30 ಸಾವಿರ ರೂ. ಲಂಚ ಕೇಳಿದ ಪೊಲೀಸರು..ಟವೆಲ್‌ ಕಟ್ಟಿಕೊಂಡು ಠಾಣೆಗೆ ಬಂದ ತಂದೆ!

Chhattisgarh Man
Published on

ಛತ್ತೀಸ್‌ಗಢ: ಕೆಲವೊಮ್ಮೆ ವಿಚಿತ್ರ ಘಟನೆಗಳು ನಮ್ಮ ಸುತ್ತಮುತ್ತ ನಡೆಯುತ್ತಿರುತ್ತವೆ. ಹೆತ್ತವರಿಗೆ ಮಕ್ಕಳು ಮುದ್ದು ಎನ್ನುವುದು ಗೊತ್ತಿರುವ ವಿಚಾರವಾಗಿದೆ. ವ್ಯಕ್ತಿಯೊಬ್ಬ ತನ್ನ ಮಗನಿಗಾಗಿ ಟವೆಲ್​​ ಕಟ್ಟಿಕೊಂಡು ಬೀದಿಗೆ ಇಳಿದಿರುವ ಘಟನೆ ಕೊರ್ಬಾದಲ್ಲಿ ನಡೆದಿದೆ.

ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಪೊಲೀಸರು ಮಗ ವಶಕ್ಕೆ ಪಡೆದಿದ್ದಾರೆ, ಆತನನ್ನು ಬಿಡುಗಡೆ ಮಾಡಲು 30 ಸಾವಿರ ರೂಪಾಯಿ ಲಂಚ ಕೇಳುತ್ತಿದ್ದಾರೆ. ಕೊರ್ಬಾದಲ್ಲಿ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ಬಂದಿದ್ದಾರೆ.

ರಾಜ್ ಕುಮಾರ್ ನೇತಮ್ ಎಂಬವರು ಟವೆಲ್‌ನಲ್ಲಿ ಪೊಲೀಸ್ ಠಾಣೆಗೆ ತಲುಪಿ ತನ್ನ ಕಾರನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ ತನ್ನ ಮಗನನ್ನು ಬಿಡುಗಡೆ ಮಾಡುವಂತೆ ಪೊಲೀಸರಿಗೆ ಒತ್ತಾಯಿಸಿ ಗದ್ದಲ ಸೃಷ್ಟಿಸಿದ್ದಾರೆ. ಇದೆಲ್ಲದರ ನಡುವೆ ರಸ್ತೆಯಲ್ಲಿ ಜನ ಜಮಾಯಿಸಿದ್ದರು. ಅಧಿಕಾರಿಗಳು ಆ ವ್ಯಕ್ತಿಯನ್ನು ಮನವೊಲಿಸಿದ್ದಾರೆ.

ಹುಡುಗ ಅಪ್ರಾಪ್ತನಾಗಿದ್ದು, ಪೊಲೀಸರು ಆತನನ್ನು ಹೊಡೆಯುತ್ತಿದ್ದಾರೆ. ತಮ್ಮ ಮಗನನ್ನು ಬಿಡುಗಡೆ ಮಾಡಲು ಪೊಲೀಸ್ ಅಧಿಕಾರಿಗಳು 30,000 ರೂ. ಕೇಳಿದ್ದಾರೆ.ಆದಷ್ಟು ಬೇಗ ಹಣದ ವ್ಯವಸ್ಥೆ ಮಾಡಿ ಮಗ ವಾಪಸ್ ಬೇಕಾದರೆ ಠಾಣೆಗೆ ತರುವಂತೆ ಹೇಳಿರುವುದಾಗಿ ವ್ಯಕ್ತಿ ಹೇಳಿದ್ದಾರೆ. ಹಣ ಬರುವವರೆಗೂ ಮಗನನ್ನು ಥಳಿಸುತ್ತಲೇ ಇರುತ್ತೇನೆ ಎಂದು ದೂರವಾಣಿ ಕರೆ ಮಾಡಿ ಬೆದರಿಸಿದ್ದರು ಎಂದು ಆರೋಪಿಸಿದ್ದಾರೆ. ಈ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net