

ಸೌಥಾಂಪ್ಟನ್: ಪಾಕಿಸ್ತಾನ ಕ್ರಿಕೆಟಿಗರಿಗೂ ಟ್ರೋಲ್ಗೂ ಅವಿನಾಭಾವ ಸಂಬಂಧ. ಅದು ಮೈದಾನದ ಒಳಗೆ ಇರಲಿ..ಹೊರಗೆ ಇರಲಿ ಏನಾದರೂ ಒಂದು ವಿಷಯದಲ್ಲಿ ಯಡವಟ್ಟು ಮಾಡಿಕೊಂಡು ಟ್ರೋಲ್ ಆಗುವ ಮೂಲಕ ಸಾಮಾಜಿಕ ಜಾಲತಾಣಗಳಿಗೆ ಆಹಾರವಾಗುತ್ತಾರೆ. ಸೌಥಾಂಪ್ಟನ್ನಲ್ಲಿ ನಡೆಯುತ್ತಿರುವ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ 4ನೇ ದಿನದಾಟದ ವೇಳೆ ಪಾಕಿಸ್ತಾನದ ಇಮಾಮ್ ಉಲ್ ಹಕ್ ಡಗ್ಔಟ್ನಲ್ಲಿ ಕುಂತಲ್ಲಿಯೇ ಚೇರ್ ಮೇಲಿಂದ ಬೀಳುವ ಮೂಲಕ ಟ್ರೋಲ್ ಆಗಿದ್ದಾರೆ. ಈ ವಿಡಿಯೋದಲ್ಲಿ ರೆಕಾರ್ಡ್ ಆಗಿದ್ದು ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ..
ಫಾಲೋಆನ್ ಅನುಭವಿಸಿರುವ ಪಾಕಿಸ್ತಾನ ತಂಡ ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಹೋರಾಡುತ್ತಿದ್ದರೆ, ಈತ್ತ ಮೈದಾನದಲ್ಲಿ ಹೊರಗೆ ತುಳಿತಿದ್ದ ಇಮಾಮ್ ಚೇರ್ನಿಂದ ಕುಸಿದು ಬಿದ್ದು ಸುದ್ದಿಯಾಗಿದ್ದಾರೆ. ಸಹ-ಆಟಗಾರರೊಂದಿಗೆ ಪೆವಿಲಿಯನ್ ಬದಲಿಗೆ ಡಗ್ಔಟ್ನಲ್ಲಿ ಕುಳಿತಿದ್ದ ಇಮಾಮ್, ದಿಢೀರ್ ಅನೇ ಚೇರ್ ಸಮೇತ ಕಳಗೆ ಬಿದ್ದಿದ್ದಾರೆ. ಈ ವೇಳೆ ಮಾಜಿ ನಾಯಕ ಸಫ್ರಾರ್ಜ್ ಅಹಮದ್ ಸೇರಿದಂತೆ ಕೆಲ ಆಟಗಾರರು ಇಮಾಮ್ ಅವರನ್ನು ನೋಡಿ ಮುಸಿ ಮುಸಿ ನಕ್ಕಿದ್ದಾರೆ. ಇದು ವಿಡಿಯೋದಲ್ಲಿ ಸೆರೆಯಾಗಿದೆ. ಬಳಿಕ ಎದ್ದು ಕುಂತಿರುವ ಇಮಾಮ್, ತಮ್ಮಷ್ಟಕ್ಕೆ ತಾವೇ ನಕ್ಕಿದ್ದಾರೆ.
ಇದನ್ನೂ ಓದಿ: ವಾರಾಂತ್ಯದೊಳಗೆ ಐಪಿಎಲ್ ವೇಳಾಪಟ್ಟಿ ಪ್ರಕಟ ನಿರೀಕ್ಷೆ
ಈಗಾಗಲೇ 3 ಪಂದ್ಯಗಳ ಸರಣಿಯಲ್ಲಿ 0-1 ರಿಂದ ಹಿನ್ನಡೆ ಅನುಭವಿಸಿರುವ ಪಾಕಿಸ್ತಾನ ತಂಡ 3ನೇ ಟೆಸ್ಟ್ ಪಂದ್ಯದಲ್ಲೂ ಸೋಲಿನಂಚಿನಲ್ಲಿದೆ. ಇಂಗ್ಲೆಂಡ್ ಮೊದಲ ಇನಿಂಗ್ಸ್ 8 ವಿಕೆಟ್ಗೆ 583 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದ್ದಾರೆ. ಪಾಕಿಸ್ತಾನ 273 ರನ್ಗಳಿಗೆ ಸರ್ವಪತನ ಕಂಡಿತು. ಇದರಿಂದ ಫಾಲೋಅನ್ ಅನುಭವಿಸಿರುವ ಪಾಕಿಸ್ತಾನ 2ನೇ ಸರದಿ ಬ್ಯಾಟಿಂಗ್ ಆರಂಭಿಸಿದ್ದು, 2 ವಿಕೆಟ್ಗೆ 100 ರನ್ ಕಲೆಹಾಕಿದೆ. ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಇನ್ನು 210 ರನ್ ಕಲೆಹಾಕಬೇಕಿತ್ತು. ಮಂಗಳವಾರ ಕಡೇ ದಿನದಾಟವಾಗಿದೆ.