Coconut water : ದಿನದಿಂದ ದಿನಕ್ಕೆ ಬೇಸಿಗೆಯ ಬಿಸಿ ಹೆಚ್ಚುತ್ತಿದೆ. ಮನೆಯಿಂದ ಹೊರಬಂದರೆ ಸಾಕು ಸೂರ್ಯನ ಶಾಖವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಷ್ಟರ ಮಟ್ಟಿಗೆ ಸೂರ್ಯ ನಮ್ಮ ನೆತ್ತಿಯನ್ನು ಸುಡುತ್ತಿದ್ದಾನೆ. ಇದರಿಂದ ಜನರಿಗೆ ಸಿಕ್ಕಾಪಟ್ಟೆ ದಾಹವಾಗುತ್ತಿದ್ದು, ದೇಹವನ್ನು ತಂಪಾಗಿರಿಸಲು ಕೋಲ್ಡ್ ವಾಟರ್ ಮತ್ತು ಜ್ಯೂಸ್ ಮೊರೆ ಹೋಗುತ್ತಿದ್ದಾರೆ.
ಬೇಸಿಗೆಯಲ್ಲಿ ಕೋಲ್ಡ್ ವಾಟರ್, ಕೂಲ್ಡ್ರಿಂಕ್ಸ್ ಮತ್ತು ಜ್ಯೂಸ್ಗಳಿಗಿಂತ ಎಳನೀರು ಒಂದು ಉತ್ತಮವಾದ ಪಾನೀಯ. ಎಳನೀರನ್ನು ಇಷ್ಟಪಡದವರೇ ಇಲ್ಲ. ಎಳನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಚರ್ಮ ಒಣಗದಂತೆ ರಕ್ಷಿಸುತ್ತದೆ. ಎಳನೀರಿನಿಂದ ಮುಖ ತೊಳೆದರೆ ಕಾಂತಿಯುತವಾಗಿ ಕಾಣುತ್ತೀರಿ. ಈ ಎಲ್ಲ ಪ್ರಯೋಜನಗಳೊಂದಿಗೆ, ಎಳನೀರು ಕೆಲವು ಅನಾನುಕೂಲಗಳನ್ನು ಸಹ ಹೊಂದಿದೆ. ಕೆಲವರು ಎಳನೀರನ್ನು ಕುಡಿಯಲೇಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಎಳನೀರು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ವಿಶೇಷವಾಗಿ ತೂಕ ನಿಯಂತ್ರಣ ಹಾಗೂ ಹೊಟ್ಟೆಯ ಉರಿಯೂತವನ್ನು ಕಡಿಮೆ ಮಾಡುತ್ತದೆ. ಆದರೆ, ಎಳನೀರನ್ನು ಅತಿಯಾಗಿ ಸೇವಿಸಿದರೆ ಹಲವಾರು ನಷ್ಟಗಳನ್ನು ಸಹ ಎದುರಿಸಬೇಕಾಗುತ್ತದೆ. ಈ ತೆಂಗಿನ ನೀರು ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ, ಅತಿಯಾಗಿ ಕುಡಿಯುವುದರಿಂದ ಅಷ್ಟೇ ಅಡ್ಡ ಪರಿಣಾಮಗಳು ಕೂಡ ಉಂಟಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಪಾರ್ಶ್ವವಾಯು
ಎಳನೀರು ಸೋಡಿಯಂ, ಪೊಟ್ಯಾಸಿಯಮ್ ಮತ್ತು ಮ್ಯಾಂಗನೀಸ್‌ನಂತಹ ಎಲೆಕ್ಟ್ರೋಲೈಟ್‌ಗಳನ್ನು ಹೊಂದಿರುತ್ತದೆ. ಹಾಗಾಗಿ ತೆಂಗಿನ ನೀರನ್ನು ಮಿತವಾಗಿ ಸೇವಿಸುವುದು ದೇಹಕ್ಕೆ ತುಂಬಾ ಒಳ್ಳೆಯದು. ಆದರೆ, ಇದನ್ನು ಅತಿಯಾಗಿ ಸೇವಿಸಿದರೆ, ದೇಹದಲ್ಲಿ ಪೊಟಾಶಿಯಂ ಪ್ರಮಾಣ ಹೆಚ್ಚಾಗಿ ಪಾರ್ಶ್ವವಾಯು ಬರುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: IPL 2025: ಇಲ್ಲಿದೆ RCBಯ ಸಂಪೂರ್ಣ ವೇಳಾಪಟ್ಟಿ… ಪಂದ್ಯಗಳು, ದಿನಾಂಕ, ಸಮಯ, ಸ್ಥಳ, ಎದುರಾಳಿಗಳು
ಅತಿಸಾರ
ಎಳನೀರು ಮೊನೊಸ್ಯಾಚರೈಡ್ಸ್, ಆಲಿಗೋಸ್ಯಾಚರೈಡ್ಸ್ ಮತ್ತು ಪಾಲಿಯೋಲ್‌ಗಳನ್ನು ಹೊಂದಿರುತ್ತದೆ. ಇವು ಶಾರ್ಟ್ ಚೈನ್ ಕಾರ್ಬೋಹೈಡ್ರೇಟ್‌ಗಳಾಗಿವೆ. ದೇಹದಲ್ಲಿ ಈ ಅಂಶಗಳ ಪ್ರಮಾಣ ಹೆಚ್ಚಾದರೆ ಅವು ದೇಹದಿಂದ ನೀರನ್ನು ಹೀರಿಕೊಳ್ಳಲು ಪ್ರಾರಂಭಿಸುತ್ತವೆ. ಇದರಿಂದಾಗಿ ಅತಿಸಾರ, ವಾಂತಿ, ಗ್ಯಾಸ್, ಅಸಿಡಿಟಿಯಂತಹ ಸಮಸ್ಯೆಗಳು ಉದ್ಭವಿಸುತ್ತವೆ. ಹಾಗಾಗಿ ತೆಂಗಿನ ನೀರನ್ನು ಪ್ರತಿದಿನ ಕುಡಿಯುವುದನ್ನು ನಿಲ್ಲಿಸಿ ಮತ್ತು ಸಾಂದರ್ಭಿಕವಾಗಿ ಮಾತ್ರ ಸೇವಿಸಿ.
ಬಿಪಿ ಕಡಿಮೆಯಾಗಬಹುದು
ಎಳನೀರಿನಲ್ಲಿ ಹೆಚ್ಚಿನ ಪೊಟ್ಯಾಸಿಯಂ ಅಂಶ ಇರುವ ಕಾರಣ, ಇದನ್ನು ಹೆಚ್ಚು ಕುಡಿಯುವುದರಿಂದ ಬಿಪಿ ಕಡಿಮೆಯಾಗುತ್ತದೆ. ಇದರಿಂದ ಜೀವಕ್ಕೆ ಅಪಾಯ ಉಂಟಾಗಬಹುದು.
ಯಾರು ಕುಡಿಯಬಾರದು?
ಮಧುಮೇಹ ಇರುವವರು ಹೆಚ್ಚು ತೆಂಗಿನ ನೀರನ್ನು ಕುಡಿಯಬಾರದು. ಇದು ಸಕ್ಕರೆ ಮತ್ತು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದರಿಂದಾಗಿ ದೇಹದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ಇದು ಕೃತಕ ಸಿಹಿ ಸಂಯುಕ್ತಗಳನ್ನು ಹೊಂದಿರದಿದ್ದರೂ, ತೆಂಗಿನ ನೀರಿನಲ್ಲಿ ಹೆಚ್ಚಿನ ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್ಗಳು ಇವೆ. ಹೀಗಾಗಿ ಸಕ್ಕರೆ ಕಾಯಿಲೆ ಇರುವವರಿಗೆ ಇದು ಸಮಸ್ಯೆಯಾಗಬಹುದು. ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿದ್ದರೆ ಎಳನೀರನ್ನು ಮಿತವಾಗಿ ಸೇವಿಸಬೇಕು. ಹಾಗೆಯೇ ರಕ್ತದೊತ್ತಡಕ್ಕೆ ಸಂಬಂಧಿಸಿದ ಔಷಧಗಳನ್ನು ಸೇವಿಸುತ್ತಿದ್ದರೆ ಆದಷ್ಟು ತೆಂಗಿನ ನೀರನ್ನು ತಪ್ಪಿಸುವುದು ಒಳ್ಳೆಯದು. ಸಕ್ಕರೆ ಕಾಯಿಲೆ ಇರುವವರು ಎಳನೀರನ್ನು ಕುಡಿಯಲು ಬಯಸಿದ್ದಲ್ಲಿ ತಮ್ಮ ವೈದ್ಯರನ್ನು ಸಂಪರ್ಕಿಸಬೇಕು.
ಗಮನಿಸಿ: ಈ ಲೇಖನವು ಕೇವಲ ಮಾಹಿತಿಗಾಗಿ ಮಾತ್ರ. ನಿಮ್ಮ ವೈಯಕ್ತಿಕ ಆರೋಗ್ಯ ವೃತ್ತಿಪರರ ಸಲಹೆ ಮತ್ತು ಸೂಚನೆಗಳನ್ನು ಅನುಸರಿಸುವುದು ಉತ್ತಮ. (ಏಜೆನ್ಸೀಸ್)
ಗೋಲ್ಡ್ ರನ್ಯಾ ಜಾಲಕ್ಕೆ ಪ್ರಭಾವಿಗಳದ್ದೇ ಶ್ರೀರಕ್ಷೆ; ಪೊಲೀಸ್, ಕಸ್ಟಮ್ಸ್ ಅಧಿಕಾರಿಗಳೂ ಭಾಗಿ ಶಂಕೆ
ಟೀಮ್ ಇಂಡಿಯಾ ಆಡಲಿಲ್ಲ ಅಂದ್ರೆ ಬರೋಬ್ಬರಿ 45 ಕೋಟಿ ರೂ. ನಷ್ಟ: ವಿಶ್ವ ಕ್ರಿಕೆಟ್ಗೆ ಭಾರತವೇ ಕಿಂಗ್! Team India