ವರನ ಕೊಲೆಗೆ ಮಾಸ್ಟರ್​​ ಪ್ಲಾನ್​​; ಸ್ಫೋಟಕ ತುಂಬಿ ಗಿಫ್ಟ್‌ ಕೊಟ್ಟ ವಧುನ ಮಾಜಿ ಪ್ರೇಮಿ

Groom dies after brides ex lover gives explosive filled home theatre system as wedding gift
Published on

ಛತ್ತೀಸ್‌ಗಢ: ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಸಂಬಂಧ ಮುರಿದು ಬೀಳುತ್ತವೆ. ಇಲ್ಲೊಂದು ಮದುವೆಗೆ ಗಿಫ್ಟ್‌ ಕೊಟ್ಟ ಹೋಮ್ ಥಿಯೇಟರ್ ಬ್ಲಾಸ್ಟ್ ಆಗಿ ನವವಿವಾಹಿತ ಹಾಗೂ ಆತನ ಸಹೋದರ ಸೇರಿ ಇಬ್ಬರು ಸಾವನ್ನಪ್ಪಿರುವ ಪ್ರಕರಣಕ್ಕೆ ಇದೀಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ.

ವರ ಹೇಮೇಂದ್ರ ಮೇರಾವಿ (22) ಏಪ್ರಿಲ್ 1 ರಂದು ವಿವಾಹವಾಗಿದ್ದರು. ಸೋಮವಾರ ಹೇಮೇಂದ್ರ ಹಾಗೂ ಕುಟುಂಬದ ಇತರ ಸದಸ್ಯರು ತಮ್ಮ ಮನೆ ಕೋಣೆಯೊಳಗೆ ಮದುವೆಗೆ ಬಂದಿದ್ದ ಉಡುಗೊರೆಗಳನ್ನು ಬಿಚ್ಚುತ್ತಿದ್ದರು. ಉಡುಗೊರೆಗಳ ಪೈಕಿ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ ಎಲೆಕ್ಟ್ರಿಕ್ ಬೋರ್ಡ್‍ಗೆ ಜೋಡಿಸಿ ಬಳಿಕ ಅದನ್ನು ಆನ್ ಮಾಡಿದಾಗ ಭಾರೀ ಸ್ಫೋಟ ಉಂಟಾಗಿದೆ. ಈ ಸ್ಫೋಟದ ಪರಿಣಾಮ ಹೋಮ್ ಥಿಯೇಟರ್ ಸಿಸ್ಟಮ್ ಅನ್ನು ಇರಿಸಲಾಗಿದ್ದ ಕೋಣೆಯ ಮೇಲ್ಛಾವಣಿ ಹಾಗೂ ಗೋಡೆಗಳೇ ಕುಸಿದು  ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ.

ಬಂಧಿತನನ್ನು ಸರ್ಜು ಎಂದು ಗುರುತಿಸಲಾಗಿದ್ದು, ಈ ಘಟನೆ ಛತ್ತೀಸ್‌ಗಢದ ಕಬೀರ್ಧಾಮ್ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ಗಿಫ್ಟ್ ಕೊಟ್ಟವನನ್ನು ಬಂಧಿಸಿದ್ದು, ತನಿಖೆ ನಡೆಸಿದಾಗ ಅಚ್ಚರಿಯ ವಿಚಾರವೊಂದು ಬೆಳಕಿಗೆ ಬಂದಿದೆ.

ಸ್ಫೋಟಗೊಂಡ ಹೋಮ್ ಥಿಯೇಟರ್ ಅನ್ನು ವಧುವಿನ ಮಾಜಿ ಪ್ರಿಯತಮ ಉಡುಗೊರೆಯಾಗಿ ನೀಡಿರುವುದಾಗಿ ತನಿಖೆಯ ವೇಳೆ ಬಯಲಾಗಿದೆ. ವರನ ಕೊಲೆ ಮಾಡುವ ಉದ್ದೇಶದಿಂದ ಗಿಫ್ಟ್‌ ಆಗಿ ಕೊಟ್ಟಿರುವುದಾಗಿ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ವಧು ತನ್ನನ್ನು ಬಿಟ್ಟು ಬೇರೆ ಮದುವೆಯಾಗಿರುವುದರ ಮೇಲಿನ ಸಿಟ್ಟಿನಿಂದ ಈ ಐಡಿಯಾ ಮಾಡಿರುವುದಾಗಿ ಹೇಳಿದ್ದಾನೆ. ಹೋಮ್ ಥಿಯೇಟರ್ ಒಳಗಡೆ ಸ್ಫೋಟಕಗಳನ್ನು ಇಟ್ಟು ಯಾವುದೇ ಅನುಮಾನ ಬರದಂತೆ ಪ್ಯಾಕ್ ಮಾಡಿ ಅದನ್ನು ವಧುವಿಗೆ ಉಡುಗೊರೆಯಾಗಿ ನೀಡಿರುವುದಾಗಿ ಪೊಲೀಸರ ಮುಂದೆ ಆರೋಪಿ ತಪ್ಪೊಪ್ಪಿಕ್ಕೊಂಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net