IPL 2025: ಇಲ್ಲಿದೆ RCBಯ ಸಂಪೂರ್ಣ ವೇಳಾಪಟ್ಟಿ... ಪಂದ್ಯಗಳು, ದಿನಾಂಕ, ಸಮಯ, ಸ್ಥಳ, ಎದುರಾಳಿಗಳು

RCB
Published on

RCB : ಕಳೆದ 17 ಸೀಸನ್‌ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ. ಪ್ರತಿ ಸೀಸನ್‌ಗೂ ಮೊದಲು ಈ ಬಾರಿ ಕಪ್ ನಮ್ಮದೇ ಎಂದು ಹೇಳುವುದು ಆರ್​ಸಿಬಿಗೆ ಅಭ್ಯಾಸವಾಗಿಬಿಟ್ಟಿದೆ. ಆದರೆ, ಅದು ಈ ಬಾರಿಯಾದರೂ ನನಸಾಗುತ್ತಾ ಎಂದು ಕಾದು ನೋಡಬೇಕಿದೆ.

2025ರ ಐಪಿಎಲ್ ಸೀಸನ್‌ಗೂ ಮೊದಲು ಆಯೋಜಿಸಲಾದ ಮೆಗಾ ಹರಾಜಿನಲ್ಲಿ RCB ತಮಗೆ ಬೇಕಾದ ಆಟಗಾರರನ್ನು ಖರೀದಿಸಿದೆ. ಮಾರ್ಚ್ 22ರಿಂದ ಪ್ರಾರಂಭವಾಗುವ ಐಪಿಎಲ್‌ನ 18ನೇ ಸೀಸನ್​ನಲ್ಲಿ ಬಹುನಿರೀಕ್ಷಿತ ಐಪಿಎಲ್ ಟ್ರೋಫಿಯನ್ನು ಗೆಲ್ಲಲು ತಂಡವು ತನ್ನ ಆಟಗಾರರು ಮತ್ತು ಅಭಿಮಾನಿಗಳೊಂದಿಗೆ ಉತ್ಸುಕವಾಗಿದೆ. ಆರ್‌ಸಿಬಿ ಮಾರ್ಚ್ 22ರಂದು ಹಾಲಿ ಚಾಂಪಿಯನ್​ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.‘

ಈ ಪಂದ್ಯ ಕೋಲ್ಕತ್ತದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದ್ದು, ಈ ಸೀಸನ್​ನಲ್ಲಿ ಆರ್‌ಸಿಬಿ ತಂಡ ರಜತ್ ಪಾಟಿದಾರ್ ನಾಯಕತ್ವದಲ್ಲಿ ಕಣಕ್ಕೆ ಇಳಿಯಲಿದೆ.

2025ರ ಐಪಿಎಲ್‌ನಲ್ಲಿ ಆರ್‌ಸಿಬಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ...

* ಮಾರ್ಚ್ 22 - ಕೋಲ್ಕತ್ತ ನೈಟ್ ರೈಡರ್ಸ್ - ಈಡನ್ ಗಾರ್ಡನ್ಸ್ - 7:30 PM

* ಮಾರ್ಚ್ 28 - ಚೆನ್ನೈ ಸೂಪರ್ ಕಿಂಗ್ಸ್ - ಚಿದಂಬರಂ ಸ್ಟೇಡಿಯಂ - 7:30 PM

* ಏಪ್ರಿಲ್ 2 - ಗುಜರಾತ್ ಟೈಟಾನ್ಸ್ - ಚಿನ್ನಸ್ವಾಮಿ ಸ್ಟೇಡಿಯಂ - 7:30 PM

* ಏಪ್ರಿಲ್ 7 - ಮುಂಬೈ ಇಂಡಿಯನ್ಸ್ - ವಾಂಖೆಡೆ ಸ್ಟೇಡಿಯಂ - 7:30 PM

* ಏಪ್ರಿಲ್ 10 - ಡೆಲ್ಲಿ ಕ್ಯಾಪಿಟಲ್ಸ್ - ಚಿನ್ನಸ್ವಾಮಿ ಸ್ಟೇಡಿಯಂ - 7:30 PM

* ಏಪ್ರಿಲ್ 13 - ರಾಜಸ್ಥಾನ ರಾಯಲ್ಸ್ - ಸವಾಯಿ ಮಾನ್ ಸಿಂಗ್ ಸ್ಟೇಡಿಯಂ - 7:30 PM

* ಏಪ್ರಿಲ್ 18 - ಪಂಜಾಬ್ ಕಿಂಗ್ಸ್ - ಚಿನ್ನಸ್ವಾಮಿ ಕ್ರೀಡಾಂಗಣ - ರಾತ್ರಿ 7.30

* ಏಪ್ರಿಲ್ 20 - ಪಂಜಾಬ್ ಕಿಂಗ್ಸ್ ವಿರುದ್ಧ - ಮಹಾರಾಜ ಯಾದವಿಂದರ್ ಸಿಂಗ್ ಸ್ಟೇಡಿಯಂ - ರಾತ್ರಿ 7.30

* ಏಪ್ರಿಲ್ 24 - ರಾಜಸ್ಥಾನ ರಾಯಲ್ಸ್ - ಚಿನ್ನಸ್ವಾಮಿ ಸ್ಟೇಡಿಯಂ - 7:30 PM

* ಏಪ್ರಿಲ್ 27 - ಡೆಲ್ಲಿ ಕ್ಯಾಪಿಟಲ್ಸ್ - ಅರುಣ್ ಜೇಟ್ಲಿ ಸ್ಟೇಡಿಯಂ - 7:30 PM

* ಮೇ 3 - ಚೆನ್ನೈ ಸೂಪರ್ ಕಿಂಗ್ಸ್ - ಚಿನ್ನಸ್ವಾಮಿ ಸ್ಟೇಡಿಯಂ - 7:30 PM

* ಮೇ 9 - ಲಕ್ನೋ ಸೂಪರ್ ಜೈಂಟ್ಸ್ - ಏಕನಾ ಸ್ಟೇಡಿಯಂ - 7:30 PM

* ಮೇ 13 - ಸನ್‌ರೈಸರ್ಸ್ ಹೈದರಾಬಾದ್ - ಚಿನ್ನಸ್ವಾಮಿ ಕ್ರೀಡಾಂಗಣ - ಸಂಜೆ 7:30

* ಮೇ 17 - ಕೋಲ್ಕತ್ತಾ ನೈಟ್ ರೈಡರ್ಸ್ - ಚಿನ್ನಸ್ವಾಮಿ ಸ್ಟೇಡಿಯಂ - 7:30 PM

ಸಂಪೂರ್ಣ ಆರ್​ಸಿಬಿ ತಂಡ

ಜೋಶ್​ ಹ್ಯಾಸಲ್​ವುಡ್​ (12.50 ಕೋಟಿ), ಫಿಲ್​ ಸಾಲ್ಟ್​ (11.50 ಕೋಟಿ), ಜಿತೇಶ್​ ಶರ್ಮ (11 ಕೋಟಿ), ಲಿಯಾಮ್​ ಲಿವಿಂಗ್​ಸ್ಟೋನ್​ (8.75 ಕೋಟಿ), ರಸಿಕ್​ ಸಲಾಂ (6 ಕೋಟಿ), ಸುಯಶ್​ ಶರ್ಮ (2.60 ಕೋಟಿ). ಭುವನೇಶ್ವರ್​ ಕುಮಾರ್​ (10.75 ಕೋಟಿ), ಕೃನಾಲ್​ ಪಾಂಡ್ಯ (5.75 ಕೋಟಿ), ಟಿಮ್​ ಡೇವಿಡ್​ (3 ಕೋಟಿ), ಜೇಕಬ್​ ಬೆಥೆಲ್​ (2.60 ಕೋಟಿ), ದೇವದತ್​ ಪಡಿಕ್ಕಲ್​ (2 ಕೋಟಿ), ನುವಾನ್​ ತುಷಾರ (1.60 ಕೋಟಿ), ರೊಮಾರಿಯೊ ಶೆರ್ಡ್​ (1.50 ಕೋಟಿ), ಸ್ವಪ್ನಿಲ್​ ಸಿಂಗ್​ (50 ಲಕ್ಷ), ಮನೋಜ್​ ಭಾಂಡಗೆ (30 ಲಕ್ಷ), ಸ್ವಸ್ತಿಕ್​ ಚಿಕರ (30 ಲಕ್ಷ), ಮೋಹಿತ್​ ರಾಥೀ (30 ಲಕ್ಷ), ಅಭಿನಂದನ್​ ಸಿಂಗ್​ (30 ಲಕ್ಷ), ಲುಂಗಿ ಎನ್​ಗಿಡಿ (1 ಕೋಟಿ).

ಆರ್​ಸಿಬಿ ತಂಡ ಸಂಯೋಜನೆ – IPL 2025

* ಬ್ಯಾಟರ್​ಗಳು: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರಾ.

* ವಿಕೆಟ್​ ಕೀಪರ್ಸ್​: ಫಿಲ್​ ಸಾಲ್ಟ್​ ಮತ್ತು ಜಿತೇಶ್​ ಶರ್ಮ

* ಆಲ್​ರೌಂಡರ್ಸ್​ : ಲಿಯಾಮ್ ಲಿವಿಂಗ್‌ಸ್ಟೋನ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಮನೋಜ್ ಭಾಂಡಗೆ ಹಾಗೂ ಜಾಕೋಬ್ ಬೆಥೆಲ್.

* ಫಾಸ್ಟ್​ ಬೌಲರ್ಸ್​: ಜೋಶ್ ಹ್ಯಾಸಲ್‌ವುಡ್, ರಸಿಖ್ ದಾರ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಯಶ್ ದಯಾಳ್, ಲುಂಗಿ ಎನ್‌ಗಿಡಿ ಹಾಗೂ ಅಭಿನಂದನ್ ಸಿಂಗ್.

* ಸ್ಪಿನ್ನರ್‌ಗಳು: ಸುಯಶ್ ಶರ್ಮಾ ಹಾಗೂ ಮೋಹಿತ್ ರಾಥಿ.

ಆರ್​ಸಿಬಿ ಆಡುವ ಹನ್ನೊಂದರ ಬಳಗ (ಅಂದಾಜು)

ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಲಿಯಾಮ್ ಲಿವಿಂಗ್‌ಸ್ಟೋನ್, ದೇವದತ್ ಪಡಿಕ್ಕಲ್, ಟಿಮ್ ಡೇವಿಡ್, ರಜತ್ ಪಾಟಿದಾರ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ಜೋಶ್ ಹ್ಯಾಸ್​ಲ್‌ವುಡ್ ಹಾಗೂ ಸುಯಾಶ್ ಶರ್ಮಾ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net