂದ 2021 ರವರೆಗೆ ಐಪಿಎಲ್‌ನಲ್ಲಿ 205 ಪಂದ್ಯಗಳನ್ನು ಆಡಿದ್ದಾರೆ. 200 ಇನ್ನಿಂಗ್ಸ್‌ಗಳಲ್ಲಿ 5528 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ ಔಟಾಗದೆ 100 ರನ್. ರೈನಾ ಐಪಿಎಲ್‌ನಲ್ಲಿ 1 ಶತಕ ಮತ್ತು 39 ಅರ್ಧಶತಕಗಳನ್ನು ಗಳಿಸಿದ್ದಾರೆ. (ಏಜೆನ್ಸೀಸ್​)

ಒಂದು ಕಾಲದಲ್ಲಿ ಟೀಮ್​ ಇಂಡಿಯಾ ಬೌಲರ್​ ಆಗಿದ್ದ ಈತ ಇಂದು ಕೆಕೆಆರ್​ ತಂಡದ ನೆಟ್​ ಬೌಲರ್! IPL 2025 ​

ಜಗತ್ತಿನ ಮೊದಲ ವಿಮಾನದ ಟಿಕೆಟ್ ​ದರ ಎಷ್ಟಿತ್ತು ಗೊತ್ತೆ?; ಪ್ರಯಾಣದ ರೇಟ್​ ಕೇಳಿದ್ರೆ ದಂಗಾಗೋದು ಗ್ಯಾರಂಟಿ! | Ticket Price

Share This Article

ಸಣ್ಣ ವಿಷಯಗಳಿಗೂ ಒತ್ತಡಕ್ಕೆ ಒಳಗಾಗುತ್ತಿದ್ದೀರಾ?; ಹಾಗಾದ್ರೆ ತಪ್ಪಿದ್ದಲ್ಲ ಈ ಕಾಯಿಲೆಗಳ ಸಮಸ್ಯೆ | Health Tips

ಕೆಲವೊಮ್ಮೆ ನಮ್ಮ ಕೆಲವು ಅಭ್ಯಾಸಗಳು ನಮ್ಮ ದೇಹದಲ್ಲಿ ಹೇಗೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವುದಿಲ್ಲ.…

ಗರ್ಭಧಾರಣೆಯ 7ನೇ ತಿಂಗಳಿನಿಂದ ಅರಿಶಿನದೊಂದಿಗೆ ಹಸುವಿನ ಹಾಲು ಸೇವಿಸಿದ್ರೆ ಸಾಮಾನ್ಯ ಹೆರಿಗೆ ಆಗುವುದೇ; ತಜ್ಞರು ಹೇಳುವುದೇನು? | Health Tips

ಗರ್ಭಾವಸ್ಥೆಯಲ್ಲಿ ಪ್ರತಿ ಮಹಿಳೆ ತನ್ನ ಹೆರಿಗೆ ಸಾಮಾನ್ಯವಾಗಿರಬೇಕೆಂದು ಬಯಸುತ್ತಾರೆ. ವಾಸ್ತವವಾಗಿ ಸಿ-ಸೆಕ್ಷನ್ ಅನೇಕ ಅಡ್ಡಪರಿಣಾಮಗಳನ್ನು ಹೊಂದಿದೆ…

ಬೆಳಗ್ಗೆ ಎದ್ದ ತಕ್ಷಣ ಮಾಡುವ ಸಣ್ಣ ತಪ್ಪಿಂದಾಗಿ ಗಂಭೀರ ಕಾಯಿಲೆಗಳು ಎದುರಿಸಬೇಕಾಗುತ್ತಂತೆ!; ಅದು ಏನು ಗೊತ್ತೆ? | Morning

Morning : ನೀವು ಬೆಳ್ಳಿಗ್ಗೆ ಮತ್ತುಮ ರಾತ್ರಿ ಹಲ್ಲುಜ್ಜದೆ ಮಲಗಿದ್ರೆ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಎದುರಾಗಿತ್ತವೆ…