ಎಂಗೇಜ್ಮೆಂಟ್ ಮುರಿದುಕೊಂಡ 92 ವರ್ಷದ ರುಪರ್ಟ್‌ ಮುರ್ಡೋಕ್ !

Murdoch
Published on

ಅಮೆರಿಕ: ಜಗತ್ತಿನ ಮಾಧ್ಯಮ ಲೋಕದ ದೊರೆ ರುಪರ್ಟ್‌ ಮುರ್ಡೋಕ್‌ ಶೀಘ್ರದಲ್ಲೇ 5ನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ನಡುವೆ ಅವರು ಸಿಂಗಲ್ ಆಗೇ ಉಳಿಯುವ ಸುದ್ದಿಯೊಂದು ಹಬ್ಬಿದೆ.

ಜಗತ್ತಿನ ಮಾಧ್ಯಮ ಲೋಕದ ದೊರೆ ರುಪರ್ಟ್‌ ಮುರ್ಡೋಕ್‌ ಮತ್ತೊಮ್ಮೆ ಮದುವೆಯಾಗಲು ಸಿದ್ಧರಾಗಿದ್ದಾರೆ. 92ನೇ ವಯಸ್ಸಿನ ರುಪರ್ಟ್‌ ಮುರ್ಡೋಕ್‌ ಪಾಲಿಗೆ ಇದು 5ನೇ ಮದುವೆಯಾಗಿತ್ತು. ಆದರೆ ಕಾರಣಾಂತರಗಳಿಂದಾಗಿ ಈ ಮದುವೆಯನ್ನು ಮುರಿದುಕೊಂಡಿದ್ದಾರೆ ಎನ್ನಲಾಗಿದೆ.

ಆಸ್ಟ್ರೇಲಿಯಾ ಮೂಲದ ಅಮೆರಿಕಾ ಮಾಧ್ಯಮ ಲೋಕದ ದಿಗ್ಗಜ 92 ವರ್ಷದ ರುಪರ್ಟ್ ಮುರ್ಡೋಕ್ ಅವರು 62 ವರ್ಷದ ಮಾಜಿ ನಿರೂಪಕಿ, ಮಾಜಿ ಮಾಡೆಲ್ ಆನ್ ಲೆಸ್ಲೆ ಸ್ಮಿತ್ ಅವರೊಂದಿಗಿನ ಸಂಬಂಧವನ್ನ ಮುರಿದುಕೊಂಡಿದ್ದಾರೆ. ಈ ಮೂಲಕ ಇಬ್ಬರ ಎಂಗೇಜ್ಮೆಂಟ್ ಮುರಿದುಬಿದ್ದಿದೆ. ಜಾತಿಯ ಕಾರಣದಿಂದಾಗಿ ನಿಶ್ಚಿತಾರ್ಥ ಮುರಿದುಬಿದ್ದಿದೆ ಎಂದು ತಿಳಿದುಬಂದಿದೆ.

ಮುರ್ಡೋಕ್ ತನ್ನ ನಾಲ್ಕನೇ ಪತ್ನಿ ಜೆರ್ರಿ ಹಾಲ್‌ಗೆ ವಿಚ್ಛೇದನ ನೀಡಿದ ತಿಂಗಳ ನಂತರ ಈ ಬೇಸಿಗೆಯಲ್ಲಿ ಮಾಜಿ ದಂತವೈದ್ಯೆಯನ್ನ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿತ್ತು. ಅವರು ಮಾಜಿ ಮಾಡೆಲ್ ಕೈ ಬೆರಳಿಗೆ ಡೈಮಂಡ್ ರಿಂಗ್ ತೊಡಿಸಿ ಪ್ರಪೋಸ್ ಮಾಡಿದ್ದರು. ನನಗೆ ಗೊತ್ತು ಇದು ನನ್ನ ಕೊನೆಯ ಪ್ರೀತಿ. ಬಹುಶಃ ಹಾಗೇ ಆದರೆ ಒಳ್ಳೆಯದು. ನನಗೆ ಬಹಳ ಖುಷಿಯಾಗಿದೆ' ಎಂದು ಮರ್ಡೋಕ್‌ ಈ ವೇಳೆ ಹೇಳಿದ್ದರು. ಇವರಿಬ್ಬರು ಅಧಿಕೃತವಾಗಿ ವಿವಾಹವಾದಲ್ಲಿ, ಮುರ್ಡೋಕ್‌ ಅವರ ಐದನೇ ಮದುವೆ ಇದಾಗಿರಲಿದೆ.

ಮಾಡಲ್‌ ಹಾಗೂ ನಟಿ ಜೆರ್ರಿ ಹಾಲ್‌ರನ್ನು ಮುರ್ಡೋಕ್‌ ಮದುವೆಯಾಗಿ ಆರು ವರ್ಷಗಳ ಕಾಲ ಜತೆಗಿದ್ದರು. ಹಾಲ್‌ಗೂ ಮುನ್ನ 1999 ರಿಂದ 2013ರವರೆಗೆ ವೆಂಡಿ ಡೆಂಗ್‌, 1967 ರಿಂದ 1999ರವರೆಗೆ ಅನ್ನಾ ಮರಿಯಾ ಟ್ರೋವ್‌, 1956 ರಿಂದ 1967ರವರೆಗೆ ಪ್ಯಾಟ್ರಿಕಾ ಬೂಕರ್‌ ಪತ್ನಿಯರಾಗಿ ಮುರ್ಡೋಕ್‌ ಬಾಳಿನಲ್ಲಿ ಬಂದಿದ್ದರು. ಆದರೆ ಈ ಮದುವೆಯೂ ಮುರಿದು ಬಿದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net