18 ವರ್ಷಗಳ ಹಿಂದೆ ಪತಿ ಬರೆದಿದ್ದ ಲವ್‌ಲೆಟರ್‌ ಶೇರ್‌ ಮಾಡಿದ ಮಹಿಳೆ; ಪತ್ರದಲ್ಲಿ ಏನಿದೆ?

love later
Published on

ನವದೆಹಲಿ: ಮೊಬೈಲ್ ಫೋನ್‌ಗಳು ಜನಪ್ರಿಯವಾಗುವ ಮೊದಲು, ಜನರು ತಮ್ಮ ಪ್ರೀತಿಯನ್ನು ಪ್ರತಿಪಾದಿಸಲು ಪ್ರೇಮಪತ್ರಗಳನ್ನು ಬರೆಯುತ್ತಿದ್ದರು. 18 ವರ್ಷಗಳ ಹಿಂದೆ ಪತಿ ಬರೆದಿದ್ದ ಲವ್‌ಲೆಟರ್‌ನ್ನು ಮಹಿಳೆಯೊಬ್ಬರು ಸೋಶಿಯಲ್​​ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.

ವ್ಯಕ್ತಿಯೊಬ್ಬರು ತನ್ನ ಗರ್ಲ್‌ಫ್ರೆಂಡ್‌ಗೆ ಕಾಲೇಜಿನಲ್ಲಿ ಪದವಿ ಓದುತ್ತಿದ್ದ ವೇಳೆ ಈ ಪ್ರೇಮ ಪತ್ರಗಳನ್ನು ಬರೆದಿದ್ದಾರೆ. ಇದೀಗ, 18 ವರ್ಷಗಳ ಬಳಿಕ ಆತನ ಲೇಡಿ ಲವ್‌ಗೆ ಈ ಪ್ರೇಮ ಪತ್ರಗಳು ಸಿಕ್ಕಿದ್ದು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ಮನೆಯಲ್ಲಿದ್ದ ಹಳೆಯ ವಸ್ತುಗಳನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ ನನಗೆ ಅಯ್ಯರ್‌ 18 ವರ್ಷಗಳ ಹಿಂದೆ ಬರೆದ ಈ ಕೈಬರಹದ ಪ್ರೇಮ ಪತ್ರಗಳು ಸಿಕ್ಕಿವೆ. ಆದರೆ ತಮ್ಮ ಗರ್ಲ್‌ಫ್ರೆಂಡ್‌ಗೆ ಲ್ಯಾಬ್‌ ಪ್ರಯೋಗಗಳನ್ನು ಯಾರು ಕಳುಹಿಸುತ್ತಾರೆ. ಆದರೆ ನಾನು ಖುಷಿಗೊಂಡು ಆ ವ್ಯಕ್ತಿಗೆ ಯೆಸ್ ಎಂದಿದ್ದೆ' ಎಂದು ಟ್ವಿಟರ್‌ ಬಳಕೆದಾರರಾದ ಸಾಯಿಸ್ವರೂಪಾ ಮೈಕ್ರೋ ಬ್ಲಾಗಿಂಗ್ ತಾಣದಲ್ಲಿ ಹೇಳಿಕೊಂಡಿದ್ದಾರೆ.

ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾದ ಸಾಯಿಸ್ವರೂಪ ಅವರು ತಮ್ಮ ಪತಿಯಿಂದ ಸ್ವೀಕರಿಸಿದ ಪತ್ರದ ಫೋಟೋವನ್ನು ಹಂಚಿಕೊಂಡಿದ್ದಾರೆ. ಅವರನ್ನು ಶ್ರೀ ಅಯ್ಯರ್ ಎಂದು ಉಲ್ಲೇಖಿಸಿದ್ದಾರೆ.

ಪತ್ರದಲ್ಲಿ,25 ಕೆಜಿ ತೂಕದ ಟ್ರಕ್ ಬ್ಯಾಟರಿಯನ್ನು ಎತ್ತುವ ಸಂದರ್ಭದಲ್ಲಿ ತನ್ನ ಬೆನ್ನು ಉಳುಕಾಯಿತು. ನಂತರ ಅವನು ಅವಳಿಗೆ ಪ್ರಯೋಗವನ್ನು ವಿವರಿಸಲು ಕಷ್ಟಪಟ್ಟು ರೇಖಾಚಿತ್ರವನ್ನು ರಚಿಸಿದರು. ಈ ವಿಶಿಷ್ಟ ಪ್ರೇಮಪತ್ರಕ್ಕೆ ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. 'ಪ್ರೇಮ ಪತ್ರವು ಸುಂದರವಾಗಿದೆ, ಆದರೆ ಪತ್ರವ್ಯವಹಾರವು ಇಂಗ್ಲಿಷ್‌ನಲ್ಲಿದೆ ಮತ್ತು ನಿಮ್ಮ ಸ್ಥಳೀಯ ಭಾಷೆಯಲ್ಲ ಎಂಬುದು ಆಶ್ಚರ್ಯಕರವಾಗಿದೆ' ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಸಾಯಿಸ್ವರೂಪ ಬಳಕೆದಾರರಿಗೆ ಉತ್ತರಿಸುತ್ತಾ, 'ನಾನು ತೆಲುಗು ಮತ್ತು ಅವನು ತಮಿಳು ಭಾಷೆಯವನು. ಹೀಗಾಗಿ ಲವ್ ಲೆಟರ್ ಇಂಗ್ಲಿಷ್‌ನಲ್ಲಿದೆ' ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net