ಸೊಂಟದ ಸುತ್ತ ಹಣ ಕಟ್ಟಿಕೊಂಡು ಸಾಗಾಟ; 7.5ಲಕ್ಷ ರೂ. ವಶಕ್ಕೆ!

money
Published on

ದಾವಣಗೆರೆ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 7.5ಲಕ್ಷ ರೂ. ಹಣವನ್ನು ಹೊನ್ನಾಳಿ ನ್ಯಾಮತಿ ತಾಲೂಕಿನ ಜೀನಹಳ್ಳಿ ಚೆಕ್ ಪೊಸ್ಟ್​​ನಲ್ಲಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಬೈಕ್ ಮೇಲೆ ತೆರಳುತ್ತಿದ್ದವರುನ್ನು ಶಂಕೆಯಿಂದ ಚೆಕ್ ಪೊಸ್ಟ್​​ ಸಿಬ್ಬಂದಿ ತಪಾಸಣೆ ಮಾಡಿದ್ದಾರೆ. ಈ ವೇಳೆ ಸೊಂಟದ ಸುತ್ತ ಹಣ ಇಟ್ಟುಕೊಂಡು ಹೋಗುತ್ತಿದ್ದ ಇಬ್ಬರು ಸಿಕ್ಕಿ ಬಿದ್ದಿದ್ದಾರೆ. ತಪಾಸಣೆ ವೇಳೆ ಸೊಂಟದಲ್ಲಿ ಪತ್ತೆಯಾದ 7.5 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ.

ಸೈಫುಲ್ಲಾ ಮತ್ತು ಕುಮಾರ್ ಬೈಕ್ ಮೇಲೆ ತೆರಳುತ್ತಿದ್ದರು. ಈ ಇಬ್ಬರು ಶಿಕಾರಿಪುರ ಮೂಲದವರು ಎನ್ನಲಾಗಿದೆ. ಅಧಿಕಾರಿಗಳು ಹಣವನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದ್ದಾರೆ. ಆದರೆ ವಿಚಾರಣೆ ವೇಳೆ ಸರಿಯಾದ ಮಾಹಿತಿ ನೀಡದೇ ದಾವಣಗೆರೆಯಿಂದ ಬಂದಿದ್ದು, ಹೊನ್ನಾಳಿಯಿಂದ ಬಂದಿದ್ದು ಎಂದು ಗೊಂದಲ ಸೃಷ್ಟಿ ಮಾಡಿದ್ದಾರೆ. ನಿನ್ನೆ ತಡರಾತ್ರಿ 12 ಗಂಟೆ ಸರಿಸುಮಾರು ನಡೆದ ಘಟನೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ನ್ಯಾಮತಿ ತಾಲೂಕಿನ ಜೀನಹಳ್ಳಿ ಚೆಕ್ ಪೊಸ್ಟ್​​ನಲ್ಲಿ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net