ಸಚಿನ್​ ನಿವೃತ್ತಿ ಬಳಿಕ ಐಪಿಎಲ್​ ನೋಡುವುದನ್ನೇ ನಿಲ್ಲಿಸಿದ್ದಾರೆ ಈ ಮಹಿಳಾ ಕ್ರಿಕೆಟರ್..!

susham verma and sachin for web
Published on

ಬೆಂಗಳೂರು: ದಿಗ್ಗಜ ಸಚಿನ್​ ತೆಂಡುಲ್ಕರ್​, ಕೋಟ್ಯಂತರ ಕ್ರಿಕೆಟ್​ ಪ್ರೇಮಿಗಳ ಆರಾಧ್ಯ ದೈವ. 24 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಿಂಚಿದ ಈ ಮುಂಬೈ ಆಟಗಾರ 2013ರ ನವೆಂಬರ್​ನಲ್ಲಿ ನಿವೃತ್ತಿ ಘೋಷಿಸಿದರು. ಅದೇ ವರ್ಷವೂ ಐಪಿಎಲ್​ಗೂ ಸಚಿನ್​ ನಿವೃತ್ತಿ ಹೇಳಿದ್ದರು. ಸಚಿನ್​ ಐಪಿಎಲ್​ಗೆ ನಿವೃತ್ತಿ ಹೇಳಿದ್ದೇ ತಡ ಇಲ್ಲೊಬ್ಬ ಆಟಗಾರ್ತಿ ಲೀಗ್​ ವೀಕ್ಷಿಸುವುದನ್ನೇ ನಿಲ್ಲಿಸಿದ್ದಾರಂತೆ. ಸಚಿನ್​ ಇದ್ದಾಗ ನೋಡುತ್ತಿದ್ದ ಐಪಿಎಲ್​ಗೂ ಈಗಿನ ಲೀಗ್​ಗೂ ವ್ಯತ್ಯಾಸವಿದೆ. ಹೀಗಾಗಿ ಹೆಚ್ಚಾಗಿ ಐಪಿಎಲ್​ ಫಾಲೋ ಮಾಡುವುದನ್ನು ಬಿಟ್ಟಿದ್ದೇನೆ ಎಂದು ಹೇಳುತ್ತಾರೆ ಭಾರತ ಮಹಿಳಾ ತಂಡದ ವಿಕೆಟ್​ ಕೀಪರ್​ ಸುಷ್ಮಾ ವರ್ಮ.

ಸಚಿನ್​ ತೆಂಡುಲ್ಕರ್​ಗೆ ಅಭಿಮಾನಿಗಳಿಗೇನು ಕಮ್ಮಿಯಿಲ್ಲ. ಆದರೆ, ಸುಷ್ಮಾ ವರ್ಮ ಮಾತ್ರ ಎಲ್ಲರಿಗಿಂತ ವಿಭಿನ್ನ. ಏಕೆಂದರೆ ಸಚಿನ್​ ಕ್ರಿಕೆಟ್​ನಿಂದ ಹಿಂದೆ ಸರಿದಿದ್ದೆ ತಡ ಈಕೆ ಕೂಡ ಐಪಿಎಲ್​ನಿಂದ ವಿಮುಖರಾಗಿದ್ದಾರೆ. ಸ್ವತಃ ಅಂತಾರಾಷ್ಟ್ರೀಯ ಮಟ್ಟದ ಆಟಗಾರ್ತಿಯಾಗಿದ್ದರೂ ಸುಷ್ಮಾ ಮಾತ್ರ ಸಚಿನ್​ ಇಲ್ಲದಿರುವುದರಿಂದ ಐಪಿಎಲ್​ನಿಂದ ದೂರ ಉಳಿದಿರುವುದಾಗಿ ಹೇಳಿಕೊಂಡಿದ್ದಾರೆ. ನಾನು ಸಚಿನ್​ ಅವರ ಅಪ್ಪಟ ಅಭಿಮಾನಿ, ಒಮ್ಮೆ ಮುಂಬೈ ಇಂಡಿಯನ್ಸ್​ ತಂಡ ಧರ್ಮಶಾಲಾಗೆ ಐಪಿಎಲ್​ ಪಂದ್ಯವಾಡಲು ಆಗಮಿಸಿತ್ತು. ನಾನು ಸಚಿನ್​ ಅವರನ್ನು ನೋಡುವ ಕಾತರದಿಂದ ಪಂದ್ಯ ವೀಕ್ಷಿಸಲು ಹೋಗಿದ್ದೆ. ಆದರೆ, ಸಚಿನ್​ ಆ ಪಂದ್ಯದಲ್ಲಿ ಇರಲಿಲ್ಲ. ಅಂದಿನಿಂದ ಐಪಿಎಲ್​ ನೋಡುವುದನ್ನು ಬಿಡಬೇಕೆಂದು ತೀರ್ಮಾನಿಸಿದೆ ಎಂದು 27 ವರ್ಷದ ಸುಷ್ಮಾ ಹೇಳಿಕೊಂಡಿದ್ದಾರೆ.

ಹಿಮಾಚಲ ಪ್ರದೇಶದ ಧರ್ಮಶಾಲಾದವರಾದ ಸುಷ್ಮಾ ವರ್ಮ, 2013ರಿಂದ ರಾಷ್ಟ್ರೀಯ ತಂಡದ ಭಾಗವಾಗಿದ್ದಾರೆ. ಇದುವರೆಗೂ 1 ಟೆಸ್ಟ್​, 38 ಏಕದಿನ ಹಾಗೂ 19 ಟಿ20 ಪಂದ್ಯಗಳನ್ನಾಡಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net