6 ಹೆಂಡ್ತಿಯರ ಮುದ್ದಿನ ಗಂಡನಿಗೆ ಮೊದಲ ಮಗುನಾ ಯಾವ ಪತ್ನಿಯಿಂದ ಪಡೆಯಬೇಕೆನ್ನುವ ಚಿಂತೆ!

Man With 6 Wives Says He Struggled To Decide Who Should He Conceive His First Baby With
Published on

ನವದೆಹಲಿ: ಆರು ಹೆಂಡತಿಯರನ್ನು ಹೊಂದಿರುವ ವ್ಯಕ್ತಿಯೊಬ್ಬರು ಪ್ರತಿಯೊಬ್ಬರೊಂದಿಗೂ ಮಗುವನ್ನು ಹೊಂದಲು ಯೋಜಿಸುತ್ತಿದ್ದಾರೆ. ಆದರೆ ಅವರು ತಮ್ಮ ಮೊದಲ ಮಗುವನ್ನು ಯಾರೊಂದಿಗೆ ಗರ್ಭಧರಿಸಬೇಕು ಎಂದು ನಿರ್ಧರಿಸಲು ಸಾಧ್ಯವಾಗದೇ ಮಾಸ್ಟರ್​​ ಪ್ಲ್ಯಾನ್​​ ಮಾಡಿದ್ದಾರೆ.

ಬ್ರೆಜಿಲ್‌ನ ಸಾವೊ ಪಾಲೊ ಮೂಲದ 37 ವರ್ಷದ ಆರ್ಥರ್ ಉರ್ಸೊ ಒಟ್ಟು ಒಂಬತ್ತು ಪತ್ನಿಯರನ್ನು ಹೊಂದಿದ್ದಾನೆ. ಈ ಪೈಕಿ ಮೂವರಿಗೆ ವಿಚ್ಛೇದನ ನೀಡಿದ್ದಾನೆ. ಅವರು ಈಗ ಲುವಾನಾ ಕಝಾಕಿ, 27, ಎಮೆಲ್ಲಿ ಸೌಜಾ, 21, ವಲ್ಕ್ವಿರಿಯಾ ಸ್ಯಾಂಟೋಸ್, 24, ಒಲಿಂಡಾ ಮರಿಯಾ, 51, ಡಾಮಿಯಾನಾ, 23, ಮತ್ತು ಅಮಂಡಾ ಅಲ್ಬುಕರ್ಕ್28 ಜೊತೆಗೆ ಸಂಸಾರ ನಡೆಸುತ್ತಿದ್ದಾರೆ. ಯಾರೊಂದಿಗೆ ಮೊದಲ ಮಗು ಮಾಡಿಕೊಳ್ಳುವುದು ಎಂಬುದೇ ಆರ್ಥರ್ ಉರ್ಸೊ ಚಿಂತೆಯಾಗಿದೆ.

'ನಾನು ನನ್ನ ಎಲ್ಲಾ ಹೆಂಡತಿಯರೊಂದಿಗೆ ಮಗುವನ್ನು ಹೊಂದಲು ಬಯಸುತ್ತಾನೆ, ಇದರಿಂದ ಅವರಲ್ಲಿ ಯಾರಿಗೂ ಅಸಮಾಧಾನ ಉಂಟಾಗುವುದಿಲ್ಲ. ನನ್ನ ಆರು ಹೆಂಡತಿಯರಲ್ಲಿ ಯಾರನ್ನು ಮೊದಲು ಗರ್ಭಿಣಿಯಾಗಬೇಕೆಂದು ಆಯ್ಕೆ ಮಾಡುವ ಮೂಲಕ ಅಸಮಾಧಾನಗೊಳ್ಳಲು ನಾನು ಬಯಸುವುದಿಲ್ಲ, ಆದ್ದರಿಂದ ನಾವು ಬಾಡಿಗೆ ತಾಯ್ತನವನ್ನು ಆರಿಸಿಕೊಂಡಿದ್ದೇವೆ ಆ ನನ್ನ ಮಗುವಿಗೆ ಇವರೆಲ್ಲ ತಾಯಿ ಆಗಿ ಇರಲಿದ್ದಾರೆ' ಎಂದು ಆರ್ಥರ್ ತಿಳಿಸಿದ್ದಾನೆ.

ಒಟ್ಟು ಒಂಭತ್ತು ಮಂದಿಯನ್ನು ಮದುವೆಯಾದ ವ್ಯಕ್ತಿಯೊಬ್ಬನಿಗೆ ಯಾರೊಂದಿಗೆ ಮೊದಲ ಮಗು ಮಾಡಿಕೊಳ್ಳುವುದು ಎಂಬುದೇ ಚಿಂತೆಯಾಗಿದೆ. ಹೀಗಾಗಿ ಅಂತಿಮವಾಗಿ ಬಾಡಿಗೆ ತಾಯ್ತನದ ಯೋಜನೆ ಮೂಲಕ ಎಲ್ಲರೊಂದಿಗೂ ಮೊದಲ ಮಗು ಪಡೆಯುವ ಸ್ಕೀಂ ರೂಪಿಸಿದ್ದಾನಂತೆ. ಈ ಮೂಲಕವಾಗಿ ಸೋಶಿಯಲ್​​ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net